ರೈತರಿಗೆ, ನಿರುದ್ಯೋಗಿಗಳಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್, ಕುರಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ 4ಲಕ್ಷ! ಅರ್ಜಿ ಹಾಕಿದ್ರಾ?

ಪ್ರಾಣಿ ಸಾಕಾಣಿಕೆ ಮಾಡುವ ಎಲ್ಲಾ ಜನರಿಗೆ ರಾಜ್ಯ ಸರ್ಕಾರವು ಆರ್ಥಿಕವಾಗಿ ಸಹಾಯ ಮಾಡುವ ನಿರ್ಧಾರ ಮಾಡಿದ್ದು, ಈ ಬಗ್ಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ನಮ್ಮ ರಾಜ್ಯದಲ್ಲಿ ಹಲವು ಜನರು ರೈತರಿದ್ದಾರೆ, ಹಾಗೆಯೇ ಅದೆಷ್ಟೋ ಜನ ನಿರುದ್ಯೋಗಿಗಳಿದ್ದಾರೆ. ಕೆಲವರಿಗೆ ಓದಿದ್ದರು ಸಹ ಒಳ್ಳೆಯ ಕೆಲಸ ಸಿಕ್ಕಿರುವುದಿಲ್ಲ. ಅಂಥವರಿಗೆ ಮತ್ತು ರೈತರಿಗೆ ಅನುಕೂಲವಾಗಬೇಕು, ಅವರಿಗೆ ಬದುಕು ನಡೆಸಲು ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ರಾಜ್ಯ ಸರ್ಕಾರ (State Government) ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದೆ.

ನಮ್ಮ ದೇಶದಲ್ಲಿ ಕೃಷಿ (Agriculture) ಜೊತೆಗೆ ಪ್ರಾಣಿ ಸಾಕಾಣಿಕೆ (Animal Farming) ಮಾಡುವ ಜನರು ಕೂಡ ಹೆಚ್ಚು ಜನರಿದ್ದಾರೆ. ಈ ಕೆಲಸ ಮಾಡುವವರಿಗೆ ಉತ್ತಮ ಲಾಭ ಮತ್ತು ಭದ್ರತೆ ಯಾವಾಗಲೂ ಇರುತ್ತದೆ ಎಂದು ಹೇಳಲು ಆಗೋದಿಲ್ಲ.. ಹಾಗಾಗಿ ಪ್ರಾಣಿ ಸಾಕಾಣಿಕೆ ಮಾಡುವ ಎಲ್ಲಾ ಜನರಿಗೆ ರಾಜ್ಯ ಸರ್ಕಾರವು ಆರ್ಥಿಕವಾಗಿ ಸಹಾಯ ಮಾಡುವ ನಿರ್ಧಾರ ಮಾಡಿದ್ದು, ಈ ಬಗ್ಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಅದೇನೆಂದರೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಮ್ಮ ರಾಜ್ಯದಲ್ಲಿ ಪ್ರಾಣಿ ಸಾಕಾಣಿಕೆ ಮಾಡುತ್ತಿರುವ ಎಲ್ಲರಿಗೂ ಕೂಡ ಹಣಕಾಸಿನ ವಿಷಯದಲ್ಲಿ ಸಹಾಯ ಮಾಡಬೇಕು ಎಂದು ಯೋಜನೆಯೊಂದನ್ನು ತಂದಿದ್ದಾರೆ. ಪ್ರಾಣಿ ಸಾಕಾಣಿಕೆ ಮಾಡುವ ಎಲ್ಲರೂ ಕೂಡ ಇದರ ಲಾಭ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕೆಲವು ದಿನಗಳ ಸಮಯ ಮಾತ್ರ ಉಳಿದಿದೆ.

ರೈತರಿಗೆ, ನಿರುದ್ಯೋಗಿಗಳಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್, ಕುರಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ 4ಲಕ್ಷ! ಅರ್ಜಿ ಹಾಕಿದ್ರಾ? - Kannada News

ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ಮಾಹಿತಿ ತಿಳಿಸಿಕೊಡುತ್ತೇವೆ ಲೇಖನವನ್ನು ಪೂರ್ತಿಯಾಗಿ ಓದಿ.. ನಮ್ಮ ರಾಜ್ಯದಲ್ಲಿ ನಿರುದ್ಯೋಗ (Unemployment) ಇರಬಾರದು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಾಣಿ ಸಾಕಾಣಿಕೆ ಮಾಡಿ ಹಣ ಸಂಪಾದನೆ ಮಾಡಬಹುದು, ಪ್ರಾಣಿ ಸಾಕಾಣಿಕೆ ವಿಶೇಷವಾಗಿ ಕುರಿ ಸಾಕಾಣಿಕೆ ಮಾಡುತ್ತಿರುವ ಗಂಡಸರು ಮತ್ತು ಹೆಂಗಸರು ಇಬ್ಬರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಬಹುದು.

ಇದಕ್ಕಾಗಿ ಮೊದಲು ನೀವು ಅರ್ಜಿ ಸಲ್ಲಿಸಬೇಕು.. ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿದ್ದು, ಅದನ್ನು ತಿಳಿದು ಅರ್ಜಿ ಸಲ್ಲಿಸಬೇಕು. ಈ ಯೋಜನೆಯ ಮೂಲಕ ಕುರಿ ಸಾಕಾಣಿಕೆ ಮಾಡುವವರಿಗೆ ಸಾಕಾಣಿಕೆ ಘಟಕ ಶುರು ಮಾಡಲು ಸಹಾಯ ಮಾಡಲಾಗುತ್ತದೆ.. ಕುರಿ ಅಥವಾ ಕುರಿಯಿಂದ ಸಿಗುವ ಉಣ್ಣೆಯ ಘಟಕೆ ಸ್ಥಾಪನೆ ಮಾಡುವುದಕ್ಕಾಗಿ ಸರ್ಕಾರದಿಂದ ಸಹಾಯಧನ ಸಿಗುತ್ತದೆ.

ಇಲ್ಲಿ ನಿಮಗೆ ಘಟಕೆ ಸ್ಥಾಪನೆಗೆ ಸುಮಾರು 4 ಲಕ್ಷ ರೂಪಾಯಿಯವರೆಗು ಸಹಾಯ ಧನ ಸಿಗುತ್ತದೆ. ರೈತರು ಕೂಡ ಈ ಸಹಾಯಕ್ಕೆ ಅರ್ಹರಾಗಿದ್ದು, ಕುರಿಗಳನ್ನು ಸಾಕುವ ರೈತರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಬಹದು..ಇದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31.. ಅರ್ಜಿ ಸಲ್ಲಿಸಲು ನೀವು ನಿಮ್ಮ ಜಿಲ್ಲೆಯಲ್ಲಿರುವ ಕರ್ನಾಟಕ ಕುರಿ ಸಹಾಯಕ ನಿಗಮಕ್ಕೆ ಹೋಗಬೇಕಾಗುತ್ತದೆ.

subsidy for sheep farming from state government

ಇದಕ್ಕಾಗಿ ಬೇಕಿರುವ ಎಲ್ಲಾ ದಾಖಲೆಗಳ ಜೊತೆಗೆ ಅರ್ಜಿಯನ್ನು ಭರ್ತಿ ಮಾಡಿ, ಇಲಾಖೆಯಲ್ಲಿ ಸಲ್ಲಿಸಬೇಕು. ನಂತರ ನಿಮಗೆ 4 ಲಕ್ಷ ಸಹಾಯಧನ ಸಿಗುತ್ತದೆ. ಕುರಿ ಸಾಕಾಣಿಕೆಯಲ್ಲಿ ಆಸಕ್ತಿ ಇರುವ ಮತ್ತು ಕುರಿ ಸಾಕಾಣಿಕೆ ಮಾಡುತ್ತಿರುವ ಪ್ರತಿಯೊಬ್ಬರು ಕೂಡ ಈ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ತಿಳಿಸಿದ್ದಾರೆ. ಜುಲೈ 31ರ ಸಂಜೆ 6ಗಂಟೆ ಒಳಗೆ ಆಸಕ್ತಿ ಇರುವ ಜನರು ಅರ್ಜಿ ಸಲ್ಲಿಸಬೇಕು.

Subsidy for sheep farming from state government

Follow us On

FaceBook Google News

Subsidy for sheep farming from state government