ವೋಟರ್ ಐಡಿಯಲ್ಲಿ ನಿಮ್ಮಿಷ್ಟದ ಫೋಟೋ ಹಾಕಿಕೊಳ್ಳಿ! ಇಲ್ಲಿದೆ ಉಚಿತ ಸೌಲಭ್ಯ
ವೋಟರ್ ಐಡಿ ಕಾರ್ಡ್ನ ಫೋಟೋ ಇಷ್ಟವಿಲ್ಲವೇ? ಈಗ ನೀವು ನಿಮ್ಮ ಇಷ್ಟದ ಫೋಟೋ ಹಾಕಿಕೊಳ್ಳಬಹುದು – ಅದೂ ಮನೆಯಲ್ಲೇ ಇಂಟರ್ನೆಟ್ ಮೂಲಕ..

- ವೋಟರ್ ಐಡಿ ಫೋಟೋ ಆನ್ಲೈನ್ನಲ್ಲಿಯೇ ಬದಲಾಯಿಸಿ
- ಇಷ್ಟದ ಫೋಟೋ ಅಪ್ಲೋಡ್ ಮಾಡುವ ಸುಲಭ ಪ್ರಕ್ರಿಯೆ
- Voter Helpline App ಮೂಲಕ ಉಚಿತ ಫೋಟೋ ಬದಲಾವಣೆ
ಈಗ ಮನೆಯಲ್ಲಿಯೇ ವೋಟರ್ ಐಡಿ ಫೋಟೋ ಬದಲಾಯಿಸಬಹುದು!
Update your voter ID photo : ವೋಟರ್ ಐಡಿಯಲ್ಲಿ ಇರುವ ಫೋಟೋ ಚನ್ನಾಗಿಲ್ವಾ? ಈಗ ಆ ತೊಂದರೆಗೊಂದು ಸಿಂಪಲ್ ಪರಿಹಾರ ಬಂದಿದೆ. ನೀವು ಇಷ್ಟದ ಫೋಟೋವನ್ನು ಈಗ ವೋಟರ್ ಕಾರ್ಡ್ಗಾಗಿ ಉಪಯೋಗಿಸಬಹುದು – ಅದೂ ಎಲ್ಲೂ ಹೋಗದೆ, ಮೊಬೈಲ್ನಿಂದಲೇ.
ಇತ್ತೀಚೆಗೆ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಫೋಟೋ ಬದಲಾಯಿಸುವ ಅವಕಾಶ ನೀಡಲಾಗಿದೆ. ಆದರೆ ಇದು ಬಿಹಾರಕ್ಕಷ್ಟೆ ಸೀಮಿತವಲ್ಲ. ಭಾರತದಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ಇದೇ ಸೌಲಭ್ಯ ಇದೆ.
ಇದನ್ನೂ ಓದಿ: ತಂದೆ-ತಾಯಿಯನ್ನು ಕಡೆಗಣಿಸಿದರೆ ಮಕ್ಕಳಿಗೆ ಆಸ್ತಿ ಮೇಲೆ ಹಕ್ಕಿಲ್ಲ; ಕೋರ್ಟ್ ತೀರ್ಪು
ಆನ್ಲೈನ್ ಮೂಲಕ ಫೋಟೋ ಬದಲಾಯಿಸಲು, ನೀವು “Voter Helpline App” ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಬೇಕು. ಆಪ್ ಓಪನ್ ಮಾಡಿದ ನಂತರ “Form 8 – Correction of Entries” ಆಯ್ಕೆ ಮಾಡಿ, ಅಲ್ಲಿರುವ ಸೂಚನೆಗಳನ್ನು ಅನುಸರಿಸಿ ನಿಮ್ಮ ಹೊಸ ಫೋಟೋ ಅಪ್ಲೋಡ್ ಮಾಡಬಹುದು.
ಅದರಲ್ಲಿಯೇ “Let’s Start” ಕ್ಲಿಕ್ ಮಾಡಿ, ನಿಮ್ಮ Voter ID ಸಂಖ್ಯೆ ನಮೂದಿಸಿ ಮುಂದುವರಿದರೆ, ನಿಮ್ಮ ಹೆಸರು, ವಿಳಾಸ ಮತ್ತು ಇತರ ವಿವರಗಳೊಂದಿಗೆ ಫೋಟೋ ಅಪ್ಡೇಟ್ ಮಾಡಬಹುದು. ನೀವು ಕ್ಯಾಮೆರಾದಿಂದ ನೇರವಾಗಿ ಸೆರೆಹಿಡಿದರೂ ಆಗುತ್ತೆ ಅಥವಾ ಗ್ಯಾಲರಿ ಇಮೇಜ್ ಬಳಸಿದರೂ ಸರಿ.
ಇದನ್ನೂ ಓದಿ: ಕೇವಲ ₹44,000ಕ್ಕೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್! ಸಿಂಗಲ್ ಚಾರ್ಜ್ಗೆ 142 ಕಿಮೀ ಮೈಲೇಜ್
ಆಫ್ಲೈನ್ ಆಯ್ಕೆ ಬೇಕಾದ್ರೆ, ನೀವೆಲ್ಲೂ ಹೋಗದೆ ನಿಮ್ಮ ಬೂತ್ ಲೆವಲ್ ಆಫೀಸರ್ಗೆ ಫಾರ್ಮ್ 8 ತುಂಬಿ ಕೊಡಬಹುದಾಗಿದೆ. ಇದು ನೇರವಾಗಿ ಚುನಾವಣಾ ಆಯೋಗದ ಡೇಟಾಬೇಸ್ನಲ್ಲಿ ನಿಮ್ಮ ಹೊಸ ಫೋಟೋ ಸೇರಿಸುತ್ತದೆ.
ಇದೇನೂ ಹೊಸ ಐಡಿ ಕಾರ್ಡ್ ತಗೆದುಕೊಳ್ಳುವ ವೇಳೆ ಮಾತ್ರವಲ್ಲ. ನೀವು ಯಾವುದೇ ಸಮಯದಲ್ಲೂ ಈ ಫೋಟೋ ಬದಲಾಯಿಸಬಹುದಾದ ಸೌಲಭ್ಯವನ್ನು ಚುನಾವಣಾ ಆಯೋಗ ನೀಡಿದೆ. ಇದು ನಿಜಕ್ಕೂ ಎಲ್ಲರಿಗೂ ಉಪಯುಕ್ತ ಮಾಹಿತಿ.
ಇದನ್ನೂ ಓದಿ: ಹೊಸ ಯೋಜನೆ, ಮಹಿಳೆಯರಿಗೆ ತಿಂಗಳಿಗೆ ₹7,000 ಸಿಗುತ್ತೆ! ಇಲ್ಲಿದೆ ಅರ್ಜಿ ಪ್ರಕ್ರಿಯೆ
ಒಟ್ಟು ಪ್ರಕ್ರಿಯೆಗೂ ಒಂದು Reference ID ಸಿಗುತ್ತದೆ – ಅದು ಭವಿಷ್ಯದಲ್ಲಿ ಟ್ರಾಕಿಂಗ್ಗಾಗಿ ಉಪಯೋಗವಾಗುತ್ತದೆ. ಇದನ್ನೆಲ್ಲಾ ಮಾಡೋಕೆ ಒಂದೆರಡು ನಿಮಿಷ ಸಾಕು – ಸಿಂಪಲ್ ಹಾಗೂ ಉಚಿತ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Update your voter ID photo from home, free and easy online method




