ಬ್ಯಾಂಕ್ ಚೆಕ್ ಮೇಲೆ Only ಅಂತ ಬರೆಯೋದು ಏಕೆ ಗೊತ್ತಾ? 99% ಜನಕ್ಕೆ ಗೊತ್ತಿಲ್ಲ
ಡಿಜಿಟಲ್ ಯುಗದಲ್ಲೂ ಚೆಕ್ ಬಳಕೆ ಕಡಿಮೆಯಾಗಿಲ್ಲ. 'Only' ಎಂದು ಬರೆಯುವುದು ಕಡ್ಡಾಯವಲ್ಲ, ಆದರೆ ಇದು ಭದ್ರತೆಗೆ ಸಹಾಯಕ. ಚೆಕ್‌ದಲ್ಲಿ ಈ ಪದಕ್ಕೆ ಇರುವ ಅರ್ಥ ಇಲ್ಲಿದೆ.

- only ಅಂತ ಬರೆಯುವದು ಕಾನೂನುಬದ್ಧ ಕಡ್ಡಾಯವಲ್ಲ
- ಈ ಪದ ಮೋಸದ ಅವಕಾಶವನ್ನು ಕಡಿಮೆ ಮಾಡುತ್ತದೆ
- ಚೆಕ್ ಭದ್ರತೆಗೆ ಇದು ಒಳ್ಳೆಯ ಅಭ್ಯಾಸ
ಈ ದಿನಗಳಲ್ಲಿ ಬ್ಯಾಂಕಿಂಗ್, ಪೇಮೆಂಟ್ (payment) ಎಲ್ಲವೂ ಡಿಜಿಟಲ್ ಆಗುತ್ತಿದ್ದರೂ ಸಹ, ಹಲವರು ಚೆಕ್ ಬಳಕೆ (Bank Cheque) ಮುಂದುವರಿಸಿದ್ದಾರೆ. ಕಂಪನಿಗಳ ನಡುವಿನ ಹಣಕಾಸು ವ್ಯವಹಾರಗಳಲ್ಲಿ ಅಥವಾ ದೊಡ್ಡ ಮೊತ್ತದ ಪಾವತಿ ಸಂದರ್ಭಗಳಲ್ಲಿ ಚೆಕ್ ಇನ್ನೂ ಸಹ ವಿಶಿಷ್ಟ ಸ್ಥಾನ ಹೊಂದಿದೆ.
ಅಭ್ಯಾಸದಂತೆ ಕೆಲವರು ಚೆಕ್‌ನಲ್ಲಿ ಮೊತ್ತವನ್ನು ಪದಗಳಲ್ಲಿ ಬರೆದು ಆ ನಂತರ ‘Only’ ಎಂಬ ಪದವನ್ನು ಸೇರಿಸುತ್ತಾರೆ. ಇದೊಂದು ಕಾನೂನುಬದ್ಧ ಕಡ್ಡಾಯವಲ್ಲದಿದ್ದರೂ, ಭದ್ರತೆಗೆ ಸಹಾಯಕವಾಗಿದೆ. ಇದರಿಂದ ಮೋಸದ ತಡೆ ಸಾಧ್ಯವಾಗುತ್ತದೆ.
ಇದನ್ನೂ ಓದಿ: ಇದೇ ನಮ್ಮ ದೇಶದ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್! ಕಡಿಮೆ ಬೆಲೆ, ಮಸ್ತ್ ಮೈಲೇಜ್
ಉದಾಹರಣೆಗೆ, ನೀವು ₹50,000 ಎಂಬ ಮೊತ್ತವನ್ನು “Fifty Thousand” ಎಂದು ಬರೆದು ‘Only’ ಸೇರಿಸಿದರೆ, ಯಾರೂ ಅದರಲ್ಲಿ ‘One Lakh and Fifty Thousand’ ಎಂದು ಮಾರ್ಪಡಿಸಲು ಸಾಧ್ಯವಿಲ್ಲ. ಹಾಗಾಗಿ ಈ ಪದವನ್ನು ಸೇರಿಸುವುದು ಚೆಕ್ ಸುರಕ್ಷಿತವಾಗಿರಿಸಲು ಸಹಾಯಕ.
ಅದಲ್ಲದೇ, ಮೊತ್ತವನ್ನು ಅಂಕೆಯಲ್ಲಿ ಬರೆಯುವಾಗ ಸಹ “/-” ಅನ್ನು ಕೊನೆಗೆ ಸೇರಿಸಬೇಕು. ಉದಾಹರಣೆಗೆ ₹50,000/- ಎಂದು ಬರೆಯುವುದರಿಂದ, ಯಾವುದಾದರೂ ಹೇರಳ ಮೊತ್ತ ಸೇರಿಸಿ ಮಾರ್ಪಡಿಸಲು ಸಾಧ್ಯವಿಲ್ಲ. ಇದೊಂದು ಸಣ್ಣ ಜಾಗ್ರತೆ ಇದ್ದರೂ, ಭವಿಷ್ಯದಲ್ಲಿ ಮೋಸ ಹೋಗುವುದನ್ನು ರಕ್ಷಿಸಲು ಸಹಕಾರಿಯಾಗಬಹುದು.
ಇದನ್ನೂ ಓದಿ: ಕೇವಲ ₹694 ರೂಪಾಯಿ ಖರ್ಚಿನಲ್ಲಿ ವಿಮಾನ ಹಾರಾಟ! ಇಲ್ಲಿದೆ ಫುಲ್ ಡೀಟೇಲ್ಸ್
ಅನೇಕರು ‘ಓನ್ಲಿ’ ಬರೆಯದೆ ಚೆಕ್ ಅನ್ನು ನೀಡಿದರೆ ಅದು ಬ್ಯಾಂಕ್‌ನಲ್ಲಿ ತಿರಸ್ಕಾರವಾಗುತ್ತದೆ ಎಂದು ಭಯಪಡುವರು. ಆದರೆ, ಇದು ಒಂದು ತಪ್ಪು ಕಲ್ಪನೆ. ಚೆಕ್ ಬೌನ್ಸ್ ಆಗಲು ‘ಓನ್ಲಿ’ ಬರೆಯದಿರುವುದಲ್ಲ, ಬದಲಿಗೆ ಖಾತೆಯಲ್ಲಿ ಹಣ ಕಡಿಮೆ ಇರುವುದು, ಸಿಗ್ನೇಚರ್ ಹೊಂದಿಕೆಯಾಗದಿರುವುದು ಅಥವಾ ದಿನಾಂಕದ ಸಮಸ್ಯೆ ಆಗಿರಬಹುದು.
ಇದನ್ನೂ ಓದಿ: ಜುಲೈ 1ರಿಂದ ಬ್ಯಾಂಕಿಂಗ್, ಏಟಿಎಂ, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್!
ಅಂತಿಮವಾಗಿ, ಚೆಕ್‌ನಲ್ಲಿನ ಈ ಸಣ್ಣ ಪದ (word) ಒಂದು ಭದ್ರತೆಗಾಗಿ. ಇದು ಕಾನೂನುಬದ್ಧವಾಗಿಯೇ ಬೇಕಾಗಿಲ್ಲದಿದ್ದರೂ, ಹಣದ ವ್ಯವಹಾರದಲ್ಲಿ ಇದು ಜಾಣಮಟ್ಟದ ನಡೆ.
Why Only is Written on a Bank Cheque




