ನಮ್ಮ ಸರ್ಕಾರದ ಟೆಲಿಕಾಂ ಸಂಸ್ಥೆ ಭಾರತೀಯ ಸಂಚಾರ ನಿಗಮ ನಿಯಮಿತ ಸಂಸ್ಥೆ ಆಗಿದೆ. ಇದು ಬಿಎಸ್‌ಎನ್‌ಎಲ್. ಈ ಸಂಸ್ಥೆಯು ಹಲವು ವರ್ಷಗಳಿಂದ ಟೆಲಿಕಾಂ ಸೇವೆಗಳನ್ನು ನೀಡುತ್ತಿದೆ ಆದರೂ ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆದಿಲ್ಲ. BSNL ನಲ್ಲಿ ಅತೀಕಡಿಮೆ ಬೆಲೆಗೆ ಅಗ್ಗದ ರೀಚಾರ್ಜ್ ಪ್ಲಾನ್ ಗಳನ್ನು (Recharge Plans) ಕೊಡಲಾಗುತ್ತಿದೆ. ಇಂಥ ಪ್ಲಾನ್ ಗಳು ಬೇರೆ ಯಾವುದೇ ನೆಟ್ವರ್ಕ್ ನಲ್ಲಿ ಲಭ್ಯವಿಲ್ಲ. ಹಾಗಿದ್ದರೂ ಸಹ ಜನರು ಹೆಚ್ಚಾಗಿ ಬಿಎಸ್‌ಎನ್‌ಎಲ್ ಬಳಕೆ ಮಾಡುತ್ತಿಲ್ಲ. ಆದರೆ ಇದೀಗ BSNL ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ನೀಡಿದೆ..
ನಮ್ಮ್ ದೇಶದಲ್ಲಿ ಖ್ಯಾತಿ ಪಡೆದಿರುವ ಬೇರೆ ಟೆಲಿಕಾಂ ಸಂಸ್ಥೆಗಳು ಎಂದರೆ ಏರ್ಟೆಲ್ (Airtel), ಜಿಯೋ (Jio), ವೊಡಾಫೋನ್ ಆಗಿದೆ. ಈ ಸಂಸ್ಥೆಗಳ ರೀಚಾರ್ಜ್ ಪ್ಲಾನ್ ಗಳ ಬೆಲೆ ಬಹಳ ದುಬಾರಿ ಆಗಿದೆ ಎಂದು ಜನರು BSNL ಕಡೆಗೆ ಬರುತ್ತಿದ್ದಾರೆ. ಆದರೆ ಬಿಎಸ್‌ಎನ್‌ಎಲ್ ನಲ್ಲಿ 4G ಅಥವಾ 5G ಸೇವೆಗಳು ಲಭ್ಯವಿಲ್ಲ ಎನ್ನುವುದು ಜನರಲ್ಲಿ ಇರುವ ಅಸಮಾಧಾನ ಆಗಿದೆ..ಇನ್ನು ಕೂಡ 2G ಹಾಗೂ 3G ಸೇವೆಗಳನ್ನೇ ನೀಡುತ್ತಿದೆ BSNL.
ಹಾಗಾಗಿ ಜನರು 4G ಸೇವೆ ಇಲ್ಲ ಎನ್ನುವ ಕಾರಣಕ್ಕೆ ಬಿಎಸ್‌ಎನ್‌ಎಲ್ ನೆಟ್ವರ್ಕ್ ಬಿಟ್ಟು ಹೊರಬಂದಿದ್ದಾರೆ. ಈಗಾಗಲೇ BSNL ಇಂದ 1.8 ಕೋಟಿ ಗ್ರಾಹಕರು ಹೊರಹೋಗಿದ್ದಾರೆ. ಪ್ರಸ್ತುತ 8.8 ಕೋಟಿ ಬಳಕೆದಾರರು ಮಾತ್ರ BSNL ನೆಟ್ವರ್ಕ್ ಬಳಸುತ್ತಿದ್ದಾರೆ. 2024ರ ಏಪ್ರಿಲ್ ನಲ್ಲಿ 7.46% ಮಾತ್ರ ಮಾರುಕಟ್ಟೆಯಲ್ಲಿ ಇದರ ಪಾಲು ಇದೆ. ಇದು ಭಾರಿ ಮೊತ್ತದ ನಷ್ಟ ಆಗಿದೆ. ಆದರೆ ಟಾಟಾ ಸಂಸ್ಥೆ ಬಂದು ಬಿಎಸ್‌ಎನ್‌ಎಲ್ ಜೊತೆಗೆ ಕೈಜೋಡಿಸಿ, ಜನರಿಗೆ ಒಳ್ಳೆಯ ಸೇವೆ ಕೊಡುವುದಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.
ರತನ್ ಟಾಟಾ ಅವರು ಬಿ.ಎಸ್.ಎನ್.ಎಲ್ ಜೊತೆಗೆ ಕೈಜೋಡಿಸಿದ್ದು, 4G ಸೇವೆ ಲಾಂಚ್ ಮಾಡುವುದಕ್ಕೆ ಸಾವಿರಾರು ಕೋಟಿ ಇನ್ವೆಸ್ಟ್ ಮಾಡಿದೆ. ದೇಶದಲ್ಲಿ ಪ್ರಮುಖ ಪ್ರದೇಶಗಳಲ್ಲಿ 15,000 4G ಟವರ್ ಗಳನ್ನು ಸ್ಥಾಪಿಸಿ, ಜನರಿಗೆ ಒಳ್ಳೆಯ ನೆಟ್ವರ್ಕ್ ಸೇವೆ ಕೊಡಿಸುವುದಕ್ಕೆ ಮುಂದಾಗಿದೆ. ಹಾಗೆಯೇ ಈಗಾಗಲೇ ಕೆಲವು ಪ್ರಮುಖ ನಗರಗಳಲ್ಲಿ BSNL 4G ನೆಟ್ವರ್ಕ್ ಟೆಸ್ಟಿಂಗ್ ಮಾಡಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮಾಹಿತಿ ಸಿಕ್ಕಿದೆ.
ಹಾಗಾಗಿ ಇದೇ ವರ್ಷ ಅಕ್ಟೊಬರ್ ತಿಂಗಳಿನಲ್ಲಿ ಅಂದರೆ ಇನ್ನು ಎರಡೇ ತಿಂಗಳುಗಳಲ್ಲಿ ಭಾರತದಲ್ಲಿ BSNL 4G ಸೇವೆ ಲಾಂಚ್ ಆಗುತ್ತದೆ ಎಂದು BSNL ಸಂಸ್ಥೆಯು ಅಧಿಕೃತವಾಗಿ ಮಾಹಿತಿ ನೀಡಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ. ಒಟ್ಟಿನಲ್ಲಿ ಈಗ ಬೇರೆ ನೆಟ್ವರ್ಕ್ ಗ್ರಾಹಕರು BSNL ಗೆ ಬರುತ್ತಿರುವ ವೇಳೆ ಇದೊಂದು ಉತ್ತಮವಾದ ಕೆಲಸ ಆಗಿದ್ದು, ಮುಂದಿನ ದಿನಗಳಲ್ಲಿ BSNL ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಹ ಇಲ್ಲ ಎನ್ನಲಾಗುತ್ತಿದೆ.
Super speed BSNL 4G service launched in the country, good news for BSNL customers
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.