Business News

20 ವರ್ಷಕ್ಕೆ 45 ಲಕ್ಷ ಹೋಮ್ ಲೋನ್ ಪಡೆದರೆ ತಿಂಗಳಿಗೆ ಎಷ್ಟು EMI ಪಾವತಿಸಬೇಕು?

Home Loan : ಮನೆ ಕಟ್ಟಬೇಕು ಅಂದ್ರೆ ಗೃಹ ಸಾಲವನ್ನು ತೆಗೆದುಕೊಳ್ಳುವುದು ಸಹಜ ಬೇರೆ ಬೇರೆ ಬ್ಯಾಂಕ್ಗಳಲ್ಲಿ (Banks) ಬೇರೆ ಬೇರೆ ರೀತಿಯ ನಿಯಮಗಳ ಅಡಿಯಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಬಹುದು.

ಇನ್ನು ಹೀಗೆ ಗೃಹ ಸಾಲವನ್ನು ನಿಮಗೆ ಬೇಕಾದ ಅವರಿಗೆ ಬೇಕಷ್ಟು ಮೊತ್ತವನ್ನು ತೆಗೆದುಕೊಳ್ಳಲು ಅವಕಾಶವಿದೆ. ನಿಮ್ಮ ಆದಾಯ ಹಾಗೂ ಇತರ ಆರ್ಥಿಕ ಮೂಲವನ್ನು ಗಮನದಲ್ಲಿಟ್ಟುಕೊಂಡು ಗೃಹ ಸಾಲವನ್ನು ಮಂಜೂರು ಮಾಡಲಾಗುತ್ತದೆ.

20 ವರ್ಷಕ್ಕೆ 45 ಲಕ್ಷ ಹೋಮ್ ಲೋನ್ ಪಡೆದರೆ ತಿಂಗಳಿಗೆ ಎಷ್ಟು EMI ಪಾವತಿಸಬೇಕು?

ಗೃಹ ಸಾಲಕ್ಕೆ ಪಾವತಿಸಬೇಕಾದ EMI

ಮನೆ ಕಟ್ಟುವ ಕನಸನ್ನು ನನಸಾಗಿಸಿಕೊಳ್ಳಲು ಗೃಹ ಸಾಲವನ್ನು ತೆಗೆದುಕೊಳ್ಳುವುದು ಸಹಜ. ಇತ್ತೀಚೆಗೆ ಆನ್ಲೈನ್ ನಲ್ಲಿಯೂ ಗೃಹ ಸಾಲವನ್ನು (Home Loan) ಬೇರೆ ಬೇರೆ ಅಪ್ಲಿಕೇಶನ್ ಮೂಲಕ ತೆಗೆದುಕೊಳ್ಳಬಹುದು, ಆದರೆ ಎಲ್ಲದಕ್ಕಿಂತ ಸೇಫೆಸ್ಟ್ ಪ್ಲೇಸ್ ಅಂದ್ರೆ ಬ್ಯಾಂಕ್.

ಅದರಲ್ಲೂ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಂತಹ ಸಾರ್ವಜನಿಕ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡರೆ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಅವಧಿ ಲಾಭ ಪಡೆದು ಸಾಲ ಮರುಪಾವತಿ ಮಾಡಬಹುದು. ಉದಾಹರಣೆಗೆ ಎಸ್ ಬಿ ಐ ಬ್ಯಾಂಕ್ ನಲ್ಲಿ (SBI Bank) 20 ವರ್ಷಗಳ ಕಾಲಾವಧಿಗೆ 45 ಲಕ್ಷ ರೂಪಾಯಿಯನ್ನು ಸಾಲ ತೆಗೆದುಕೊಂಡರೆ ಪಾವತಿಸಬೇಕಾದ EMI ಎಷ್ಟು ಎಂಬುದನ್ನು ನೋಡೋಣ.

ಬ್ಯಾಂಕ್ ನಲ್ಲಿ ಯಾವುದೇ ಸಾಲ ತೆಗೆದುಕೊಳ್ಳುವುದಿಲ್ಲ. ಮೊದಲು ಗ್ರಾಹಕರ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ನೋಡುತ್ತಾರೆ. 750 ಪಾಯಿಂಟ್ಗಿಂತಲೂ ಹೆಚ್ಚು ಇದ್ದರೆ ಸುಲಭವಾಗಿ ಯಾವುದೇ ಸಾಲವನ್ನು ಬ್ಯಾಂಕ್ ನೀಡುತ್ತದೆ.

ಬ್ಯಾಂಕ್ ಲಾಕರ್ ನಲ್ಲಿ ಕ್ಯಾಶ್ ಕೂಡ ಇಡಬಹುದಾ? ಬ್ಯಾಂಕ್ ನಿಯಮ ಏನಿದೆ

ಎಸ್ಬಿಐ ನಲ್ಲಿ 800 ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ (CIBIL Score) ಹೊಂದಿರುವವರು ಕೇವಲ 9.15% ಬಡ್ಡಿ ದರದಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಬಹುದು. ಅದೇ 700 ರಿಂದ 799 ನಡುವಿನ ಕ್ರೆಡಿಟ್ ಸ್ಕೂಲ್ ಹೊಂದಿರುವವರಿಗೆ ಶೇಕಡಾ 9.25 ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.

ಇನ್ನು 700 ರಿಂದ 749. ಕಳನ್ನು ಹೊಂದಿದ್ದರೆ, 9.35% ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಇದಕ್ಕಿಂತ ಸಿಬಿಲ್ ಸ್ಕೋರ್ ಕಡಿಮೆ ಎಂದರೆ ಬಡ್ಡಿ ದರವು ಹೆಚ್ಚಾಗುತ್ತದೆ. ಇನ್ನು ಎಸ್‌ಬಿಐ ನಲ್ಲಿ ಸಾಲ ಮೂತ್ತದ 0.35 ರಿಂದ 0.50% ಪ್ರೊಸೆಸಿಲ್ಫಿ ವಿಧಿಸಲಾಗುತ್ತದೆ.

ಇದರ ಜೊತೆಗೆ ಜಿ ಎಸ್ ಟಿ ಯನ್ನು ಪಾವತಿಸಬೇಕು. ನಿಮ್ಮ ಸಿಬಿಲ್ ಸ್ಕೋರು ಉತ್ತಮವಾಗಿದ್ದು 9.15% ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡರೆ, 20 ವರ್ಷಗಳ ಕಾಲಾವಧಿಗೆ 45 ಲಕ್ಷ ರೂಪಾಯಿಗಳಿಗೆ ಪ್ರತಿ ತಿಂಗಳು 40,923 ರೂಪಾಯಿಗಳನ್ನು EMI ಆಗಿ ಪಾವತಿಸಬೇಕು.

What’s the monthly EMI for 45 lakh home loan for 20 years

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories