ಇದೇ ನಮ್ಮ ದೇಶದ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್! ಕಡಿಮೆ ಬೆಲೆ, ಮಸ್ತ್ ಮೈಲೇಜ್
Electric Scooter : ಬಜಾಜ್ ಮತ್ತು ಸುಜುಕಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿವೆ. ಬೆಲೆ, ಚಾರ್ಜ್ ಸಮಯ, ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಎಲ್ಲ ಮಾಹಿತಿ ಇಲ್ಲಿದೆ. ಖರೀದಿಗೆ ಮುನ್ನ ಓದಿ.

- ಬಜಾಜ್ ಚೇತಕ್ 3001 ಬೆಲೆ ₹99,900 ಮಾತ್ರ
- ಸುಜುಕಿ ಇ-ಆಕ್ಸೆಸ್ ಟಾಪ್ ಸ್ಪೀಡ್ 71 ಕಿಮೀ/ಗಂ
- ಕಡಿಮೆ ಬೆಲೆ ಬೇಕಾದವರಿಗೆ ಬಜಾಜ್, ವೇಗ ಬೇಕಾದವರಿಗೆ ಸುಜುಕಿ ಆಯ್ಕೆ
Electric Scooter : ಎಲೆಕ್ಟ್ರಿಕ್ ಸ್ಕೂಟರ್ ಮಾರ್ಕೆಟ್‌ನಲ್ಲಿ ಈಗ ಸ್ಪರ್ಧೆ ತೀವ್ರವಾಗಿದೆ. ಪ್ರತಿದಿನವೂ ಹೊಸ ಮಾದರಿಗಳು ಲಾಂಚ್ ಆಗುತ್ತಲೇ ಇವೆ. ಇತ್ತೀಚಿಗೆ ಬಜಾಜ್ ಮತ್ತು ಸುಜುಕಿ ಕಂಪನಿಗಳಿಂದ (Suzuki Company) ಎರಡು ವಿಭಿನ್ನ ಮಾದರಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಈ ಎರಡರ ನಡುವೆ ಯಾವುದು ಉತ್ತಮ ಎಂಬ ಪ್ರಶ್ನೆ ಖರೀದಿಸಲು ಉತ್ಸುಕರಾಗಿರುವ ಗ್ರಾಹಕರಿಗೆ ಗೊಂದಲ ಉಂಟುಮಾಡುತ್ತದೆ.
ಇದನ್ನೂ ಓದಿ: ಕೇವಲ ₹694 ರೂಪಾಯಿ ಖರ್ಚಿನಲ್ಲಿ ವಿಮಾನ ಹಾರಾಟ! ಇಲ್ಲಿದೆ ಫುಲ್ ಡೀಟೇಲ್ಸ್
ಮೊದಲು ಬಜಾಜ್ ಚೇತಕ್ 3001 (Bajaj Chetak 3001) ಬಗ್ಗೆ ಹೇಳುವುದಾದರೆ, ₹99,900 (ex-showroom) ರ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದು, ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಬೆಲೆ ಕಡಿಮೆ.
ಈ ಸ್ಕೂಟರ್ ಟೌನ್ ಬಳಕೆಗಾಗಿ ಸೂಕ್ತವಾಗಿದೆ. 3kWh ಬ್ಯಾಟರಿ ಹೊಂದಿದ್ದು, ಒಂದು ಸಿಂಗಲ್ ಚಾರ್ಜ್ (single charge) ಮೇಲೆ 127 ಕಿಮೀ ಪ್ರಯಾಣಿಸಲು ಸಾಧ್ಯ. ಗರಿಷ್ಠ ವೇಗ 63kmph. ಆದರೆ ಈ ಮಾದರಿಯಲ್ಲಿ (fast charging) ಸೌಲಭ್ಯ ಇಲ್ಲ. ನಾಲ್ಕು ಗಂಟೆಗಳಲ್ಲಿ 80% ಚಾರ್ಜ್ ಮಾಡಬಹುದಾದರೂ, ಇದು ಸಾಮಾನ್ಯ ಚಾರ್ಜಿಂಗ್‌ಗೆ ಹೋಲಿಸಿದರೆ ಹೆಚ್ಚು ಸಮಯಬೇಕು.
ಇದನ್ನೂ ಓದಿ: ಜುಲೈ 1ರಿಂದ ಬ್ಯಾಂಕಿಂಗ್, ಏಟಿಎಂ, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್!
ಇದರ ವಿರುದ್ಧ ಸುಜುಕಿ ಇ-ಆಕ್ಸೆಸ್ (Suzuki e-Access) ಇನ್ನೂ ಅಧಿಕೃತ ಬೆಲೆಯನ್ನು ಪ್ರಕಟಿಸಿಲ್ಲ. ಆದರೆ ಮಾರುಕಟ್ಟೆ ತಜ್ಞರ ಅಂದಾಜು ಪ್ರಕಾರ ಇದರ ಬೆಲೆ ₹1.10 ಲಕ್ಷರಿಂದ ₹1.25 ಲಕ್ಷದ ನಡುವೆ ಇರಬಹುದು.
ಈ ಸ್ಕೂಟರ್ ಕೂಡ 3kWh ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿಯನ್ನು ಹೊಂದಿದೆ. ಟಾಪ್ ಸ್ಪೀಡ್ 71kmph. ಇದರ ವಿಶೇಷವೆಂದರೆ, (lithium iron phosphate battery) ಹೆಚ್ಚು ಭದ್ರತೆ ಮತ್ತು ಸೌಕರ್ಯ ನೀಡುತ್ತದೆ.
ಇದನ್ನೂ ಓದಿ: ಬರಿ ಆಧಾರ್ ಕಾರ್ಡ್ ಇದ್ರೂ ಸಾಕು, ಸಿಗುತ್ತೆ ಪರ್ಸನಲ್ ಲೋನ್! ಬೇಕಾದ್ರೆ ಟ್ರೈ ಮಾಡಿ
ಫಾಸ್ಟ್ ಚಾರ್ಜರ್ ಬಳಸಿ ಕೇವಲ 2.45 ಗಂಟೆಗಳಲ್ಲಿ ಫುಲ್ ಚಾರ್ಜ್ ಮಾಡಬಹುದಾದ ಸೌಲಭ್ಯವೂ ಇದೆ. ಆದರೆ ಸ್ಟ್ಯಾಂಡರ್ಡ್ ಚಾರ್ಜರ್ ಬಳಕೆ ಮಾಡಿದರೆ 6.30 ಗಂಟೆವರೆಗೆ ಬೇಕಾಗುತ್ತದೆ. ಒಂದು ಫುಲ್ ಚಾರ್ಜ್‌ನಲ್ಲಿ 95 ಕಿಮೀ ದೂರ ಸಾಗುತ್ತದೆ.
ಹೆಚ್ಚು ವೇಗ, ಕಡಿಮೆ ಚಾರ್ಜಿಂಗ್ ಸಮಯ ಮತ್ತು ಪ್ರೀಮಿಯಂ ಫ್ಯೂಚರ್ (premium features) ಬೇಕಾದವರಿಗೆ ಸುಜುಕಿ ಇ-ಆಕ್ಸೆಸ್ ಉತ್ತಮ ಆಯ್ಕೆ. ಆದರೆ ಕಡಿಮೆ ಬೆಲೆಯಲ್ಲಿ ವ್ಯವಹಾರಿಕ ಬಳಕೆಗಾಗಿ ಬೈಕ್ ಬೇಕಾದವರಿಗೆ ಬಜಾಜ್ ಚೇತಕ್ 3001 ಸೂಕ್ತ.
ಇದನ್ನೂ ಓದಿ: ಹೊಸ ಆಸ್ತಿ ನೋಂದಣಿ ನಿಯಮ 2025, ದಾಖಲೆ ಸರಿ ಇಲ್ಲದ ಜಮೀನು ಅಮಾನ್ಯ!
ಎರಡೂ ಮಾದರಿಗಳೂ ತಮ್ಮದೇ ಆದ ಲಕ್ಷಣಗಳಿಂದ ವಿಭಿನ್ನವಾಗಿದ್ದು, ಗ್ರಾಹಕರ ಆಯ್ಕೆ ಅವಶ್ಯಕತೆ ಮತ್ತು ಬಳಕೆಯ ರೀತಿಯನ್ನು ಅವಲಂಬಿಸಿರುತ್ತದೆ.
Bajaj vs Suzuki Electric Scooter, Which One’s Right for You




