ಈ ಪೋಸ್ಟ್ ಆಫೀಸ್ ಸ್ಕೀಮ್ ನೀಡಲಿದೆ ಒಂದು ಲಕ್ಷಕ್ಕೂ ಹೆಚ್ಚಿನ ಆದಾಯ! ಇಲ್ಲಿದೆ ಮಾಹಿತಿ
- ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಿಂದ ಲಕ್ಷ ಖಾತ್ರಿ ಆದಾಯ
- ಒಂಟಿಯಾಗಿ ರೂ.9 ಲಕ್ಷ ಜಂಟಿಯಾಗಿ 15 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬಹುದು
- ಅಂಚೆ ಕಚೇರಿಯ ಮಾಸಿಕ ಆದಾಯ ಠೇವಣಿಗೆ ಸಿಗುತ್ತೆ 7.4% ಬಡ್ಡಿ
Post Office Scheme : ನಿಮ್ಮ ಬಳಿ ಇರುವ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಲು ಅಂಚೆ ಕಚೇರಿಯ ಈ ಉಳಿತಾಯ ಯೋಜನೆಯಲ್ಲಿ (Savings Scheme) ಹೂಡಿಕೆ ಮಾಡುವುದು ಬೆಸ್ಟ್. ಪ್ರತಿ ತಿಂಗಳು ಆದಾಯ ತಂದು ಕೊಡುವಂತಹ ಯೋಜನೆ ಇದಾಗಿದೆ. ಕೇವಲ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಬಹುದು. ಅದರಲ್ಲೂ ನಿಮ್ಮ ಸಂಗಾತಿಯ ಜೊತೆಗೆ ಹೂಡಿಕೆ ಮಾಡಿದರೆ ಐದು ವರ್ಷಗಳ ಅವಧಿಯ ನಂತರ ನಿಮ್ಮ ಕೈಗೆ 5 ಲಕ್ಷಕ್ಕೂ ಹೆಚ್ಚಿನ ಆದಾಯ ಸಿಗುತ್ತದೆ.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (MIS)
ಈ ಯೋಚನೆಯಲ್ಲಿ ಒಂಟಿಯಾಗಿ ಅಥವಾ ಜಂಟಿಯಾಗಿ ಹೂಡಿಕೆ ಮಾಡಬಹುದು. ಒಂಟಿಯಾಗಿ ಹೂಡಿಕೆ ಮಾಡುವುದಾದರೆ ಗರಿಷ್ಠ 9 ಲಕ್ಷದವರೆಗೆ ಹೂಡಿಕೆ ಮಾಡಬಹುದು ಹಾಗೂ ಜಂಟಿಯಾಗಿ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು.
ಈಗ ಹೂಡಿಕೆಯ ಲೆಕ್ಕಾಚಾರವನ್ನು ನೋಡೋಣ. ಈ ಯೋಜನೆಗೆ ಸದ್ಯ 7.4% ಬಡ್ಡಿ ನೀಡಲಾಗುತ್ತಿದೆ. ನೀವು 9,000 ಠೇವಣಿ ಇಟ್ಟರೆ ಐದು ವರ್ಷಗಳ ಅವಧಿಗೆ, ತಿಂಗಳಿಗೆ 5,550ರೂ.ಗಳ ಬಡ್ಡಿಯಂತೆ ವರ್ಷಕ್ಕೆ ರೂ.66,600 ಬಡ್ಡಿ ಪಡೆಯುತ್ತೀರಿ. ಅಂದರೆ ಐದು ವರ್ಷಗಳ ಠೇವಣಿಗೆ ರೂ.3,33,000ಗಳನ್ನು ಪಡೆಯಬಹುದು.
ಇಂಟರ್ನೆಟ್ ಇಲ್ಲದಿದ್ದರೂ ಮಾಡಬಹುದು ಮನಿ ಟ್ರಾನ್ಸ್ಫರ್! ಇಲ್ಲಿದೆ ವಿಧಾನ
ಇನ್ನು ಜಂಟಿ ಖಾತೆಯಲ್ಲಿ 15 ಲಕ್ಷ ಠೇವಣಿ ಇಟ್ಟರೆ ಪ್ರತಿ ತಿಂಗಳು 9,250 ರೂಪಾಯಿ ಬಡ್ಡಿ ಸಿಗುತ್ತದೆ. ಒಂದು ವರ್ಷಕ್ಕೆ 1,11,000 ರೂಪಾಯಿ ಅಂದರೆ ಐದು ವರ್ಷಕ್ಕೆ 5,55,000 ರೂಪಾಯಿಗಳ ಖಾತ್ರಿ ಆದಾಯ ಗಳಿಸಬಹುದು.
ಅಂಚೆ ಕಚೇರಿಯ ಮಾಸಿಕ ಆದಾಯ ಖಾತೆಯನ್ನು ವಯಕ್ತಿಕವಾಗಿ ಅಥವಾ ಜಂಟಿಯಾಗಿ ಅಲ್ಲದೆ ಮಕ್ಕಳ ಹೆಸರಿನಲ್ಲಿಯೂ ತೆರೆಯಬಹುದು. 10 ವರ್ಷದ ಒಳಗಿನ ಮಗುವಿನ ಹೆಸರಿನಲ್ಲಿ ಖಾತೆ ತೆರೆಯುವುದಿದ್ದರೆ, ಪೋಷಕರು ಕೇರ್ ಟೇಕರ್ ಆಗಿರಬೇಕಾಗುತ್ತದೆ.
ಇನ್ನು ಹೂಡಿಕೆ ಆರಂಭಿಸಲು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆದಾಯ ದಾಖಲೆಗಳನ್ನು ಕೊಟ್ಟು ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
This Post Office Scheme Offers Over One Lakh Income