ಬರಿ ₹500 ರೂಪಾಯಿಗೆ ಲಕ್ಷ ಲಕ್ಷ ಗಳಿಸುವ ಪೋಸ್ಟ್ ಆಫೀಸ್ ಯೋಜನೆಗಳು ಇವು

ನೀವು ವಿದ್ಯಾರ್ಥಿ ಅಥವಾ ಗೃಹಿಣಿಯಾಗಿರಲಿ, ತಿಂಗಳಿಗೆ ಕೇವಲ ₹500 ನಿಗದಿತ ಪ್ಲಾನ್‌ಗಳಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಲಕ್ಷಾಂತರ ರೂ. ಸಂಪಾದನೆ ಸಾಧ್ಯವಿದೆ. ನೋಡಿ ಈ 4 ಆಯ್ಕೆಗಳು!

  • ತಿಂಗಳಿಗೆ ₹500 ಹೂಡಿಕೆಯಿಂದ ಭವಿಷ್ಯದಲ್ಲಿ ಲಕ್ಷ ಬೆನಿಫಿಟ್
  • ಹೂಡಿಕೆ ಮೇಲೆ ಭದ್ರತೆ ಮತ್ತು ಅಧಿಕ ಬಡ್ಡಿದರವಿರುವ ಸರ್ಕಾರಿ ಯೋಜನೆಗಳು
  • ವಿದ್ಯಾರ್ಥಿ, ಗೃಹಿಣಿ, ಕಡಿಮೆ ಆದಾಯದವರಿಗೆ ಸೂಕ್ತ ಮಾರ್ಗ

“ಹಣವಿಲ್ಲದೆ ಹೂಡಿಕೆ ಸಾಧ್ಯವೇ?” ಎಂಬ ಪ್ರಶ್ನೆಗೆ ಉತ್ತರ ಇದು. ಈಗಿನ ದಿನಗಳಲ್ಲಿ ತಿಂಗಳಿಗೆ ಕೇವಲ ₹500 ಮಾತ್ರ ಹೂಡಿಕೆ ಮಾಡಿದರೂ, ನೀವು ಭವಿಷ್ಯದಲ್ಲಿ ಲಕ್ಷಾಧಿಪತಿಯಾಗಬಹುದು. ಹೌದು, ಇದು ಸಾಧ್ಯವಿದೆ! ಹಣದ ಅಡಿಪಾಯಕ್ಕೆ ದೊಡ್ಡ ಮೊತ್ತದ ಅವಶ್ಯಕತೆ ಇಲ್ಲ, ನಿಯಮಿತ ಹೂಡಿಕೆಯೇ ನಿಮ್ಮ ನಿಜವಾದ ಶಕ್ತಿ.

ಇದನ್ನೂ ಓದಿ: ಹೊಸ ಮನೆಕಟ್ಟೋ ಕೆನರಾ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿಗೆ ಸಾಲ! ಬಂಪರ್ ಕೊಡುಗೆ

SIP (Systematic Investment Plan):

ಸ್ಟಾಕ್ ಮಾರುಕಟ್ಟೆಗೆ (Stock Market) ನೇರ ಹೂಡಿಕೆ ಮಾಡಲು ಭಯವಿದ್ರೆ, ಮ್ಯೂಚುವಲ್ ಫಂಡ್‌ಗಳ (Mutual Fund) ಮೂಲಕ SIP ಅತ್ಯುತ್ತಮ ಆಯ್ಕೆ. SIP ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ತಿಂಗಳಿಗೆ ₹500 ಸ್ವಯಂಚಾಲಿತವಾಗಿ (auto-debit) ತೆಗೆದು ನಿಮ್ಮ ಆಯ್ಕೆಯ ಮ್ಯೂಚುವಲ್ ಫಂಡ್‌ಗೆ ಜಮೆಯಾಗುತ್ತದೆ. market risk ಇದ್ದರೂ, ದೀರ್ಘಾವಧಿಯಲ್ಲಿ ಇದು ಸರಾಸರಿ 12% ಅಥವಾ ಹೆಚ್ಚು ಲಾಭ ನೀಡುತ್ತದೆ.

PPF (Public Provident Fund):

ಸರ್ಕಾರದ ಭದ್ರತೆ ಹೊಂದಿರುವ ಈ ಯೋಜನೆ ಎಲ್ಲರಿಗು ಪರಿಚಿತ. ಯಾವುದೇ post office ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಬಹುದು. 15 ವರ್ಷದ ಲಾಕ್ ಇನ್ ಪೀರಿಯಡ್ ಇದಕ್ಕೆ ಇರುತ್ತದೆ. ಪ್ರಸ್ತುತ ಬಡ್ಡಿದರ 7.1%. ₹500 ಹೂಡಿಕೆ ಮಾಡಿದರೆ, 15 ವರ್ಷದಲ್ಲಿ ₹90,000 ಹೂಡಿಕೆ ₹1.62 ಲಕ್ಷಕ್ಕೆ ವೃದ್ಧಿಯಾಗಬಹುದು. tax benefits ಸಹ ಲಭ್ಯವಿದೆ.

ಇದನ್ನೂ ಓದಿ: ಮಹಿಳೆಯರಿಗೆ ಬಂಪರ್ ಯೋಜನೆಗಳು! ಒಂದಕ್ಕಿಂತ ಒಂದು ಹೆಚ್ಚು ಬೆನಿಫಿಟ್

Sukanya Samriddhi Yojana (SSY):

ಇದು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ರೂಪುಗೊಂಡಿರುವ ಯೋಜನೆ. ನಿಮ್ಮ ಮಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿದ್ದರೆ, ಈ ಖಾತೆ ತೆರೆಯಬಹುದು. ವರ್ಷಕ್ಕೆ ಕನಿಷ್ಠ ₹250 ಹೂಡಿಕೆ ಮಾಡಬೇಕು. ಪ್ರಸ್ತುತ ಬಡ್ಡಿದರ 8.2% ಆಗಿದೆ. 15 ವರ್ಷ ಹೂಡಿಕೆ ಮಾಡಿದರೆ, 21ನೇ ವರ್ಷದಲ್ಲಿ ₹2.77 ಲಕ್ಷ ಗಳಿಸಬಹುದು.

Sukanya Samriddhi Yojana Scheme Details and Benefits

Post Office RD (Recurring Deposit):

ಸಣ್ಣ ಅವಧಿಯ ಗುರಿಗೆ ಈ ಪ್ಲಾನ್ ಸೂಕ್ತ. 5 ವರ್ಷಗಳ ಕಾಲ ತಿಂಗಳಿಗೆ ₹500 ಹಾಕಿದರೆ, ₹30,000 ಹೂಡಿಕೆಗೆ ₹35,681 ಪಾವತಿಯಾಗುತ್ತದೆ. ಪ್ರಸ್ತುತ ಬಡ್ಡಿದರ 6.7%. ಇದು ಸಂಪೂರ್ಣ ಸುರಕ್ಷಿತ small savings scheme ಆಗಿದೆ.

ಇದನ್ನೂ ಓದಿ: ಬ್ಯಾಂಕ್ ಚೆಕ್ ಮೇಲೆ Only ಅಂತ ಬರೆಯೋದು ಏಕೆ ಗೊತ್ತಾ? 99% ಜನಕ್ಕೆ ಗೊತ್ತಿಲ್ಲ

ಹೀಗೆ ₹500 ಮಾತ್ರ ಹೂಡಿಕೆ ಮಾಡಿದರೂ, ಆಯ್ದ ಯೋಜನೆಗಳಲ್ಲಿ ಪಾಲ್ಗೊಂಡರೆ ಭವಿಷ್ಯದಲ್ಲಿ ದೊಡ್ಡ ಮೊತ್ತದ ಹಣವನ್ನು ಸಂಪಾದಿಸಬಹುದು. ನಿಮ್ಮ ಉದ್ದೇಶಕ್ಕೆ ತಕ್ಕಂತೆ ಯೋಜನೆ ಆಯ್ಕೆ ಮಾಡಿ, ಹಣದ ಬಗ್ಗೆ ಸ್ಮಾರ್ಟ್ ಪ್ಲಾನಿಂಗ್ ಶುರುಮಾಡಿ!

Turn ₹500 Monthly into Lakhs with These 4 Smart Plans

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories