1 ಲಕ್ಷ 30 ಸಾವಿರ ರಿಯಾಯಿತಿ, ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್

Electric Cars Offers: ನವೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮೇಲೆ ಲಕ್ಷಾಂತರ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಗ್ರೀನ್ ಬೋನಸ್, ಎಕ್ಸ್ಚೇಂಜ್ ಮತ್ತು ಸ್ಕ್ರಾಪ್ ಆಫರ್‌ಗಳ ಮೂಲಕ ಗ್ರಾಹಕರಿಗೆ ದೊಡ್ಡ ಪ್ರಯೋಜನ.

  • ಟಾಟಾ EV ಕಾರುಗಳ ಡಿಸ್ಕೌಂಟ್ ಘೋಷಣೆ
  • ಗ್ರೀನ್ ಬೋನಸ್ ಮತ್ತು ಎಕ್ಸ್ಚೇಂಜ್ ಆಫರ್
  • ಲಕ್ಷಾಂತರ ರಿಯಾಯಿತಿಯೊಂದಿಗೆ ಟಾಟಾ ಆಫರ್

Electric Cars Discount: ವಾಹನ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ GST 2.0 ಬದಲಾವಣೆಗಳ ಬಳಿಕ EV ವಿಭಾಗಕ್ಕೆ ಹೊಸ ಚೈತನ್ಯ ಬಂದಿದೆ. ದೇಶೀಯ ಕಂಪನಿ ಟಾಟಾ ಮೋಟಾರ್ಸ್, ಗ್ರಾಹಕರನ್ನು ಇನ್ನಷ್ಟು ಆಕರ್ಷಿಸಲು ತನ್ನ ಎಲೆಕ್ಟ್ರಿಕ್ ಮಾದರಿಗಳ ಮೇಲೆ ಭಾರೀ ಡಿಸ್ಕೌಂಟ್‌ಗಳನ್ನು ನೀಡಿದೆ.

ಗ್ರೀನ್ ಬೋನಸ್, ಸ್ಕ್ರಾಪ್/ಎಕ್ಸ್ಚೇಂಜ್ ಆಫರ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳ ಮೂಲಕ ಈ ತಿಂಗಳು ಅನೇಕ ಮಾದರಿಗಳು ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ.

ಈ ಬಾರಿ ಅತಿ ಹೆಚ್ಚು ರಿಯಾಯಿತಿ ಟಾಟಾ Curvv EVಗೆ ಲಭ್ಯ. ಈ ಮಾದರಿಯನ್ನು ಖರೀದಿಸುವ ಗ್ರಾಹಕರು ಒಟ್ಟು ₹1,30,000 ರಿಯಾಯಿತಿ ಪಡೆಯುತ್ತಾರೆ. ಇದರಲ್ಲಿ ₹1 ಲಕ್ಷ ಗ್ರೀನ್ ಬೋನಸ್ ಆಗಿದ್ದು, ಉಳಿದ ₹30,000 ಎಕ್ಸ್ಚೇಂಜ್/ಸ್ಕ್ರಾಪ್ ಅಡಿ ನೀಡಲಾಗುತ್ತಿದೆ. 45kWh ಮತ್ತು 55kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುವ ಈ ಮಾದರಿ ಕ್ರಮವಾಗಿ 430 ಕಿಮೀ ಮತ್ತು 502 ಕಿಮೀ ರೇಂಜ್ ನೀಡುತ್ತದೆ.

ಇದನ್ನೂ ಓದಿ: 10 ಲಕ್ಷಕ್ಕಿಂತ ಕಮ್ಮಿ ಬೆಲೆ! ಒಮ್ಮೆ ಚಾರ್ಜ್ ಮಾಡಿದ್ರೆ ಬೆಂಗಳೂರು to ಹೈದರಾಬಾದ್ ಹೋಗಬಹುದು

ಪಾಪ್ಯುಲರ್ ಮಾದರಿಯಾದ ಟಾಟಾ ಪಂಚ್ EV ಕೂಡ ಉತ್ತಮ ರಿಯಾಯಿತಿಯೊಂದಿಗೆ ಬಂದಿದೆ. ಈ ಕಾರಿನಲ್ಲಿ ಗ್ರೀನ್ ಬೋನಸ್ ₹60,000 ಮತ್ತು ಎಕ್ಸ್ಚೇಂಜ್/ಸ್ಕ್ರಾಪ್ ಆಫರ್ ₹40,000 ಸೇರಿ ಒಟ್ಟು ₹1 ಲಕ್ಷ ಪ್ರಯೋಜನ ಸಿಗುತ್ತದೆ. 25kWh ಮತ್ತು 35kWh ಬ್ಯಾಟರಿ ಪ್ಯಾಕ್‌ಗಳು ಮತ್ತು 3.3kW/7.2kW ಚಾರ್ಜರ್ ಆಯ್ಕೆಗಳು ಇದರ ವೈಶಿಷ್ಟ್ಯ.

ಟಾಟಾ ಟಿಯಾಗೋ EV ಗ್ರಾಹಕರಿಗೇ ಸಿಕ್ಕಾಪಟ್ಟೆ ಬೇಡಿಕೆಯಿರುವ ಅಫೋರ್ಡಬಲ್ EV. ಈ ಮಾದರಿಯ ಎಲ್ಲಾ ವೇರಿಯಂಟ್‌ಗಳ ಮೇಲೆ ₹1 ಲಕ್ಷವರೆಗೆ ಡಿಸ್ಕೌಂಟ್ ಇದೆ. 19.2kWh ಮತ್ತು 24kWh ಬ್ಯಾಟರಿ ಆಯ್ಕೆಗಳು ಲಭ್ಯವಿದ್ದು, ಒಂದೇ ಚಾರ್ಜಿನಲ್ಲಿ 221 ಕಿಮೀ ಮತ್ತು 275 ಕಿಮೀ ರೇಂಜ್ ಪಡೆಯಬಹುದು.

ಮಧ್ಯಮವರ್ಗದ EV ಅಭಿಮಾನಿಗಳಿಗೆ ಟಾಟಾ ನೆಕ್ಸಾನ್ EV ಮೇಲೆ ₹30,000 ರಿಯಾಯಿತಿ ನೀಡಲಾಗುತ್ತಿದೆ. ಇದು 30kWh ಮತ್ತು 45kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಒಂದೇ ಚಾರ್ಜಿನಲ್ಲಿ ಕ್ರಮವಾಗಿ 275 ಕಿಮೀ ಮತ್ತು 489 ಕಿಮೀ ರೇಂಜ್ ಪಡೆಯಲು ಸಾಧ್ಯ.

ಇದನ್ನೂ ಓದಿ: ಒಂದು ರೂಪಾಯಿ ಕಟ್ಟಬೇಕಿಲ್ಲ! ಎಸ್‌ಬಿಐ ಬ್ಯಾಂಕ್‌ನಿಂದ ಕಾರ್ ಲೋನ್, ಆಕರ್ಷಕ ಆಫರ್

ಹೆಚ್ಚು ಸಾಮರ್ಥ್ಯ ಬಯಸುವವರಿಗೆ ಟಾಟಾ ಹ್ಯಾರಿಯರ್ EV ಮೇಲೆ ₹1 ಲಕ್ಷವರೆಗೆ ರಿಯಾಯಿತಿ ಘೋಷಿಸಲಾಗಿದೆ. 65kW ಮತ್ತು 75kW ಬ್ಯಾಟರಿ ಪ್ಯಾಕ್‌ಗಳಿರುವ ಈ ಕಾರು ಕ್ರಮವಾಗಿ 538 ಕಿಲೋಮೀಟರು ಮತ್ತು 627 ಕಿಲೋಮೀಟರು ರೇಂಜ್‌ನ್ನು ನೀಡುತ್ತದೆ.

ಟಾಟಾ ಮೋಟಾರ್ಸ್ ನೀಡಿರುವ ಈ ಬಂಪರ್ ಆಫರ್‌ಗಳು ಗ್ರಾಹಕರಿಗೆ ದಿಟ್ಟ ಪ್ರಯೋಜನ ನೀಡಲಿವೆ ಎಂದು ವಾಹನ ವಲಯ ವಿಶ್ಲೇಷಕರು ಹೇಳುತ್ತಾರೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಏರುತ್ತಿರುವುದರಿಂದ ಈ ರಿಯಾಯಿತಿಗಳು ಮಾರುಕಟ್ಟೆಯನ್ನು ಮತ್ತಷ್ಟು ಚುರುಕುಗೊಳಿಸಲಿವೆ.

Tata Offers Huge Discounts on EV Cars

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories