ಈ 3 ತಳಿಯ ಮೇಕೆ ಸಾಕಾಣಿಕೆ ಮಾಡಿದ್ರೆ ಬಂಪರ್ ಲಾಭ! ನಷ್ಟದ ಮಾತೇ ಇಲ್ಲ
ಲಾಭದಾಯಕ ಮೇಕೆ ಸಾಕಾಣಿಕೆ ಮಾಡಲು ತಳಿಯ ಆಯ್ಕೆ ಬಹಳ ಮುಖ್ಯ. ಗುಜ್ರಿ, ಕರೌಲಿ ಮತ್ತು ಸೋಜಟ್ ಮೇಕೆ ತಳಿಗಳು ಉತ್ತಮ ಮಾಂಸ ಮತ್ತು ಮಾರುಕಟ್ಟೆ ಬೆಲೆಯಿಂದ ಮಿಕ್ಕವಿಗಿಂತ ಲಾಭಕಾರಿ.
Publisher: Kannada News Today (Digital Media)
- ಲಾಭಕ್ಕಾಗಿ ಮೇಕೆ ತಳಿಯ ಸರಿಯಾದ ಆಯ್ಕೆ ಬಹಳ ಅಗತ್ಯ
- ಗುಜ್ರಿ ತಳಿಗೆ ಹಾಲು ಮತ್ತು ಮಾಂಸ ಎರಡರ ಲಾಭ
- ಕರೌಲಿ ಮತ್ತು ಸೋಜಟ್ ಮೇಕೆಗಳಿಗೆ ಉತ್ತಮ ಮಾರುಕಟ್ಟೆ ಬೆಲೆ
ಮೇಕೆ ಸಾಕಾಣಿಕೆಯಿಂದ ಬಂಪರ್ ಲಾಭ ಪಡೆಯಲು ಈ ತಳಿಗಳು!
Goat Farming Business: ರಾಜಸ್ಥಾನದ ಬಹುತೇಕ ಜಿಲ್ಲೆಗಳಲ್ಲಿ ಗುಜ್ರಿ ತಳಿ (Gujri breed) ಸಾಕಷ್ಟು ಜನಪ್ರಿಯವಾಗಿದೆ. ಟೋಂಕ್, ಸಿಕರ್ ಮತ್ತು ಜೈಪುರ ಭಾಗಗಳಲ್ಲಿ ಕಂಡುಬರುವ ಈ ತಳಿ ಮೇಕೆಗಳು ಬೃಹತ್ ಗಾತ್ರವನ್ನು ಹೊಂದಿದ್ದು, ಉತ್ತಮ ಮಾಂಸ ಉತ್ಪಾದನೆಯ ಜೊತೆಗೆ ಕೆಲವೊಂದು ಪ್ರಭೇದಗಳು ಉತ್ತಮ ಹಾಲು ಉತ್ಪಾದನೆಗೂ ಹೆಸರುವಾಸಿ.
ಈ ತಳಿಯನ್ನು ಸಾಕುವುದು (commercial goat farming) ಹೆಚ್ಚು ಲಾಭದಾಯಕ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಹಸು ಸಾಕಾಣಿಕೆಯಲ್ಲಿ ಒನ್ ಟು ಡಬಲ್ ಆದಾಯಕ್ಕೆ ಇಲ್ಲಿದೆ ಸರಳ ಸೂತ್ರಗಳು!
ಹಾಲು ಉತ್ಪಾದನೆಯು ಕಡಿಮೆಯಾದರೂ ಮಾಂಸದ ಗುಣಮಟ್ಟದಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವ ತಳಿಯೆಂದರೆ ಸೋಜಟ್ ತಳಿ (Sojat breed). ಇದರ ನೋಟವೂ ಆಕರ್ಷಕವಾಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
ರಾಜಸ್ಥಾನದ ಸೋಜಟ್ ಜಿಲ್ಲೆಯಲ್ಲಿ ಪ್ರಭಾವಿ ತಳಿಯಾಗಿ ಬೆಳೆದಿದ್ದು, ಮಾಂಸದ ಮಾರಾಟಕ್ಕೆ meat business) ನಿಗದಿತ ಆದಾಯದ ನಿರೀಕ್ಷೆಯೊಂದಿಗೆ ಸಾಕುವುದು ಲಾಭದಾಯಕ.
ಇನ್ನು ರಾಜಸ್ಥಾನದಲ್ಲಿ ಕರೌಲಿ, ಮಾಂಡ್ರೆಲ್, ಹಿಂದೌನ್ ಮತ್ತು ಸಪೋತ್ರ ಭಾಗಗಳಲ್ಲಿ ಕಂಡುಬರುವ ಕರೌಲಿ ತಳಿ (Karauli breed), ಹಾಲು ಮತ್ತು ಮಾಂಸದ ಎರಡೂ ಕ್ಷೇತ್ರಗಳಲ್ಲಿ ಲಾಭ ನೀಡುತ್ತದೆ.
ಇದನ್ನೂ ಓದಿ: ಬ್ಯಾಂಕ್ ನಷ್ಟಕ್ಕೆ ಒಳಗಾದ್ರೆ ನಿಮ್ಮ ಹಣ ಏನಾಗುತ್ತೆ? ಇಲ್ಲಿದೆ ನಿಮಗೆ ಗೊತ್ತಿಲ್ಲದ ವಿಚಾರ
ಮೀನಾ ಸಮುದಾಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ತಳಿ ಜಾತಿ ಆಯ್ಕೆ ಮಾಡಿಕೊಳ್ಳುವ ರೈತರು ಬಂಪರ್ ಲಾಭವನ್ನು ಕಂಡುಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮೇಕೆ ಸಾಕಾಣಿಕೆ low investment high profit ಉದ್ಯಮವಾಗಿ ಕೃಷಿ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಹಸು-ಎಮ್ಮೆ ಸಾಕಾಣಿಕೆಗೆ ಹೋಲಿಸಿದರೆ ಮೇಕೆ ಸಾಕಣೆಗೆ ಬೇಕಾದ ಬಂಡವಾಳ ಕಡಿಮೆ, ಆದರೆ ಲಾಭದ ಸಾಧ್ಯತೆ ಜಾಸ್ತಿ. ಅಷ್ಟೇ ಅಲ್ಲ, ಉತ್ತಮ ಜಾತಿ ಆಯ್ಕೆಮಾಡಿದರೆ meat yield ಮತ್ತು ಮಾರಾಟದ ಬೆಲೆ ಎರಡೂ ತೃಪ್ತಿಕರವಾಗಿರಬಹುದು.
ಇದನ್ನೂ ಓದಿ: ಸರ್ಕಾರಿ ಕೆಲಸ ಬೇಕಾದ್ರೂ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು! ಕೋರ್ಟ್ ಸಂಚಲನ ತೀರ್ಪು
ಭಾರತದಲ್ಲಿ 60 ಕ್ಕೂ ಹೆಚ್ಚು ಮೇಕೆ ತಳಿಗಳಿರುವುದರಿಂದ, ಎಲ್ಲಿ ಯಾವ ತಳಿ ಹೆಚ್ಚು ಬೇಡಿಕೆಯಲ್ಲಿದೆ ಎಂಬ ಮಾಹಿತಿಯು market research ಮೂಲಕ ತಿಳಿದುಕೊಳ್ಳಬೇಕು. ತಮ್ಮ ಪ್ರದೇಶದ ಪರಿಸರಕ್ಕೆ ಹೊಂದಾಣಿಕೆಯಾಗುವ ಹಾಗೂ ಮಾರುಕಟ್ಟೆಯಲ್ಲಿ ಡಿಮಾಂಡ್ ಇರುವ ತಳಿಗಳನ್ನು ಆಯ್ಕೆ ಮಾಡಿದರೆ ಲಾಭದ ದಾರಿಯು ಸುಲಭವಾಗುತ್ತದೆ.
ಸೂಚನೆ: ಯಾವುದೇ ವ್ಯವಹಾರಕ್ಕೆ ಕೈಹಾಕುವ ಮೊದಲು, ಮಾರುಕಟ್ಟೆಯ ಹಾಗು-ಹೋಗುಗಳು ಲಾಭ, ನಷ್ಟ ಹಾಗೂ ನಿಮ್ಮ ಸ್ಥಳ, ಪರಿಸ್ಥಿತಿಗಳು ಕೂಡ ಕಾರಣವಾಗುತ್ತದೆ, ಮೊದಲು ಅನುಭವಿಗಳ ಮಾರ್ಗದರ್ಶನ ಪಡೆದು ಆ ನಂತರ ಮಾತ್ರ ಮುಂದುವರೆಯಿರಿ.
Top 3 Goat Breeds for Profitable Goat Farming