Home Loan: ಹೋಮ್ ಲೋನ್ ಬೇಗ ಕ್ಲಿಯರ್ ಮಾಡಲು ಸ್ಮಾರ್ಟ್ ಟ್ರಿಕ್! ಸಾಲ ಬೇಗ ತೀರಿಸಲು ಐಡಿಯಾ
Home Loan: ಸರಿಯಾದ ಫೈನಾನ್ಷಿಯಲ್ ಪ್ಲಾನಿಂಗ್ ಮಾಡಿದರೆ ಹೋಮ್ ಲೋನ್ ಭಾರವಾಗುವುದಿಲ್ಲ. ಸರಿಯಾದ ಯೋಜನೆಯಿಂದ ಸಾಲ ಬೇಗ ತೀರಿಸಿ ಲಕ್ಷಾಂತರ ಲಾಭ ಪಡೆಯಬಹುದು ಎಂದು ಹಣಕಾಸು ತಜ್ಞರು ಹೇಳುತ್ತಿದ್ದಾರೆ.

Home Loan: ಸ್ವಂತ ಮನೆ ಹೊಂದುವುದು ಬಹುತೇಕ ಜನರ ಜೀವನದ ದೊಡ್ಡ ಕನಸು. ಈ ಕನಸು ಸಾಕಾರವಾಗಲು ಬಹುತೇಕರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಹೋಮ್ ಲೋನ್ (Home Loan) ಪಡೆಯುತ್ತಾರೆ. ಸಾಮಾನ್ಯವಾಗಿ 15 ರಿಂದ 20 ವರ್ಷಗಳ ಕಾಲ EMI ರೂಪದಲ್ಲಿ ಹಣ ಪಾವತಿಸಬೇಕಾಗುತ್ತದೆ.
ಆದರೆ ಹಲವರು ಮನೆ ಖರೀದಿಸಿದ ನಂತರ ಸಾಲದ ಒತ್ತಡ ಹೆಚ್ಚಾಗಿದೆ ಎಂದು ಆತಂಕಪಡುತ್ತಾರೆ. ಹಣಕಾಸು ತಜ್ಞರ ಪ್ರಕಾರ, ಸರಿಯಾದ ಯೋಜನೆ ಮತ್ತು ಸ್ಮಾರ್ಟ್ ಹೂಡಿಕೆ ಮಾಡಿದರೆ ಹೋಮ್ ಲೋನ್ ಭಾರವಾಗದೆ, ಅದೇ ಒಂದು ಉತ್ತಮ ಆರ್ಥಿಕ ಅವಕಾಶವಾಗಬಹುದು.
ದೀರ್ಘಾವಧಿ ಲೋನ್ ಆಯ್ಕೆ ಮಾಡುವುದು ಹೇಗೆ ಸಹಾಯಕ?
ಬಹುತೇಕ ಜನರು ಬಡ್ಡಿ ಕಡಿಮೆ ಆಗಲಿ ಎಂಬ ಕಾರಣಕ್ಕೆ 15 ವರ್ಷಗಳ ಅವಧಿಯ ಹೋಮ್ ಲೋನ್ ಆಯ್ಕೆ ಮಾಡುತ್ತಾರೆ. ಆದರೆ ತಜ್ಞರ ಸಲಹೆಯಂತೆ 20 ಅಥವಾ 25 ವರ್ಷಗಳ ಅವಧಿಯನ್ನು ಆಯ್ಕೆ ಮಾಡುವುದು ಕೆಲವೊಮ್ಮೆ ಹೆಚ್ಚು ಲಾಭಕಾರಿ.
ಉದಾಹರಣೆಗೆ, ₹50 ಲಕ್ಷ ಸಾಲ ಪಡೆದಿದ್ದರೆ 15 ವರ್ಷಗಳ ಅವಧಿಗೆ ತಿಂಗಳಿಗೆ ಸುಮಾರು ₹49,000 EMI ಬರುತ್ತದೆ. ಅದೇ 20 ವರ್ಷಗಳ ಅವಧಿಗೆ EMI ಸುಮಾರು ₹43,000 ಆಗುತ್ತದೆ. ಅಂದರೆ ತಿಂಗಳಿಗೆ ಸುಮಾರು ₹5,800 ವ್ಯತ್ಯಾಸ ಉಳಿಯುತ್ತದೆ.
