10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾಧನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ
Education Scholarship : ಇದೀಗ 10ನೇ ತರಗತಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಕ್ಕಾಗಿ ವಿದ್ಯಾಧನ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ
Education Scholarship : ಹಲವಾರು ವಿದ್ಯಾರ್ಥಿಗಳಿಗೆ ಓದಬೇಕು ಎಂದು ಆಸೆ ಇದ್ದರು ಸಹ, ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಶಿಕ್ಷಣ ಮುಂದುವರೆಸಲು ಸಾಧ್ಯ ಆಗಿರುವುದಿಲ್ಲ. ಅಂಥ ವಿದ್ಯಾರ್ಥಿಗಳ ಕನಸು ನನಸಾಗಬೇಕು ಎಂದು ಹಲವು ಸಂಸ್ಥೆಗಳು ಸ್ಕಾಲರ್ಶಿಪ್ ನೀಡಿ ಸಪೋರ್ಟ್ ಮಾಡುತ್ತದೆ.
ಇದೀಗ 10ನೇ ತರಗತಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಕ್ಕಾಗಿ ವಿದ್ಯಾಧನ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ..
ಹೀಗೆ ಮಾಡಿ ಸಾಕು, ನಿಮ್ಮ ಕ್ರೆಡಿಟ್ ಸ್ಕೋರ್ 800 ದಾಟುವುದು ಖಚಿತ! ಈ ಸರಳ ಸಲಹೆಗಳನ್ನು ಅನುಸರಿಸಿ
ಸರೋಜಿನಿ ದಾಮೋದರನ್ ವಿದ್ಯಾಧನ್ ಸ್ಕಾಲರ್ಶಿಪ್
ಈ ಸ್ಕಾಲರ್ಶಿಪ್ ಅನ್ನು ಸರೋಜಿನಿ ದಾಮೋದರನ್ ಫೌಂಡೇಶನ್ ಸಂಸ್ಥೆಯಿಂದ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅರ್ಥಿಕವಾಗಿ ಸಹಾಯ ಮಾಡಿ, ಶಿಕ್ಷಣ ಮುಂದುವರೆಸಲು ಸಹಾಯ ಮಾಡುತ್ತದೆ. ಈ ಸ್ಕಾಲರ್ಶಿಪ್ ಅಪ್ಲೈ ಮಾಡಬೇಕು ಎಂದರೆ, ಆ ವಿದ್ಯಾರ್ಥಿ 2023ನೇ ಸಾಲಿನಲ್ಲಿ 10ನೇ ತರಗತಿ ಪಾಸ್ ಆಗಿರಬೇಕು, ಪ್ರಸ್ತುತ ಪಿಯುಸಿ ಓದುತ್ತಿರಬೇಕು. ಈಗ ಪಿಯುಸಿ ಓದುತ್ತಿದ್ದು, ಅವರ ಮುಂದಿನ ಶಿಕ್ಷಣಕ್ಕೆ ನೀಡಲಿದೆ ವಿದ್ಯಾಧನ್ ಸ್ಕಾಲರ್ಶಿಪ್.
ಸ್ಕಾಲರ್ಶಿಪ್ ಸಿಗುವ ವಿದ್ಯಾರ್ಥಿಗಳಿಗೆ ಎಷ್ಟು ಮೊತ್ತ ಹಣ ಸಹಾಯ ಸಿಗುತ್ತದೆ? ಅಪ್ಲೈ ಮಾಡುವುದು ಹೇಗೆ? ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಕೆಗಳು ಬೇಕು ಎಂದು ಸಂಪೂರ್ಣ ಮಾಹಿತಿ ತಿಳಿಯೋಣ..
ವಿದ್ಯಾಧನ್ ಸ್ಕಾಲರ್ಶಿಪ್ ಗೆ ಸಿಗುವ ಹಣ:
ಕಷ್ಟದಲ್ಲಿ ಬಡತನದಲ್ಲಿ ಇರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ನೀಡುತ್ತಿರುವ ಸ್ಕಾಲರ್ಶಿಪ್ ನಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹10,000 ರೂಪಾಯಿ ಸ್ಕಾಲರ್ಶಿಪ್ ಸಿಗಲಿದೆ.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮೇಲೆ 1.35 ಲಕ್ಷದವರೆಗೆ ರಿಯಾಯಿತಿ, ಈ ಆಫರ್ ಈ ತಿಂಗಳ ಅಂತ್ಯದವರೆಗೆ ಮಾತ್ರ
ಬೇಕಿರುವ ಅರ್ಹತೆ
*ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ವಿದ್ಯಾರ್ಥಿ ನಮ್ಮ ರಾಜ್ಯದವರೇ ಆಗಿರಬೇಕು
*10ನೇ ತರಗತಿಯಲ್ಲಿ ಪಾಸ್ ಆಗಿರುವುದು 2023ನೇ ವರ್ಷದಲ್ಲಿ ಆಗಿರಬೇಕು
*ವಿದ್ಯಾರ್ಥಿಗೆ 10ನೇ ತರಗತಿಯಲ್ಲಿ 90% ಗಿಂತ ಹೆಚ್ಚು ಮಾರ್ಕ್ಸ್ ಅಥವಾ 9CGPA ಗಿಂತ ಹೆಚ್ಚು ಅಂಕ ಬಂದಿರಬೇಕು. ಅಕಸ್ಮಾತ್ ವಿದ್ಯಾರ್ಥಿ ಅಂಗವಿಕಲ ಆಗಿದ್ದಲ್ಲಿ 75% ಅಥವಾ 7.5 CGPA ಗಿಂತ ಹೆಚ್ಚು ಮಾರ್ಕ್ಸ್ ಹೊಂದಿರಬೇಕು
*ವಿದ್ಯಾರ್ಥಿಯ ಮನೆಯ ವಾರ್ಷಿಕ ಆದಾಯ ₹2,00,000 ಕ್ಕಿಂತ ಕಡಿಮೆ ಇರಬೇಕು
ಅರ್ಜಿ ಸಲ್ಲಿಕೆಗೆ ಬೇಕಿರುವ ದಾಖಲೆಗಳು
*ವಿದ್ಯಾರ್ಥಿಯ ಪಾಸ್ ಪೋರ್ಟ್ ಸೈಜ್ ಫೋಟೋ
*10ನೇ ತರಗತಿ ಮಾರ್ಕ್ಸ್ ಕಾರ್ಡ್
*ಒಂದು ವೇಳೆ ವಿದ್ಯಾರ್ಥಿ ಅಂಗವಿಕಲರಾಗಿದ್ದರೆ, ಅವರ ಅಂಗವಿಕಲ ವೈಫಲ್ಯ ಪ್ರಮಾಣಪತ್ರ
*ಇನ್ಕಮ್ ಸರ್ಟಿಫಿಕೇಟ್
*ಇಮೇಲ್ ಐಡಿ
ಹೋಮ್ ಲೋನ್, ಕಾರ್ ಲೋನ್ ಸೇರಿದಂತೆ ಯಾವುದೇ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಭರ್ಜರಿ ಸುದ್ದಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅರ್ಹತೆಯ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು, vidyadhan.org ಈ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ SDF Vidya App ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಪಡೆಯಲು ಈ ಮೇಲ್ ಐಡಿ
vidyadhan.karnataka@sdfoundationindia.com ಅಥವಾ 9663517131 ಈ ಫೋನ್ ನಂಬರ್ ಅನ್ನು ಸಂಪರ್ಕಿಸಿ.
Students who pass class 10 will get Vidyadhan Education Scholarship