ಒಂದೇ ಚಾರ್ಜ್‌ನಲ್ಲಿ ಬೆಂಗಳೂರು to ಮೈಸೂರು ಹೋಗಿ ಬರಬಹುದು! 400 ಕಿ.ಮೀ ರೇಂಜ್‌ ಎಲೆಕ್ಟ್ರಿಕ್ ಸ್ಕೂಟರ್

Electric Scooter: ಒಂದೇ ಚಾರ್ಜ್‌ನಲ್ಲಿ ಬೆಂಗಳೂರು–ಮೈಸೂರು ಹೋಗಿ ಬರಬಹುದಾದಷ್ಟು 400 ಕಿಲೋಮೀಟರ್‌ ರೇಂಜ್‌ ನೀಡುವ ಸಿಂಪಲ್ ಎನರ್ಜಿ ಹೊಸ ಜನರೇಶನ್ ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಬಂದಿದೆ.

  • 400 ಕಿ.ಮೀ ರೇಂಜ್‌ ಹೊಂದಿದ ಎಲೆಕ್ಟ್ರಿಕ್ ಸ್ಕೂಟರ್
  • ಬೆಂಗಳೂರು–ಮೈಸೂರು ಹೋಗಿ ಬರಬಹುದಾದ ಬ್ಯಾಟರಿ
  • ಹೊಸ ಜನರೇಶನ್ Simple One Gen 2 ಮತ್ತು Ultra ಮಾದರಿ

Electric Scooter: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆಯೇ, ಭಾರತೀಯ ಸ್ಟಾರ್ಟ್‌ಅಪ್ Simple Energy ತನ್ನ ಹೊಸ ಜನರೇಶನ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. Simple One Gen 2 ಹಾಗೂ Simple One Ultra ಎಂಬ ಎರಡು ಮಾದರಿಗಳು ಈಗ ಅಧಿಕೃತವಾಗಿ ಪರಿಚಯಗೊಂಡಿವೆ.

ಒಂದೇ ಚಾರ್ಜ್‌ನಲ್ಲಿ 400 ಕಿಲೋಮೀಟರ್

ಕಂಪನಿಯ ಪ್ರಕಾರ, ಈ ಸ್ಕೂಟರ್‌ಗಳು ಒಂದೇ ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 400 ಕಿ.ಮೀ (IDC) ರೇಂಜ್‌ ನೀಡುತ್ತವೆ. ಅಂದರೆ, ಬೆಂಗಳೂರಿನಿಂದ ಮೈಸೂರುವರೆಗೆ ಸಂಚರಿಸಿ ಮತ್ತೆ ಹಿಂದಿರುಗುವಷ್ಟು ದೂರವನ್ನು ಸುಲಭವಾಗಿ ಕವರ್ ಮಾಡುವ ಸಾಮರ್ಥ್ಯ ಇದಕ್ಕೆ ಇದೆ. ಇದು ದೇಶದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ರೇಂಜ್‌ ನೀಡುವ ಎಲೆಕ್ಟ್ರಿಕ್ ಸ್ಕೂಟರ್‌ ಎನ್ನಲಾಗಿದೆ.

ಬೆಲೆ ಮತ್ತು ವೇರಿಯಂಟ್ಸ್

Simple One Gen 2 ಸ್ಕೂಟರ್‌ನ ಎಕ್ಸ್-ಶೋರೂಮ್ ಬೆಲೆ ರೂ.1.40 ಲಕ್ಷದಿಂದ ಆರಂಭವಾಗುತ್ತದೆ. ಟಾಪ್ ಸ್ಪೆಕ್‌ Ultra ವೇರಿಯಂಟ್‌ ಬೆಲೆ ರೂ.1.78 ಲಕ್ಷ (ಎಕ್ಸ್-ಶೋರೂಮ್) ಆಗಿದೆ. 3.7 kWh, 4.5 kWh ಮತ್ತು 5 kWh ಎಂಬ ಮೂರು ಬ್ಯಾಟರಿ ಆಯ್ಕೆಗಳು ಲಭ್ಯವಿದ್ದು, ಟಾಪ್ ವೇರಿಯಂಟ್‌ನಲ್ಲಿ ಹೊಸ 5 kWh ಬ್ಯಾಟರಿ ಅಳವಡಿಸಲಾಗಿದೆ.

ವೇಗ ಮತ್ತು ಕಾರ್ಯಕ್ಷಮತೆ

ಈ ಸ್ಕೂಟರ್ ಕೇವಲ 2.77 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಹಿಂದಿನ ಮಾದರಿಗಿಂತ ಹೊಸ ಬ್ಯಾಟರಿ ಸುಮಾರು 4 ಕಿಲೋ ತೂಕ ಕಡಿಮೆ ಇರುವುದರಿಂದ ಉತ್ತಮ ಕಾರ್ಯಕ್ಷಮತೆ ಮತ್ತು ಸ್ಟೆಬಿಲಿಟಿ ದೊರೆಯುತ್ತದೆ.

ಸಾಫ್ಟ್‌ವೇರ್ ಮತ್ತು ಸೆಫ್ಟಿ ಫೀಚರ್ಸ್

Simple One Gen 2 ಹೊಸ Simple OS ಮೇಲೆ ಕಾರ್ಯನಿರ್ವಹಿಸುತ್ತದೆ. ಡ್ರಾಪ್ ಸೇಫ್ ಫೀಚರ್, ಸೂಪರ್ ಹೋಲ್ಡ್, ಪಾರ್ಕಿಂಗ್ ಮೋಡ್, ರಿಯಲ್-ಟೈಮ್ ವೆಹಿಕಲ್ ಸ್ಟೇಟಸ್ ಮುಂತಾದ ಸ್ಮಾರ್ಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ. 7 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಆಟೋ ಬ್ರೈಟ್‌ನೆಸ್ ಸಹ ಇದೆ.

ಡಿಸೈನ್ ಮತ್ತು ಚಾಸಿಸ್ ಅಪ್‌ಗ್ರೇಡ್

ಹೊಸ ಸ್ಕೂಟರ್‌ಗಳು ತೀಕ್ಷ್ಣ ಡಿಸೈನ್‌, ಹೊಸ ಗ್ರಾಫಿಕ್ಸ್ ಮತ್ತು ರೀಡಿಸೈನ್ ಮಾಡಿದ ಮಿರರ್‌ಗಳೊಂದಿಗೆ ಬರುತ್ತವೆ. ನೂತನ ಚಾಸಿಸ್‌ ಬಳಕೆಯಿಂದ 22 ಶೇಕಡಾ ಹೆಚ್ಚು ಬಲ ಮತ್ತು ಸ್ಥಿರತೆ ದೊರೆಯುತ್ತದೆ ಎಂದು ಕಂಪನಿ ಹೇಳಿದೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories