ಈ ಯೋಜನೆಯಲ್ಲಿ ಹೆಣ್ಣು ಮಗಳ ಮದುವೆಗೆ ಸರ್ಕಾರವೇ ನೀಡಲಿದೆ 51,000 ರೂಪಾಯಿ

ಹೆಣ್ಣು (girl child) ಅಂದ್ರೆ ಮೂಗು ಮುರಿಯುವ ಕಾಲ ಈಗಿಲ್ಲ. ಹೆಣ್ಣು ಅಂದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಕೆಯ ಸಾಧನೆಯನ್ನು ನೋಡುವಂತಹ ಕಾಲ ಇದು.
ಆದರೂ ಹೆಣ್ಣುಮಕ್ಕಳ ಭವಿಷ್ಯದ ವಿಚಾರಕ್ಕೆ ಬಂದ್ರೆ ತಂದೆ ತಾಯಿ ತುಂಬಾನೇ ತಲೆ ಕೆಡಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಅವರ ಮದುವೆ ಖರ್ಚುಗಳನ್ನು ನಿಭಾಯಿಸುವುದಕ್ಕಾಗಿ ಆರಂಭದಿಂದಲೇ ಹಣ ಕೂಡಿಡಲು ಪ್ರಯತ್ನಿಸುತ್ತಾರೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸದಾ ಅವರಲ್ಲಿ ಯೋಚನೆ ತುಂಬಿರುತ್ತದೆ.
ಇದೀಗ ಸರ್ಕಾರ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ, ಅವರ ಸ್ವಾವಲಂಬನೆಯ ಜೀವನಕ್ಕಾಗಿ, ಅಷ್ಟೇ ಅಲ್ಲದೆ ಅವರ ಮದುವೆಯ ಸಂದರ್ಭದಲ್ಲಿ ಪಾಲಕರಿಗೆ ಸಹಾಯಧನವನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ.
ಸರ್ಕಾರದ ಈ ಯೋಜನೆ ನಿಮ್ಮ ಮನೆಯಲ್ಲಿ ಇರುವ ಹೆಣ್ಣು ಮಕ್ಕಳ ಮದುವೆಯ ಸಮಯಕ್ಕೆ ಬರೋಬ್ಬರಿ 51,000 ರೂಪಾಯಿ ಹಣವನ್ನು ನೀಡುವ ಯೋಜನೆ ಆಗಿದೆ.
ಮಹಿಳೆಯರಿಗಾಗಿ ಹೊಸ ಯೋಜನೆ, ಅರ್ಜಿ ಸಲ್ಲಿಸಿದವರಿಗೆ ಸಿಗೋ ಹಣ ಎಷ್ಟು ಗೊತ್ತಾ?
ಜನನಿ ಸುರಕ್ಷಾ ಯೋಜನೆ! (Janani Suraksha Yojana)
ಸದ್ಯ ಮರಳುಗಾಡಿನ ನಗರಿ ರಾಜಸ್ಥಾನ (Rajasthan) ದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜಸ್ಥಾನ ಸರ್ಕಾರ ವಿಶೇಷವಾಗಿ ತಮ್ಮ ರಾಜ್ಯದಲ್ಲಿ ಇರುವ ಹೆಣ್ಣು ಮಕ್ಕಳಿಗಾಗಿ ಜನನಿ ಸುರಕ್ಷಾ ಯೋಜನೆಯನ್ನು 2016ರಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿತ್ತು.
ಸರ್ಕಾರದ ಕೆಲವು ಮಾನದಂಡಗಳ ಒಳಗೆ ಬರುವ ಕುಟುಂಬ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತದೆ, ತಮ್ಮ ಮಕ್ಕಳ ಮದುವೆಗಾಗಿ ತಂದೆ ತಾಯಿಗಳು ಹೆಚ್ಚು ತಲೆ ಕೆಡಿಸಿಕೊಳ್ಳದೆ ಈ ಯೋಜನೆಗೆ ಅಪ್ಲೈ ಮಾಡಿದರೆ 51,000ಗಳನ್ನ ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಭರ್ಜರಿ ಸುದ್ದಿ! ಸಿಗಲಿದೆ 75,000 ರೂಪಾಯಿ ಸ್ಕಾಲರ್ಶಿಪ್
ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಇರುವ ಮಾನದಂಡಗಳು!
– ನಿಮ್ಮ ಹೆಣ್ಣುಮಗಳು ರಾಜಸ್ಥಾನ ನಿವಾಸಿ ಆಗಿದ್ದು 2016 ಜೂನ್ ಒಂದರ ನಂತರ ಜನಿಸಿದ ಮಗುವಾಗಿರಬೇಕು.
– ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಹೆಣ್ಣು ಮಗುವಿನ ತಾಯಿಯ ಬಳಿ ಭಮಾಶಾ ಕಾರ್ಡ್ ಇರಬೇಕು.
– ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಣ್ಣು ಮಗು ಜನಿಸಿರಬೇಕು
– ಮನೆಯಲ್ಲಿ ಎರಡು ಹೆಣ್ಣು ಮಕ್ಕಳು ಇದ್ದರೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಕೆನರಾ ಬ್ಯಾಂಕ್ ಅಕೌಂಟ್ ಇದ್ರೆ ಬಂಪರ್ ಅವಕಾಶ! ಇದು ನಿಮ್ಮ ಹಣ ಡಬಲ್ ಮಾಡೋ ಸ್ಕೀಮ್
ಜನನಿ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಪೋಷಕರ ಬ್ಯಾಂಕ್ ಖಾತೆಯ ವಿವರ (Bank Account)
ಮೊಬೈಲ್ ಸಂಖ್ಯೆ (ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು)
ತಾಯಿ ಮಗು ಜೊತೆಗೆ ಇರುವ ಫೋಟೋ
ವಿಳಾಸದ ಪುರಾವೆ
ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!
ರಾಜಸ್ಥಾನ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಹೋಗಿ ಜನನಿ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿಯೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಸದ್ಯ ರಾಜಸ್ಥಾನ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಕರ್ನಾಟಕ ರಾಜ್ಯಕ್ಕೂ ಬಂದರೆ ಇಲ್ಲಿನ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಬಹುದು.
Under this scheme, the government will provide 51,000 rupees for the marriage of a girl child
ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಇರುವ ಮಾನದಂಡಗಳು!





