ಬ್ಯಾಂಕಿನಲ್ಲಿ ಮನೆ ಕಟ್ಟೋಕೆ ಪಡೆದ ಹೋಮ್ ಲೋನ್ ಬಡ್ಡಿ ಕಡಿಮೆ ಮಾಡೋ ಟ್ರಿಕ್
ಕೇವಲ ಸಣ್ಣ ಬದಲಾವಣೆಗಳ ಮೂಲಕ ಗೃಹ ಸಾಲದ ಇಎಂಐ ಕಡಿಮೆ ಮಾಡಬಹುದು. 12 ಲಕ್ಷ ರೂಪಾಯಿಗಳ ಬಡ್ಡಿ ಉಳಿತಾಯದ ಜೊತೆಗೆ ಸಾಲವನ್ನು ವೇಗವಾಗಿ ತೀರಿಸಲು ಈ ಟ್ರಿಕ್ ಪ್ರಯೋಗಿಸಿ!
- ಇಎಂಐಗೆ ಸಣ್ಣ ಹೆಚ್ಚುವರಿಯೊಂದಿಗೆ ಸಾಲಾವಧಿ ಕಡಿಮೆ ಮಾಡಿ
- 12 ಲಕ್ಷ ರೂಪಾಯಿಗಳ ಬಡ್ಡಿಯನ್ನು ಉಳಿಸಿಕೊಳ್ಳುವ ಅವಕಾಶ
- ಮ್ಯೂಚುವಲ್ ಫಂಡ್ ಹೂಡಿಕೆ ಬದಲಿಗೆ ಹೆಚ್ಚುವರಿ ಇಎಂಐ ಪಾವತಿ ಲಾಭಕಾರಿ
Home Loan : ಹೇಗೆ ನಿಮ್ಮ ಗೃಹ ಸಾಲದ ಇಎಂಐ ಕಡಿಮೆ ಮಾಡಬಹುದು ಗೊತ್ತಾ? ಸರಳ ಉಪಾಯ ಇಲ್ಲಿದೆ! ಇತ್ತೀಚೆಗೆ ಸರ್ಕಾರ ಬಡ್ಡಿದರಗಳನ್ನು ಕಡಿಮೆ ಮಾಡಿರುವುದರಿಂದ, ಇದು ನಿಮ್ಮ ಸಾಲವನ್ನು ಮರು ಯೋಜಿಸಲು ಅತ್ಯುತ್ತಮ ಸಮಯವಾಗಿದೆ.
ಇಎಂಐಗೆ ಸ್ವಲ್ಪ ಹೆಚ್ಚುವರಿ ಮೊತ್ತವನ್ನು ಸೇರಿಸುವ ಮೂಲಕ ನೀವು ಸಾಲವನ್ನು (Bank Loan) ಬೇಗನೆ ತೀರಿಸಬಹುದು ಮತ್ತು ಲಕ್ಷಾಂತರ ರೂಪಾಯಿಗಳ ಬಡ್ಡಿಯನ್ನು ಉಳಿಸಬಹುದು.
40 ಲಕ್ಷ ರೂ.ಗಳ ಗೃಹ ಸಾಲವನ್ನು (Home Loan) 20 ವರ್ಷಗಳ ಅವಧಿಗೆ 8.5% ಬಡ್ಡಿದರದಲ್ಲಿ ತೆಗೆದುಕೊಂಡಿದ್ದೀರಿ ಎಂದಾದರೆ, ಪ್ರತಿ ತಿಂಗಳು 34,713 ರೂ.ಗಳ ಇಎಂಐ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಜಾಲಿ ಜಾಲಿ.. ನಿಮ್ಮ ಹಣಕ್ಕೆ ಅಧಿಕ ಬಡ್ಡಿ ನೀಡುವ ಟಾಪ್ 6 ಬ್ಯಾಂಕುಗಳು ಇವು!
ಆದರೆ, ಇತ್ತೀಚಿನ ತೆರಿಗೆ ಬದಲಾವಣೆಗಳಿಂದ ನಿಮಗೆ 7,572 ರೂ.ಗಳ ಉಳಿತಾಯವಾಗುತ್ತದೆ. ಇದರ 60% ಎಂದರೆ ಸುಮಾರು 4,500 ರೂ.ಗಳನ್ನು ಇಎಂಐಗೆ ಸೇರಿಸಿದರೆ ನಿಮ್ಮ ಸಾಲ ಅವಧಿ 20 ವರ್ಷಗಳಿಂದ 15 ವರ್ಷಗಳು ಮತ್ತು 2 ತಿಂಗಳುಗಳಿಗೆ ಕಡಿಮೆಯಾಗುತ್ತದೆ.
ಇನ್ನೊಂದು ವಿಷಯವೇನೆಂದರೆ, ನೀವು ಒಟ್ಟು 12.02 ಲಕ್ಷ ರೂಪಾಯಿಗಳ ಬಡ್ಡಿಯನ್ನು ಉಳಿಸಬಹುದು. ಸಾಲ ಬೇಗನೆ ಪೂರ್ಣಗೊಳ್ಳುವುದರ ಜೊತೆಗೆ ಹಣವನ್ನು ಉಳಿಸಬಹುದು. ಇದು ಸಣ್ಣ ಪ್ರಯತ್ನಕ್ಕೆ ದೊಡ್ಡ ಫಲಿತಾಂಶ!
ಆದ್ರೆ ಕೆಲವರು ಈ ಹೆಚ್ಚುವರಿ ಹಣವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ (Mutual Fund) ಹೂಡಿಕೆ ಮಾಡುವ ಆಲೋಚನೆ ಮಾಡುತ್ತಾರೆ. ಆದರೆ ಏನು ಲಾಭ ಅಂತಾ ನೋಡೋಣ. 10 ವರ್ಷಗಳ ಕಾಲ ಪ್ರತಿ ತಿಂಗಳು ₹4,500 ಹೂಡಿಸಿದರೆ, 12% ಲಾಭದೊಂದಿಗೆ 10.45 ಲಕ್ಷ ರೂ. ಗಳಿಸಬಹುದು. ತೆರಿಗೆ ನಂತರ ಸುಮಾರು 9.21 ಲಕ್ಷ ರೂ. ನಿಮ್ಮ ಕೈಗೆ ಬರುತ್ತದೆ.
ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಈ ಯೋಜನೆಯಲ್ಲಿ 5 ಲಕ್ಷ ಹಣಕ್ಕೆ 10 ಲಕ್ಷ ಸಿಗುತ್ತೆ
ಆದರೆ, 10 ವರ್ಷಗಳ ನಂತರ ನಿಮ್ಮ ಸಾಲದಲ್ಲಿ ಇನ್ನೂ ₹28.14 ಲಕ್ಷ ಬಾಕಿಯಾಗಿರುತ್ತದೆ. ಆ ಹಣವನ್ನು ಸಾಲಕ್ಕೆ ಸೇರಿಸಿದರೆ, ಅಸಲು ಮೊತ್ತ ₹18.93 ಲಕ್ಷಕ್ಕೆ ಇಳಿಯುತ್ತದೆ. ಉಳಿದ 10 ವರ್ಷಗಳಲ್ಲಿ 9 ಲಕ್ಷ ರೂ. ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ, ಮ್ಯೂಚುವಲ್ ಫಂಡ್ ಹೂಡಿಕೆಯಿಂದ ಹೆಚ್ಚು ಲಾಭಕಾರಿ ಆಯ್ಕೆಯೇ ಇಎಂಐಗೆ ಹೆಚ್ಚುವರಿ ಪಾವತಿ ಮಾಡುವುದು!
Trick to Reduce Home Loan EMI and Save 12 Lakh
Our Whatsapp Channel is Live Now 👇