ಫ್ಯಾಮಿಲಿಯಲ್ಲಿ ಯಾರಾದ್ರೂ ಲೋನ್ ತಗೊಂಡು ಮೃತಪಟ್ಟರೆ, ಆ ಸಾಲ ಯಾರು ತೀರಿಸಬೇಕು?

ಅಕಸ್ಮಾತ್‌ ಸಾಲ ಪಡೆದ ವ್ಯಕ್ತಿಯ ಸಾವು ಸಂಭವಿಸಿದಾಗ ಮನೆ, ಕಾರು, ವ್ಯಕ್ತಿಗತ ಸಾಲಗಳು ಏನಾಗುತ್ತದೆ? ಕುಟುಂಬವೇ ಹೊಣೆ ಹೊರಬೇಕಾ, ಅಥವಾ ಬ್ಯಾಂಕ್‌ ಕ್ರಮ ಹೇಗಿರುತ್ತದೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

Loan: ಇಂದಿನ ದಿನಗಳಲ್ಲಿ ಮನೆ, ಕಾರು ಅಥವಾ ತುರ್ತು ವೆಚ್ಚಗಳಿಗೆ ಸಾಲ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಸಾಲ ಪಡೆದ ವ್ಯಕ್ತಿ ಅಚಾನಕ್‌ ನಿಧನರಾದರೆ, ಉಳಿದಿರುವ ಸಾಲದ ಜವಾಬ್ದಾರಿ ಯಾರಿಗೆ ಬರುತ್ತದೆ ಎಂಬ ಪ್ರಶ್ನೆ ಅನೇಕ ಕುಟುಂಬಗಳನ್ನು ಗೊಂದಲಕ್ಕೊಳಪಡಿಸುತ್ತದೆ.

ಬ್ಯಾಂಕ್‌ಗಳು ಯಾವ ಕ್ರಮ ಕೈಗೊಳ್ಳುತ್ತವೆ, ಹಾಮಿದಾರರ ಪಾತ್ರ ಏನು, ಆಸ್ತಿಯನ್ನು ಜಪ್ತಿ ಮಾಡುವ ಅವಕಾಶ ಯಾವಾಗ ಬರುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿಯಮಗಳೇ ಇವೆ.

ಇದನ್ನೂ ಓದಿ: ಯಾವುದೇ ಶುಲ್ಕವಿಲ್ಲದ ಟಾಪ್ 6 ಅತ್ಯುತ್ತಮ ಕ್ರೆಡಿಟ್ ಕಾರ್ಡ್‌ಗಳು ಇವು! ಸಂಪೂರ್ಣ ಉಚಿತ

ಗೃಹ ಸಾಲ

ಗೃಹ ಸಾಲವನ್ನು (Home Loan) ತೆಗೆದುಕೊಂಡ ವ್ಯಕ್ತಿ ಸಾವನಪ್ಪಿದರೆ, ಬ್ಯಾಂಕ್ ಮೊದಲು ಸಹ-ಸಾಲಗಾರ ಅಥವಾ ಜಾಮೀನುದಾರರನ್ನು ಸಂಪರ್ಕಿಸುತ್ತದೆ. ಇಬ್ಬರೂ ಪಾವತಿಸಲು ಸಾಧ್ಯವಿಲ್ಲ ಎಂದರೆ ಬ್ಯಾಂಕ್‌ ನೇರವಾಗಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಕ್ರಮ ಆರಂಭಿಸುತ್ತದೆ.

ಆದರೆ ಈ ಪ್ರಕ್ರಿಯೆ ತಕ್ಷಣ ನಡೆಯುವುದಿಲ್ಲ, ಕುಟುಂಬಕ್ಕೆ ನೋಟಿಸ್ ನೀಡಿ ಸಮಯ ನೀಡಲಾಗುತ್ತದೆ.
ಆಸ್ತಿಗೆ ಲೋನ್ ಇನ್ಶೂರೆನ್ಸ್ ಇದ್ದರೆ ಸಾಲದ ಭಾರ ಸಂಪೂರ್ಣವಾಗಿ ವಿಮಾ ಕಂಪನಿಯ ಮೇಲೆಯೇ ಬೀಳುತ್ತದೆ, ಕುಟುಂಬಕ್ಕೆ ಯಾವುದೇ ಆರ್ಥಿಕ ಒತ್ತಡವಿಲ್ಲ.

ಕಾರ್ ಲೋನ್

ಕಾರು ಸಾಲವು (Car Loan) ಸಿಕ್ಯುರ್ಡ್ ವರ್ಗಕ್ಕೆ ಸೇರುತ್ತದೆ. ಸಾಲಗಾರನ ಸಾವಿನ ನಂತರ ಕುಟುಂಬ ಸದಸ್ಯರು ಪಾವತಿಗೆ ನಿರಾಕರಿಸಿದರೆ, ಕಾರು ನೇರವಾಗಿ ಬ್ಯಾಂಕ್ ಆಸ್ತಿಯಾಗುತ್ತದೆ. ಬ್ಯಾಂಕ್ ನಂತರ ಅದನ್ನು ಹರಾಜಿನಲ್ಲಿ ಮಾರಾಟ ಮಾಡಿ ಬಾಕಿ ಮೊತ್ತವನ್ನು ವಸೂಲಿ ಮಾಡುತ್ತದೆ.

ಮಾರಾಟದಿಂದ ಬಂದ ಹಣ ಸಾಲಕ್ಕಿಂತ ಕಡಿಮೆ ಆಗಿದೆಯೆಂದರೆ, ಉಳಿದ ಮೊತ್ತವನ್ನು ಕುಟುಂಬದಿಂದಲೇ ಕೇಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಿಸಾನ್ ಟ್ರ್ಯಾಕ್ಟರ್ ಯೋಜನೆ: ರೈತರು ಟ್ರ್ಯಾಕ್ಟರ್ ಖರೀದಿಗೆ 50% ಸಬ್ಸಿಡಿ ಸುವರ್ಣಾವಕಾಶ!

ವ್ಯಕ್ತಿಗತ ಸಾಲ – ಜಾಮೀನಿಲ್ಲದ ಕಾರಣ ಕಠಿಣ ನಿಯಮಗಳು

ವೈಯಕ್ತಿಕ ಸಾಲದಲ್ಲಿ (Personal Loan) ಪಾವತಿಯಾಗದ ಹಂತದಲ್ಲಿ, ಬ್ಯಾಂಕ್ ಮೊದಲು ಸಹ-ಸಾಲಗಾರ ಮತ್ತು ಜಾಮೀನುದಾರರನ್ನು ಸಂಪರ್ಕಿಸುತ್ತದೆ. ಫಲಿತಾಂಶ ಸಿಗದಿದ್ದರೆ ಕುಟುಂಬ ಸದಸ್ಯರಿಂದ ಪಾವತಿ ಕೇಳಲಾಗುತ್ತದೆ.

ಯಾವುದೇ ಆಸ್ತಿಯೂ ಇಲ್ಲದಿದ್ದರೆ, ಬ್ಯಾಂಕ್ ಆ ಸಾಲನ್ನು NPA – ನಿರರ್ಥಕ ಆಸ್ತಿ ಎಂದು ಪರಿಗಣಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ನಷ್ಟವನ್ನು ಒಪ್ಪಿಕೊಳ್ಳುತ್ತದೆ.

ಬಹುತೇಕ ಸಾಲಗಳಿಗೆ ಬ್ಯಾಂಕ್‌ಗಳು (Bank Loan) ಈಗಾಗಲೇ ವಿಮಾ ಪ್ರೀಮಿಯಂ ಸೇರಿಸಿರುತ್ತವೆ. ಅಂದರೆ ಸಾಲಗಾರ ಸಾವನ್ನಪ್ಪಿದಾಗ, ವಿಮೆ ಕಂಪನಿ ಸಾಲದ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸುತ್ತದೆ. ಇದರಿಂದ ಕುಟುಂಬಕ್ಕೆ ಯಾವುದೇ ಆರ್ಥಿಕ ಬಾಧ್ಯತೆ ಬರುವುದಿಲ್ಲ.

What Happens to Loans If the Borrower Dies

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories