ಹೆಣ್ಣುಮಕ್ಕಳ ತಂದೆ ತಾಯಿಗೆ ಸಿಹಿ ಸುದ್ದಿ! 300 ಹೂಡಿಕೆ ಮಾಡಿ ಪಡೆಯಿರಿ 50 ಲಕ್ಷ, ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಹೊಸ ಸ್ಕೀಮ್
Sukanya Samriddhi Yojana : ಹೆಣ್ಣುಮಕ್ಕಳು ಇರುವ ತಂದೆ ತಾಯಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಇದರಿಂದ ಹೆಚ್ಚು ಲಾಭಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಶುರು ಮಾಡಿರುವ ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ
ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣುಮಕ್ಕಳ ಪರವಾಗಿ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿವೆ. ಹೆಣ್ಣುಮಕ್ಕಳಿಗಾಗಿ ಹಲವು ಯೋಜನೆಗಳನ್ನು (Govt Schemes) ಜಾರಿಗೆ ತಂದಿವೆ.
ಹೆಣ್ಣುಮಕ್ಕಳ ಸಬಲೀಕರಣ ಬಹಳ ಮುಖ್ಯ, ಹೆಣ್ಣು ಕಲಿತು ಇಂಡಿಪೆಂಡೆಂಟ್ ಆಗಿದ್ದರೆ, ಆಕೆಯ ಮನೆ ಕೂಡ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಹಾಗಾಗಿ ಸರ್ಕಾರ ಹೆಣ್ಣುಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ತರುತ್ತದೆ.
ಇದೀಗ ಹೆಣ್ಣುಮಕ್ಕಳನ್ನು ಹೊಂದಿರುವವರಿಗೆ ಒಂದು ಯೋಜನೆಯ ಬಗ್ಗೆ ತಿಳಿಸುತ್ತೇವೆ. ನಿಮ್ಮ ಮಗುವಿನ ವಿದ್ಯಾಭ್ಯಾಸ (Education) ಮತ್ತು ಮದುವೆ (Marriage) ಎರಡಕ್ಕೂ ಕೂಡ ಈ ಯೋಜನೆ ಒಳ್ಳೆಯ ರೀತಿಯಲ್ಲಿ ಸಹಾಯ ಮಾಡುತ್ತದೆ.
ಈ ಕೋಳಿ ತಳಿಗೆ ಭರ್ಜರಿ ಡಿಮ್ಯಾಂಡ್ ಗುರು! 50 ಸಾವಿರ ಖರ್ಚು ಮಾಡಿದ್ರೆ ಪ್ರತಿ ತಿಂಗಳು 1 ಲಕ್ಷ ಲಾಭ
ಇದರಿಂದಾಗಿ ಹೆಣ್ಣುಮಕ್ಕಳ ವಿಷಯದಲ್ಲಿ ತಂದೆ ತಾಯಿಯರು ಕಷ್ಟಪಡುವ ಅಗತ್ಯವಿಲ್ಲ. ಹೆಣ್ಣುಮಕ್ಕಳ ಸಬಲೀಕರಣ ಕೂಡ ನಡೆಯುತ್ತದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಹೆಣ್ಣುಮಕ್ಕಳಿಗಾಗಿ ಹೊಸ ಹೂಡಿಕೆ ಯೋಜನೆಯೊಂದನ್ನು (Savings Scheme) ಶುರು ಮಾಡಿದೆ.
ಹೆಣ್ಣುಮಕ್ಕಳು ಇರುವ ತಂದೆ ತಾಯಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಇದರಿಂದ ಹೆಚ್ಚು ಲಾಭಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಶುರು ಮಾಡಿರುವ ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)..
ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ನಿಮಗೆ ಹೆಣ್ಣುಮಗು ಜನಿಸಿದ ಸಮಯದಿಂದಲೇ ಹೂಡಿಕೆ ಶುರು ಮಾಡಬಹುದು. ದೇಶದ ಸಾಕಷ್ಟು ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಮಧ್ಯಮ ವರ್ಗದ ಜನರು ಹೆಣ್ಣುಮಕ್ಕಳನ್ನು ಬೆಳೆಸಲು, ಓದಿಸಲು, ಮದುವೆ ಮಾಡಲು ಆರ್ಥಿಕವಾಗಿ ಕಷ್ಟಪಡುವುದು ಬೇಡ ಎಂದು ಸರ್ಕಾರವು ಈ ಥರದ ತೀರ್ಮಾನ ತೆಗೆದುಕೊಂಡಿದೆ. ಈ ವರ್ಗದ ಜನರಿಗೆ, ಈ ಕುಟುಂಬಗಳಲ್ಲಿ ಜನಿಸುವ ಹೆಣ್ಣುಮಕ್ಕಳಿಗೆ ಹಣಕಾಸಿನ ವಿಷಯದಲ್ಲಿ ಸಹಾಯ ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ ಆಗಿದೆ. ಹಾಗಾಗಿ ಮಧ್ಯಮ ವರ್ಗದ ಜನರು ತಮಗೆ ಹೆಣ್ಣುಮಗು ಜನಿಸಿದ ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು.
ಜಸ್ಟ್ ₹2 ಸಾವಿರಕ್ಕೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್, ಕಿ.ಮೀ ಗೆ ಕೇವಲ 15 ಪೈಸೆ ಖರ್ಚು! ಖರೀದಿಗೆ ಮುಗಿಬಿದ್ದ ಜನ
ಇದರಿಂದ ಹೆಣ್ಣುಮಗುವಿನ ಭವಿಷ್ಯವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಲು ಸಾಧ್ಯವಾಗುತ್ತದೆ. ಇದು ಬಡವರಿಗೆ ಮಧ್ಯಮವರ್ಗದ ಜನರಿಗೆ ತಂದಿರುವ ಯೋಜನೆ ಆಗಿದೆ, ಈ ಯೋಜನೆಯ ಮೂಲಕ ನಿಮ್ಮ ಹೆಣ್ಣುಮಗುವಿನ ಶಿಕ್ಷಣಕ್ಕೆ ಮತ್ತು ಮದುವೆಗೆ ಸಹಾಯ ಆಗುತ್ತದೆ.
ಇಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡುವುದಕ್ಕೆ ಶುರು ಮಾಡಿ, ಅದರ ಮೂಲಕ 50 ಲಕ್ಷ ರೂಪಾಯಿವರೆಗು ರಿಟರ್ನ್ಸ್ ಪಡೆಯಬಹುದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣ, ಪೂರ್ತಿ ಸುರಕ್ಷಿತವಾಗಿ ಇರುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನಿಮಗೆ ಬರೋಬ್ಬರಿ 8% ಬಡ್ಡಿದರ ಸಿಗುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮಗುವಿಗೆ ವಯಸ್ಸಿನ ಮಿತಿ ಇಡಲಾಗಿದ್ದು, ನಿಮ್ಮ ಮಗುವಿಗೆ 10 ವರ್ಷ ಅಥವಾ 10 ವರ್ಷದ ಒಳಗೆ ಇರಬೇಕು.
ಕೇವಲ ₹50 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ! ರೆಟ್ರೋ ಲುಕ್, 100 ಕಿಲೋಮೀಟರ್ ಮೈಲೇಜ್
10 ವರ್ಷ ಮೇಲ್ಪಟ್ಟಿರುವ ಹೆಣ್ಣುಮಗುವಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಶುರು ಮಾಡಲು ಸಾಧ್ಯವಿಲ್ಲ. ಹೆಣ್ಣುಮಗು ಹುಟ್ಟಿದ್ದ ಹಾಗೆಯೇ ಈ ಖಾತೆ ಶುರು ಮಾಡಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣುಮಗು ಇದ್ದು, ನೀವು ಇನ್ನು ಈ ಖಾತೆ ಶುರು ಮಾಡಿಲ್ಲ ಎಂದರೆ ಇಂದೇ ಶುರು ಮಾಡಬಹುದು.
ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಮೊದಲ ಅಧಿಕಾರದ ಸಮಯದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಲ್ಲಿ ಮಿನಿಮಮ್ 150 ರೂಪಾಯಿ ಹೂಡಿಕೆ ಮಾಡಬಹುದು. ಮ್ಯಾಕ್ಸಿಮಮ್ 1.50 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ ನೀವು ದಿನಕ್ಕೆ 300 ರೂಪಾಯಿ ಹೂಡಿಕೆ ಮಾಡಿದರೆ, ವರ್ಷಕ್ಕೆ ₹1,11,370 ರೂಪಾಯಿ ಹೂಡಿಕೆ ಮಾಡಬಹುದು. ಇದರ ಮೇಲೆ 8% ಬಡ್ಡಿ ಸಿಗಲಿದ್ದು, ನಿಮ್ಮ ಮಗುವಿನ ವಯಸ್ಸು 21 ವರ್ಷ ಆದಾಗ, ಮೆಚ್ಯುರಿಟಿ ನಂತರ 50 ಲಕ್ಷ ರೂಪಾಯಿ ನಿಮ್ಮ ಕೈಸೇರುವ ಮೂಲಕ ಭಾರಿ ಲಾಭ ಪಡೆಯುತ್ತದೆ.
Sukanya Samriddhi Yojana Benefits Details