ಫೋನ್‌ನಲ್ಲೇ ಆಧಾರ್ ಹೆಸರು, ವಿಳಾಸ, ಜನ್ಮದಿನಾಂಕ ಬದಲಾಯಿಸಿ! ಹೊಸ ಸೌಲಭ್ಯ

ಹೆಸರು, ಅಡ್ರಸ್, ಜನ್ಮದಿನಾಂಕವನ್ನು ಆಧಾರ್ ಕಾರ್ಡ್‌ನಲ್ಲಿ ನೇರವಾಗಿ ಫೋನ್‌ನಿಂದಲೇ ತಿದ್ದಿಕೊಳ್ಳಲು ಅವಕಾಶ ನೀಡುತ್ತಿದೆ UIDAI. ಹೊಸ ಮೊಬೈಲ್ ಆಪ್‌ ಹಾಗೂ QR ಆಧಾರಿತ ವ್ಯವಸ್ಥೆ ಶೀಘ್ರದಲ್ಲೇ ಲಭ್ಯ.

  • ಆಧಾರ್ ಕಾರ್ಡ್ ಅಪ್‌ಡೇಟ್‌ಗಳನ್ನು ಮೊಬೈಲ್‌ನಿಂದಲೇ ತಿದ್ದಿಕೊಳ್ಳುವ ವ್ಯವಸ್ಥೆ
  • 2025 ನವೆಂಬರ್‌ನಿಂದ ಹೊಸ QR ಆಧಾರಿತ ಡಿಜಿಟಲ್ ಸಿಸ್ಟಮ್
  • UIDAI ಯಿಂದ ಸೆಫ್ಟಿ, ಅನುಕೂಲತೆ, ಫ್ರೆಷ್ ಡೇಟಾ ಗ್ಯಾರಂಟಿ

UIDAI ನಿಂದ ಶೀಘ್ರದಲ್ಲೇ ಒಂದೇ ಕ್ಲಿಕ್‌ನಲ್ಲಿ ನಿಮ್ಮ ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡಬಹುದಾದ ಹೊಸ ಸೌಲಭ್ಯ ಬರಲಿದೆ. ಹೆಸರು, ವಿಳಾಸ, ಜನ್ಮದಿನಾಂಕ ಹಾಗು ಇತರೆ ಪರ್ಸನಲ್ ಡೀಟೆಲ್ಸ್‌ ಅನ್ನು ಫೋನ್‌ನಲ್ಲೇ ಸರಿಪಡಿಸಬಹುದಾದ ವ್ಯವಸ್ಥೆಯು ರೂಪು ಪಡೆಯುತ್ತಿದೆ.

ಈ ಹೊಸ ಸೌಲಭ್ಯವು ನೇರವಾಗಿ UIDAI ಮೊಬೈಲ್ ಆಪ್ ಮೂಲಕ ಲಭ್ಯವಾಗಲಿದೆ. ಇದರಿಂದ ಆಧಾರ್ ಸೆಂಟರ್‌ಗೆ ಹೋಗಿ ಕ್ಯೂನಲ್ಲಿ ನಿಲ್ಲಬೇಕಾದ ಅವಶ್ಯಕತೆ ಇರದು. ಎಲ್ಲವೂ ಪೇಪರ್‌ಲೆಸ್ ಹಾಗೂ ಆಧುನಿಕವಾಗಿರಲಿದೆ.

ಇದನ್ನೂ ಓದಿ: 1 ಲಕ್ಷಕ್ಕೆ 2 ಲಕ್ಷ, 3 ಲಕ್ಷಕ್ಕೆ 6 ಲಕ್ಷ ರೂಪಾಯಿ! ಪೋಸ್ಟ್ ಆಫೀಸ್ ಬಂಪರ್ ಯೋಜನೆ

UIDAI ಡಿಜಿಟಲ್ ಕ್ರಾಂತಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದು, 2025 ರ ಅಂತ್ಯದೊಳಗೆ ದೇಶಾದ್ಯಂತ QR ಕೋಡ್ ಆಧಾರಿತ ಆಧಾರ್ ವೆರಿಫಿಕೇಶನ್ ಸಿಸ್ಟಮ್‌ ಅನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಈಗಾಗಲೇ 2,000 ಆಧಾರ್ ಉಪಕರಣಗಳನ್ನು ಈ ಹೊಸ ವ್ಯವಸ್ಥೆಗೆ ತಕ್ಕಂತೆ ಅಪ್‌ಗ್ರೇಡ್ ಮಾಡಲಾಗಿದೆ.

