Business News

Gold Rate: ಚಿನ್ನದ ಬೆಲೆ ಇಳಿಕೆ! ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ಲೆಟೆಸ್ಟ್ ಅಪ್‌ಡೇಟ್

Gold Price Today: ಚಿನ್ನ ಹಾಗೂ ಬೆಳ್ಳಿಯ ದರಗಳು ಕೊಂಚ ಕುಸಿದಿವೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹82,090, 24 ಕ್ಯಾರಟ್ ₹89,550. ಬೆಳ್ಳಿ ಕಿಲೋ ದರ ₹1,02,800ಗೆ ಇದೆ.

  • ಚಿನ್ನದ ಬೆಲೆ ₹10, ಬೆಳ್ಳಿಯ ದರದಲ್ಲಿ ₹100 ಇಳಿಕೆ
  • ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ಪ್ರಮುಖ ನಗರಗಳ ದರಗಳು
  • ಚಿನ್ನ ಮತ್ತು ಬೆಳ್ಳಿ ಮುಂಬರುವ ದಿನಗಳಲ್ಲಿ ಏರುಪೇರಿನ ಸಾಧ್ಯತೆ

Gold Price Today: ಇತ್ತೀಚೆಗೆ ಅತಿಹೆಚ್ಚು ದರ ದಾಖಲೆ ಮಾಡಿದ್ದ ಬಂಗಾರ ಹಾಗೂ ಬೆಳ್ಳಿ ಈಗ ಅಲ್ಪ ಮಟ್ಟಿಗೆ ಇಳಿದಿವೆ. ಮಂಗಳವಾರ (ಮಾರ್ಚ್ 18, 2025) ಬೆಳಗ್ಗೆ 6 ಗಂಟೆಗೆ ಬೆಲೆಗಳಲ್ಲಿ ಸಣ್ಣ ಪ್ರಮಾಣದ ಇಳಿಕೆಯಾಗಿದೆ.

ಹೂಡಿಕಾರರು ಹಾಗೂ ಗ್ರಾಹಕರು ಸದಾ ಗಮನ ಹರಿಸುತ್ತಿರುವ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯು ಕೆಲವೇ ದಿನಗಳ ಹಿಂದೆಯಷ್ಟೇ ಗಗನಕ್ಕೆ ಏರಿದ್ದರೂ, ಈಗ ಸ್ವಲ್ಪ ಇಳಿಕೆಯನ್ನು ಕಂಡಿದೆ.

Gold Rate: ಚಿನ್ನದ ಬೆಲೆ ಇಳಿಕೆ! ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ಲೆಟೆಸ್ಟ್ ಅಪ್‌ಡೇಟ್

ಇದನ್ನೂ ಓದಿ: ನಿಮ್ಮ ಹಣ ಮೂರು ಪಟ್ಟು ಹೆಚ್ಚಾಗೋ ಪೋಸ್ಟ್ ಆಫೀಸ್ ಯೋಜನೆ ಇದು

ಮಾರುಕಟ್ಟೆಯಲ್ಲಿನ ಲೆಟೆಸ್ಟ್ ಅಪ್‌ಡೇಟ್ ಪ್ರಕಾರ, 22 ಕ್ಯಾರಟ್ ಬಂಗಾರದ 10 ಗ್ರಾಂ ದರ ₹82,090 ಆಗಿದ್ದರೆ, 24 ಕ್ಯಾರಟ್ ಚಿನ್ನದ (Pure Gold) ದರ ₹89,550ಗೆ ತಲುಪಿದೆ. ₹1,02,800ಗೆ ಬೆಳ್ಳಿ ಕಿಲೋ ದರ ಇಳಿದಿದೆ. ಇದು ನಿನ್ನೆ ದಾಖಲಾಗಿದ್ದ ದರಕ್ಕಿಂತ ₹100 ರೂಪಾಯಿ ಕಡಿಮೆ!

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (Gold Price):

  • ಬೆಂಗಳೂರು – 22K: ₹82,090 | 24K: ₹89,550
  • ಹೈದರಾಬಾದ್ – 22K: ₹82,090 | 24K: ₹89,550
  • ಮುಂಬೈ – 22K: ₹82,090 | 24K: ₹89,550
  • ಚೆನ್ನೈ – 22K: ₹82,090 | 24K: ₹89,550
  • ದಿಲ್ಲಿ – 22K: ₹82,240 | 24K: ₹89,700

ಇದನ್ನೂ ಓದಿ: 3 ಸಾವಿರಕ್ಕೆ ಸಿಗೋ ಈ ಮೇಕೆ ತಳಿ ಸಾಕಾಣಿಕೆ ಮಾಡಿದ್ರೆ ಲಕ್ಷ ಲಕ್ಷ ಆದಾಯ

ಚಿನ್ನದ ಬೆಲೆ

ಬೆಳ್ಳಿಯ ದರ (Silver Price):

  • ಬೆಂಗಳೂರು – ₹1,02,800/ಕಿಲೋ
  • ಹೈದರಾಬಾದ್ – ₹1,11,800/ಕಿಲೋ
  • ಮುಂಬೈ – ₹1,02,800/ಕಿಲೋ
  • ಚೆನ್ನೈ – ₹1,11,800/ಕಿಲೋ

ಇವೀಗ ಸ್ವಲ್ಪ ಇಳಿದಿದ್ರೂ, ಮುಂದಿನ ದಿನಗಳಲ್ಲಿ ಬಂಗಾರ-ಬೆಳ್ಳಿಯ ದರ ಮತ್ತೆ ಏರಬಹುದು ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿ ಇದೆ. ಹೂಡಿಕಾರರು, ಗ್ರಾಹಕರು ಹೊಸ ದರಗಳ ಬಗ್ಗೆ ಖರೀದಿಗೂ ಮುನ್ನ ಪರಿಶೀಲಿಸಬೇಕು.

ಇದನ್ನೂ ಓದಿ: ಮನೆಯಲ್ಲೇ ಕೂತ್ಕೊಂಡು ಆನ್ಲೈನ್‌ನಲ್ಲೆ ಹಣ ಸಂಪಾದಿಸಿ! ನಿಮ್ಮತ್ರ ಫೋನ್ ಇದ್ರೆ ಸಾಕು

22K ಮತ್ತು 24K ಬಂಗಾರ

Gold Investment

24K ಬಂಗಾರ ಶುದ್ಧತೆಯ ಅತ್ಯುತ್ತಮ ರೂಪವಾಗಿದ್ದು 99.9% ಶುದ್ಧತೆ ಹೊಂದಿರುತ್ತದೆ. ಇದು ಅತ್ಯಂತ ಮೃದು (soft) ಆಗಿರುವುದರಿಂದ ಚಿನ್ನಾಭರಣ ತಯಾರಿಕೆಗೆ ಸೂಕ್ತವಲ್ಲ, ಆದರೆ ಹೂಡಿಕೆಗೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.

22K ಬಂಗಾರದಲ್ಲಿ 91.6% ಬಂಗಾರ ಮತ್ತು ಉಳಿದ 8.4% ಕಪ್ಪರ್, ಬೆಳ್ಳಿಯಂತಹ ಲೋಹಗಳ ಮಿಶ್ರಣವಿರುತ್ತದೆ. ಇದರಿಂದ 22K ಬಂಗಾರಕ್ಕೆ ಹೆಚ್ಚುವರಿ ಗಟ್ಟಿತನ ಸಿಗುತ್ತದೆ, ಅದು ಚಿನ್ನಾಭರಣ (jewelry) ತಯಾರಿಕೆಗೆ ಹೆಚ್ಚು ಸೂಕ್ತವಾಗಿದೆ.

ಇದನ್ನೂ ಓದಿ: ಇನ್ಮುಂದೆ EMI ಕಟ್ಟೋದು ಮಿಸ್ ಆದ್ರೆ, ಭವಿಷ್ಯದಲ್ಲಿ ಯಾವುದೇ ಲೋನ್ ಸಿಗಲ್ಲ!

ಬಂಗಾರ ಹೂಡಿಕೆ (Gold Investment) ಮಾಡುವವರು ಶುದ್ಧತೆ ಮತ್ತು ಸ್ಥಿರತೆ ಅವಲಂಬಿಸಿ 24K ಬಂಗಾರವನ್ನು ಆಯ್ಕೆ ಮಾಡುತ್ತಾರೆ, ವಿಶೇಷವಾಗಿ ಬಾರ್ (gold bars) ಮತ್ತು ನಾಣ್ಯಗಳ ರೂಪದಲ್ಲಿ.

ಆದರೆ ಚಿನ್ನಾಭರಣದ ಮೇಲೆ ಹೂಡಿಕೆ ಮಾಡಲು 22K ಬಂಗಾರ ಉತ್ತಮ ಆಯ್ಕೆಯಾಗಬಹುದು, ಏಕೆಂದರೆ ಇದು ಉತ್ತಮ ಮೌಲ್ಯ ಮತ್ತು ದೈನಂದಿನ ಬಳಕೆಗೂ ಅನುಕೂಲ. ಹೂಡಿಕೆ ಮಾಡುವ ಮೊದಲು, ಮಾರುಕಟ್ಟೆ ಬೆಲೆಗಳು, ತೆರಿಗೆ, ಮತ್ತು ಮರು ಮಾರಾಟ ಮೌಲ್ಯ ಕುರಿತಾಗಿ ಪರಿಗಣನೆ ಮಾಡುವುದು ಮುಖ್ಯ.

Small Dip in Gold and Silver Prices

English Summary

Our Whatsapp Channel is Live Now 👇

Whatsapp Channel

Related Stories