TATA Motors: ಕಾರುಗಳ ಬೆಲೆಯನ್ನು ಹೆಚ್ಚಿಸಿದ ಟಾಟಾ ಮೋಟಾರ್ಸ್

TATA Motors: ಪ್ರಸಿದ್ಧ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ.

TATA Motors: ಪ್ರಮುಖ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಹೆಚ್ಚಿದ ಬೆಲೆಗಳು ನವೆಂಬರ್ 7 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಸರಾಸರಿ ಶೇ.0.9ರಷ್ಟು ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಬೆಲೆ ಏರಿಕೆಯಿಂದ ಈಗಾಗಲೇ ಒಂದಿಷ್ಟು ಹೊರೆಯಾಗುತ್ತಿದ್ದು, ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸೀಮಿತ ಪ್ರಮಾಣದಲ್ಲಿ ಹೆಚ್ಚಳದ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ರಾಜಕೀಯಕ್ಕೆ ಎಂಟ್ರಿ ಕೊಡ್ತಾರ ಯಶ್! ಏನಿದು ಶಾಕಿಂಗ್ ನಿರ್ಧಾರ

ಜುಲೈನಲ್ಲಿಯೂ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯನ್ನು ಶೇಕಡಾ 0.55 ರಷ್ಟು ಹೆಚ್ಚಿಸಿದೆ. ಪ್ರಸ್ತುತ ಟಾಟಾ ಮೋಟಾರ್ಸ್ ದೇಶದಲ್ಲಿ ಟಿಯಾಗೊ, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. 7ರಿಂದ ಈ ಬೆಲೆಗಳು ಹೆಚ್ಚಾಗಲಿವೆ.

ಏತನ್ಮಧ್ಯೆ, ಅಕ್ಟೋಬರ್ ತಿಂಗಳಲ್ಲಿ ಒಟ್ಟು 78,335 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 15.49 ರಷ್ಟು ಹೆಚ್ಚಿನ ಮಾರಾಟವಾಗಿದೆ.

Tata Motors has hiked car prices