EMI ಉಳಿಕೆಯನ್ನು ಹೂಡಿಕೆ ಮಾಡಿದರೆ ಏನು ಲಾಭ?
ಈ ತಿಂಗಳ EMI ಉಳಿಕೆ ಹಣವನ್ನು ಖರ್ಚು ಮಾಡುವ ಬದಲು ಮ್ಯೂಚುವಲ್ ಫಂಡ್‌ನಲ್ಲಿ SIP ರೂಪದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗಬಹುದು. ಉದಾಹರಣೆಗೆ, ತಿಂಗಳಿಗೆ ₹5,800ನ್ನು ಸುಮಾರು 12% ವಾರ್ಷಿಕ ಲಾಭ ನೀಡುವ ಇಂಡೆಕ್ಸ್ ಫಂಡ್‌ನಲ್ಲಿ 15 ವರ್ಷ ಹೂಡಿಕೆ ಮಾಡಿದರೆ ಸುಮಾರು ₹32 ಲಕ್ಷದವರೆಗೆ ಹಣ ಸೇರುವ ಸಾಧ್ಯತೆ ಇದೆ.
ಈ ಮೊತ್ತವನ್ನು ಬಳಸಿಕೊಂಡು ಉಳಿದಿರುವ ಹೋಮ್ ಲೋನ್ ಅನ್ನು ಒಮ್ಮೆಯೇ ತೀರಿಸಬಹುದು. ಇದರಿಂದ ಸಾಲ ಮುಗಿದ ಬಳಿಕವೂ ಸುಮಾರು ₹10 ರಿಂದ ₹11 ಲಕ್ಷದವರೆಗೆ ಹೆಚ್ಚುವರಿ ಲಾಭ ಕೈಯಲ್ಲಿ ಉಳಿಯಬಹುದು.
ಎಮರ್ಜೆನ್ಸಿ ಫಂಡ್ ಇರಬೇಕು
ಮನೆ ಖರೀದಿಸುವ ಮೊದಲು ಉದ್ಯೋಗ ಸ್ಥಿರತೆ ಮತ್ತು ಆರ್ಥಿಕ ಸುರಕ್ಷತೆ ಬಗ್ಗೆ ಯೋಚಿಸುವುದು ಮುಖ್ಯ. ಅಕಸ್ಮಾತ್ ಆದಾಯ ಕಡಿಮೆಯಾದರೂ EMI ಪಾವತಿಸಲು ಸಾಧ್ಯವಾಗುವಂತೆ ಎಮರ್ಜೆನ್ಸಿ ಫಂಡ್ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆ ಇರಬೇಕು.
ಹಣಕಾಸು ತಜ್ಞರು ಹೇಳುವಂತೆ, ಮನೆ ಖರೀದಿ ಯೋಜನೆಯ ಜೊತೆಗೆ ಉಳಿತಾಯ ಮತ್ತು ಹೂಡಿಕೆ ಯೋಜನೆ ಕೂಡ ಇರಬೇಕು. ಇದರಿಂದ ಸಾಲದ ಒತ್ತಡ ಕಡಿಮೆಯಾಗುತ್ತದೆ.
ಹೆಚ್ಚಿನವರು ಮನೆ ಖರೀದಿಸಲು ತಮ್ಮ ನಿವೃತ್ತಿ ಉಳಿತಾಯವನ್ನು ಬಳಸುತ್ತಾರೆ. ಆದರೆ ಇದು ದೀರ್ಘಾವಧಿಯಲ್ಲಿ ಸಮಸ್ಯೆ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಸರಿಯಾದ ಯೋಜನೆ ಮತ್ತು ನಿಯಂತ್ರಿತ ಹಣಕಾಸು ನಿರ್ವಹಣೆಯ ಮೂಲಕ ಹೋಮ್ ಲೋನ್ ಕೂಡ ಆರ್ಥಿಕ ಲಾಭದ ಮಾರ್ಗವಾಗಬಹುದು.



