Fixed Deposits: ಯೂನಿಯನ್ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಿಸಿದೆ!
Fixed Deposits: ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ಹಂತಹಂತವಾಗಿ ಹೆಚ್ಚಿಸುತ್ತಿವೆ.
Fixed Deposits: ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಎಫ್‌ಡಿ (Fixed Deposit) ದರಗಳನ್ನು ಹಂತಹಂತವಾಗಿ ಹೆಚ್ಚಿಸುತ್ತಿವೆ. ಇತ್ತೀಚೆಗೆ ಯೂನಿಯನ್ ಬ್ಯಾಂಕ್ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಆರ್ ಬಿಐ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದ ಬೆನ್ನಲ್ಲೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅಕ್ಟೋಬರ್ 17ರಿಂದ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರವನ್ನು ಹೆಚ್ಚಿಸಿದೆ.
ರೂ. 2 ಕೋಟಿ ವರೆಗೆ ಠೇವಣಿ ಇಡುವ ಹಿರಿಯ ನಾಗರಿಕರು ಸಾಮಾನ್ಯ ಠೇವಣಿದಾರರಿಗಿಂತ 0.50% ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. 7 ರಿಂದ 45 ದಿನಗಳ ಅವಧಿಯ FD ಗಳ ಮೇಲೆ ಬ್ಯಾಂಕ್ 3% ಬಡ್ಡಿಯನ್ನು ನೀಡುತ್ತದೆ. ಒಂದರಿಂದ 10 ವರ್ಷದ FD ಗಳ ಮೇಲೆ 7% ಬಡ್ಡಿ.
Union Bank increased interest rates on fixed deposits