ಕಮ್ಮಿ ಬೆಲೆ ಅಂತ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳೋ ಪ್ಲಾನ್ ಇದ್ಯಾ? ಈ ತಪ್ಪು ಮಾಡಿದ್ರೆ ನಷ್ಟ ಖಚಿತ
ಕಡಿಮೆ ಬಜೆಟ್ನಲ್ಲಿ ಕಾರು ಕನಸು ಕಂಡವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಎಚ್ಚರ ತಪ್ಪಿದ್ರೆ ಮೋಸಕ್ಕೊಳಗಾಗಬಹುದು. ಖರೀದಿಗೆ ಮೊದಲು ಈ ಮುಖ್ಯ ವಿಚಾರಗಳನ್ನು ತಪ್ಪದೇ ಪರಿಶೀಲಿಸಬೇಕು.
- ಸೆಕೆಂಡ್ ಹ್ಯಾಂಡ್ ಕಾರು ಖರೀದಿ, ಮೋಸದ ಅಪಾಯ
- ಕಾರಿನ ಸ್ಥಿತಿ, ದಾಖಲೆಗಳ ಪರಿಶೀಲನೆ ಅಗತ್ಯ
- ಟೆಸ್ಟ್ ಡ್ರೈವ್ ಮಾಡದೇ ಕಾರು ಖರೀದಿಸಬೇಡಿ
Second Hand Car: ದೊಡ್ಡ ಕುಟುಂಬವಿದ್ದರೆ ಬೈಕ್ (Bike) ಸಾಕಾಗುವುದಿಲ್ಲ. ಎಲ್ಲರೂ ಒಟ್ಟಿಗೆ ಸಂಚರಿಸಲು ಕಾರು ಅನಿವಾರ್ಯವಾಗುತ್ತದೆ. ಆದರೆ ಹೊಸ ಕಾರು ಖರೀದಿಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ.
ಈ ಕಾರಣಕ್ಕೆ ಅನೇಕರು ಸೆಕೆಂಡ್ ಹ್ಯಾಂಡ್ ಅಥವಾ ಯೂಸ್ಡ್ ಕಾರುಗಳತ್ತ (Used Car) ಮುಖ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಸ್ವಲ್ಪ ಅಜಾಗರೂಕತೆ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಡೀಲರ್ಗಳ ಮೋಸದಿಂದ ಎಚ್ಚರ
ಕೆಲವರು ಯೂಸ್ಡ್ ಕಾರು ಡೀಲರ್ಗಳು (Car Dealer) ಸರಿಯಾದ ಸ್ಥಿತಿಯಲ್ಲಿಲ್ಲದ ಕಾರುಗಳನ್ನು ಚೆನ್ನಾಗಿರುವಂತೆ ತೋರಿಸಿ ಮಾರಾಟ ಮಾಡುವ ಘಟನೆಗಳು ಹೆಚ್ಚಾಗಿವೆ. ಸಾಧ್ಯವಾದರೆ ನೇರವಾಗಿ ಕಾರಿನ ಮಾಲೀಕರಿಂದ ಖರೀದಿಸುವುದು ಸುರಕ್ಷಿತ. ಡೀಲರ್ ಬಳಿ ಕೊಳ್ಳಬೇಕಾದರೆ ಪ್ರತಿಯೊಂದು ಅಂಶವನ್ನು ಸ್ವತಃ ಪರಿಶೀಲಿಸಬೇಕು.
ಇದನ್ನೂ ಓದಿ: ಚಿನ್ನದ ಬೆಲೆ ಇಳಿಯಲಿ ಅಂತ ಕಾಯ್ತಿದ್ದೀರಾ? ಬೆಂಗಳೂರು ಮಾರುಕಟ್ಟೆಯಲ್ಲಿ ಮತ್ತೆ ಏರಿಕೆ ಬಿಸಿ
ಕಾರಿನ ಸ್ಥಿತಿ ಚೆಕ್ ಮಾಡೋದು ಮುಖ್ಯ
ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮೊದಲು ಅದರ ಹೊರ ಮತ್ತು ಒಳ ಸ್ಥಿತಿಯನ್ನು ಗಮನಿಸಿ. ಸ್ಕ್ರಾಚ್, ಡೆಂಟ್, ಟೈರ್ಗಳ ಸ್ಥಿತಿ ಹೇಗಿದೆ ಎಂಬುದನ್ನು ನೋಡಿ. ಎಂಜಿನ್ ಸ್ಟಾರ್ಟ್ ಮಾಡಿದಾಗ ಅಸಹಜ ಶಬ್ದ, ಹೊಗೆ ಅಥವಾ ಗಿಯರ್ ಸಮಸ್ಯೆ ಇದೆಯೇ ಎಂದು ಪರಿಶೀಲಿಸಬೇಕು. ಎಂಜಿನ್ ಸ್ಥಿತಿ ಚೆನ್ನಾಗಿದ್ದರೆ ಮಾತ್ರ ಕಾರು ಆಯ್ಕೆ ಮಾಡುವುದು ಒಳಿತು.
ದಾಖಲೆಗಳ ಪರಿಶೀಲನೆ
ಕಾರಿನ ಮೇಲೆ ಯಾವುದೇ ಕಾನೂನು ಪ್ರಕರಣಗಳಿವೆಯೇ ಎಂದು ತಿಳಿದುಕೊಳ್ಳಿ. ಟ್ರಾಫಿಕ್ ಚಲಾನ್ಗಳು ಬಾಕಿ ಇದ್ದರೆ ನಂತರ ಅದನ್ನು ನೀವು ಕಟ್ಟಬೇಕಾಗುತ್ತದೆ. ಇನ್ಶೂರೆನ್ಸ್, ಪಲ್ಯೂಷನ್ ಸರ್ಟಿಫಿಕೇಟ್ ಮಾನ್ಯವಾಗಿದೆಯೇ, ಲೋನ್ ಕಾರಾದರೆ NOC ಲಭ್ಯವಿದೆಯೇ ಎಂಬುದನ್ನು ತಪ್ಪದೇ ಪರಿಶೀಲಿಸಿ.
ಟೆಸ್ಟ್ ಡ್ರೈವ್ ಮಿಸ್ ಮಾಡ್ಬೇಡಿ
ಯೂಸ್ಡ್ ಕಾರು ಖರೀದಿಸುವಾಗ ಟೆಸ್ಟ್ ಡ್ರೈವ್ ಅತ್ಯಂತ ಮುಖ್ಯ. ಓಡೋಮೀಟರ್ ರೀಡಿಂಗ್ ನೋಡಿ ಕಾರು ಎಷ್ಟು ದೂರ ಓಡಿದೆ ಎಂಬುದನ್ನು ಅಂದಾಜಿಸಿ. ಅತಿಯಾಗಿ ಕಡಿಮೆ ಕಿಲೋಮೀಟರ್ ತೋರಿಸಿದರೆ ಸರ್ವಿಸ್ ದಾಖಲೆಗಳೊಂದಿಗೆ ಹೋಲಿಸಿ ಪರಿಶೀಲನೆ ಮಾಡುವುದು ಒಳಿತು.