UIDAI ಸಿಇಒ ಭುವನೇಶ್ ಕುಮಾರ್ ಅವರ ಪ್ರಕಾರ, ಈ ವ್ಯವಸ್ಥೆ ಎಲ್ಲಾ ಸೇವಾ ಪೂರೈಕೆದಾರರಿಗೆ ಹಾಗೂ ಸಾರ್ವಜನಿಕರಿಗೆ ಕೂಡ ಸುಲಭವಾಗಲಿದೆ. QR ಕೋಡ್ ಸ್ಕ್ಯಾನ್‌ನ ಮೂಲಕ ಡಿಜಿಟಲ್ ಐಡಿಂಟಿಟಿ ಚೆಕ್‌ಗಳನ್ನು ಪೂರೈಸಬಹುದು. ಇದರಿಂದ ಆಧಾರ್ ಕಾರ್ಡ್‌ನ ಫಿಸಿಕಲ್ ಕಾಪಿ ಅಗತ್ಯವಿಲ್ಲ.

ಇದನ್ನೂ ಓದಿ: ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ? ಹಾಗಾದ್ರೆ, ಈ ತಪ್ಪು ಮಾಡಿದರೆ ಕಾನೂನು ಸಮಸ್ಯೆ

Aadhaar Card
Image: Via Online Source

ಇದೇನೂ ಮುಕ್ತಾಯವಲ್ಲ… ಆಧಾರ್ ಮಾಹಿತಿಗೆ ಸಂಬಂಧಿಸಿದಂತೆ ಇತರ ದಾಖಲೆಗಳನ್ನು ಕೂಡ UIDAI ಸಿಸ್ಟಮ್‌ಗೆ ಲಿಂಕ್ ಮಾಡಲಾಗುತ್ತದೆ. ಪಾನ್ ಕಾರ್ಡ್, ಪಾಸ್‌ಪೋರ್ಟ್, ಬದಲಿ ವಿಳಾಸದ ದೃಢೀಕರಣಕ್ಕಾಗಿ ವಿದ್ಯುತ್ ಬಿಲ್ಲು, Ration Card, MNREGA ಡೇಟಾ ಎಲ್ಲವೂ ಈ ವ್ಯವಸ್ಥೆಯ ಭಾಗವಾಗಬಹುದು.

ಇದನ್ನೂ ಓದಿ: ಅರ್ಧ ಬೆಲೆಗೆ ಸ್ಮಾರ್ಟ್‌ಫೋನ್‌ಗಳು! ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಬಂಪರ್ ಡಿಸ್ಕೌಂಟ್‌

ಬಯೋಮೆಟ್ರಿಕ್ ವೆರಿಫಿಕೇಶನ್ ಮಾತ್ರ ಆಧಾರ್ ಸೆಂಟರ್‌ಗಳಲ್ಲಿ ಮುಂದುವರೆಯಲಿದೆ. ಇದರ ಅಡಿಯಲ್ಲಿ, 5-7 ವರ್ಷದ ಮಕ್ಕಳಿಗೆ ಮತ್ತು 15-17 ವರ್ಷದ ಯುವಕರಿಗೆ ಹೊಸದಾಗಿ ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ ಮಾಡಿಸಲಾಗುತ್ತದೆ. CBSE ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಸಹಯೋಗದಿಂದ ಈ ಡ್ರೈವ್ ನಡೆಯಲಿದೆ.

UIDAI ಈ ಹೊಸ ಆಪ್ ಮೂಲಕ ಆಧಾರ್ ಡೇಟಾವನ್ನು ಸೆಫಾಗಿ ಇರಿಸಲು, ಯಾವುದೇ ಅಕ್ರಮ ತಡೆಯಲು, ಹಾಗೂ ಉಪಯೋಗದ ಅನುಕೂಲತೆ ಹೆಚ್ಚಿಸಲು ಮುಂದಾಗಿದೆ.

ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.

Update Aadhaar from Your Mobile in one Click

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories