ಹೊಸ ರೂಲ್ಸ್! ಇನ್ಮುಂದೆ ಇಂತಹ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ.. ನಿಮ್ಮ ವಾಹನವೂ ಪಟ್ಟಿಯಲ್ಲಿದಿಯಾ ನೋಡಿಕೊಳ್ಳಿ
ಪೆಟ್ರೋಲ್ ಮತ್ತು ಡೀಸೆಲ್ ಎರಡು ವಾಹನಗಳನ್ನು ಬ್ಯಾನ್ ಮಾಡುವ ನಿರ್ಧಾರ ಮಾಡಿದ್ದು, ಮೊದಲ ಹಂತದಲ್ಲಿ ಡೀಸೆಲ್ ವಾಹನಗಳನ್ನು ಬ್ಯಾನ್ ಮಾಡಲಿದೆ..
ಪ್ರಪಂಚದಲ್ಲಿ ಈಗ ವಾಹನಗಳ (Vehicles) ಬಳಕೆ, ವಾಹನಗಳನ್ನು ಕೊಂಡುಕೊಳ್ಳುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಹೊಸ ಹೊಸ ಕಾರ್ ಗಳು (Cars), ಬೈಕ್ ಗಳು (Bikes) ಜನರನ್ನು ಆಕರ್ಷಿಸುತ್ತಿದೆ. ಜನರು ಕೂಡ ಮುಗಿಬಿದ್ದು ವಾಹನಗಳ ಖರೀದಿ ಮಾಡುತ್ತಿದ್ದಾರೆ.
ಆದರೆ ವಾಹನಗಳಿಗೆ ಬಳಸುವ ಇಂಧನದಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಸರ್ಕಾರ ಈಗ ಪರಿಸರಕ್ಕೆ ಹಾನಿ ತರುವಂಥ ವಾಹನ ತಯಾರಿಕೆಯನ್ನು ಬ್ಯಾನ್ ಮಾಡುವ ನಿರ್ಧಾರ ಮಾಡಿದೆ, ಪೆಟ್ರೋಲ್ ಮತ್ತು ಡೀಸೆಲ್ ಎರಡು ವಾಹನಗಳನ್ನು (Petrol and Diesel Vehicles) ಬ್ಯಾನ್ ಮಾಡುವ ನಿರ್ಧಾರ ಮಾಡಿದ್ದು, ಮೊದಲ ಹಂತದಲ್ಲಿ ಡೀಸೆಲ್ ವಾಹನಗಳನ್ನು ಬ್ಯಾನ್ ಮಾಡಲಿದೆ..
ಪ್ರಸ್ತುತ ನಮಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡು ಕೂಡ ಸರಿಯಾಗಿ ಸಿಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಪೆಟ್ರೊಲ್ ಮತ್ತು ಡೀಸೆಲ್ ಪಡೆಯಲು ಇನ್ನು ಹೆಚ್ಚು ಸಮಸ್ಯೆ ಉಂಟಾಗಬಹುದು.
ವರ್ಕ್ ಫ್ರಮ್ ಹೋಮ್! ಮಹಿಳೆಯರು ಮನೆಯಿಂದಲೇ ಈ ಸಿಂಪಲ್ ಕೆಲಸ ಮಾಡಿ ಕೈತುಂಬಾ ದೊಡ್ಡ ಆದಾಯ ಗಳಿಸಬಹುದು
ಹಾಗಾಗಿ ವಾಹನ ತಯಾರಿಸುವ ಕಂಪನಿಗಳು ಕೂಡ ಈಗ ಪೆಟ್ರೋಲ್ ಡೀಸೆಲ್ ವಾಹನ ತಯಾರಿಕೆ ಕಡಿಮೆ ಮಾಡಿದ್ದು, CNG ಇಂದ ಚಲಿಸುವ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು (Electric Cars and Bikes) ತಯಾರಿಸುತ್ತದೆ.
ಇನ್ನು ಡೀಸೆಲ್ ಇಂಜಿನ್ ವಾಹನಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದ್ದು, ಬಹಳ ಹಳೆಯದಾದ ಡೀಸೆಲ್ ವಾಹನಗಳನ್ನು ಬಳಸಬಾರದು ಎಂದು ಆದೇಶ ನೀಡಿದೆ. 15 ವರ್ಷಕ್ಕಿಂತ ಹಳೆಯದಾಗಿರುವ ಡೀಸೆಲ್ ವಾಹನಗಳನ್ನು ಬಳಸುವ ಹಾಗಿಲ್ಲ ಎಂದು ಸರ್ಕಾರ ಸ್ಟ್ರಿಕ್ಟ್ ಆಗಿ ವಾರ್ನ್ ಮಾಡಿದೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ 2027ರ ಸಮಯಕ್ಕೆ ಡೀಸೆಲ್ ವಾಹನಗಳ ಹೊಸ ತಯಾರಿಕೆ ಸಂಪೂರ್ಣ ನಿಲ್ಲಬಹುದು ಎನ್ನಲಾಗಿದ್ದು, ಇನ್ನುಮುಂದೆ ಪ್ರಸ್ತುತ ಉತ್ಪಾದನೆ ಮಾಡುತ್ತಿರುವ ಘಟಕಗಳು ಮಾತ್ರ ಇರುತ್ತದೆ ಎಂದು ಹೇಳಲಾಗುತ್ತಿದೆ.
ಡೀಸೆಲ್ ವಾಹನಗಳು ಮೋಟರ್ ಕಂಪನಿಗಳಿಗೆ ಲಾಭ ತರುವ ವಾಹನಗಳು, ಏಕೆಂದರೆ ಇವುಗಳ ಪರ್ಫಾರ್ಮೆನ್ಸ್ ಅತ್ಯುತ್ತಮವಾಗಿರುತ್ತದೆ, ಇಂಜಿನ್ ಕೂಡ ಪವರ್ ಫುಲ್ ಆಗಿರುತ್ತದೆ. ಹಾಗಾಗಿ ಈ ವಾಹನಗಳ ತಯಾರಿಕೆ ಪೂರ್ತಿ ನಿಲ್ಲಿಸಿದರೆ ಆಟೋಮೊಬೈಲ್ಸ್ ಕಂಪೆನಿಗಳಿಗೆ ಭಾರಿ ನಷ್ಟವಾಗುತ್ತದೆ. ಈಗ ಹೆಸರು ಮಾಡಿರುವ ಮಹಿಂದ್ರ ಸ್ಕಾರ್ಪಿಯೋ, ಟೊಯೊಟಾ ಸಂಸ್ಥೆಯ ಫಾರ್ಚುನರ್ ಕಾರ್ ಗಳು ಹೊಸ ವೇರಿಯಂಟ್ ನಲ್ಲಿ ಬಿಡುಗಡೆ ಆಗಬೇಕು.
ಈಗ ಭಾರತೀಯ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ, 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಊರುಗಳಲ್ಲಿ ಡೀಸೆಲ್ ವಾಹನಗಳನ್ನು ಪೂರ್ತಿಯಾಗಿ ನಿಲ್ಲಿಸಬೇಕು.
ಅದರ ಬದಲಾಗಿ ಪೆಟ್ರೋಲ್ ಅಥವಾ CNG ಇಂದ ಚಲಿಸುವ ವಾಹನಗಳ ತಯಾರಿಕೆ ಮತ್ತು ಬಳಕೆ ಹೆಚ್ಚಾಗಬೇಕು ಎಂದು ಹೇಳಿದೆ. ಈಗಿರುವ ಡೀಸೆಲ್ ಚಾಲಿತ ಕಾರ್ ಗಳ ಇಂಜಿನ್ ಅನ್ನು ಬದಲಾಯಿಸಿ, ಪೆಟ್ರೋಲ್ ಅಥವಾ CNG ಇಂಜಿನ್ ಇಂದ ಬದಲಾಯಿಸುಗ ಪ್ರಯೋಗ ಮಾಡಲು ಸೂಚನೆ ನೀಡಲಾಗಿದೆ.
ಹೊಸ ಸ್ಕೀಮ್ ! ಕೇವಲ 20 ರೂಪಾಯಿ ಹೂಡಿಕೆ ಮಾಡಿ 2 ಲಕ್ಷ ಪಡೆಯುವ ಕೇಂದ್ರ ಸರ್ಕಾರದ ದೊಡ್ಡ ಯೋಜನೆ
ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆ ಕೂಡ ಜಾಸ್ತಿಯಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಹಾಗೆಯೇ ಇಂಧನಗಳ ಬೆಲೆ ಕೂಡ ಹೆಚ್ಚಾಗಿದೆ. ಜೊತೆಗೆ ಜನರು ಕೂಡ CNG ಮತ್ತು ವಿದ್ಯುತ್ ವಾಹನಗಳನ್ನು ಕೊಂಡುಕೊಳ್ಳುವುದಕ್ಕೆ ಆಸಕ್ತಿ ಹೊಂದಿದ್ದಾರೆ.
ಹಾಗಾಗಿ ಡೀಸೆಲ್ ವಾಹನಗಳ ಬಳಕೆ ಕಡಿಮೆ ಆಗಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ. ಪ್ರಸ್ತುತ ಸಾಕಷ್ಟು ಡೀಸೆಲ್ ವಾಹನಗಳು ತಯಾರಾಗಿವೆ. ಅವುಗಳನ್ನೆಲ್ಲಾ ಮಾರಾಟ ಮಾಡದೆ ಇದ್ದರೆ, ಕಂಪನಿಗಳಿಗೆ ಬಹಳ ನಷ್ಟ ಆಗುತ್ತದೆ, ಹಾಗಾಗಿ ಈ ವಾಹನಗಳ ಇಂಜಿನ್ ಅನ್ನು CNG ಹಾಗೂ ವಿದ್ಯುತ್ ಇಂಜಿನ್ ಆಗಿ ಬದಲಾಯಿಸಲು ಸೂಚನೆ ಕೊಡಲಾಗಿದೆ.
The government has decided to ban diesel vehicles in the first phase
Follow us On
Google News |