ಬ್ಯಾಂಕ್ ಲಾಕರ್ ನಲ್ಲಿ ಕ್ಯಾಶ್ ಕೂಡ ಇಡಬಹುದಾ? ಬ್ಯಾಂಕ್ ನಿಯಮ ಏನಿದೆ
ಮನೆಯಲ್ಲಿ ಅಮೂಲ್ಯವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಅಷ್ಟು ಸೇಫ್ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಸಾಕಷ್ಟು ಜನ ಚಿನ್ನಾಭರಣಗಳನ್ನ, ಚಿನ್ನದ ನಾಣ್ಯಗಳನ್ನು ಅಥವಾ ಬಹಳ ಮುಖ್ಯವಾಗಿರುವ ಕಾಗದಪತ್ರಗಳನ್ನು ಬ್ಯಾಂಕ್ನ ಲಾಕರ್ ನಲ್ಲಿ ಇಡುತ್ತಾರೆ.
ಈಗಂತೂ ಕಳ್ಳ ಕಾಕರ ಹಾವಳಿ ಹೆಚ್ಚಾಗಿದೆ. ಯಾರನ್ನೂ ನಂಬುವಂತೆ ಇಲ್ಲ, ಯಾರನ್ನು ನಂಬಿ ಮನೆ ಬಿಟ್ಟು ಹೋಗುವುದು ಕೂಡ ಕಷ್ಟ. ಹೀಗಾಗಿ ಬಹಳ ಅಮೂಲ್ಯವಾಗಿರುವ ವಸ್ತುವನ್ನು ಬ್ಯಾಂಕಿನಲ್ಲಿ ಲಾಕರ್ ನಲ್ಲಿ ಇಟ್ಟರೆ ಯಾವುದೇ ರೀತಿಯ ಅಸುರಕ್ಷತೆಯ ಭಯ ಇರುವುದಿಲ್ಲ.
ಬ್ಯಾಂಕ್ ಲಾಕರ್ ನಲ್ಲಿ ಏನೆಲ್ಲಾ ವಸ್ತುಗಳನ್ನು ಇಡಬಹುದು?
ಆರ್ ಬಿ ಐ ಬ್ಯಾಂಕ್ ಲಾಕರ್ ನಲ್ಲಿ ಇಡಬಹುದಾದ ವಸ್ತುಗಳ ಬಗ್ಗೆ ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸದೆ ಇದರ ಪ್ರಕಾರ ಬ್ಯಾಂಕ್ ನ ಲಾಕರ್ ನಲ್ಲಿ ಯಾವೆಲ್ಲಾ ವಸ್ತುಗಳನ್ನ ಇಡಬಹುದು ಎಂಬುದನ್ನು ಕೂಡ ಹೇಳಲಾಗಿದೆ.
ಬ್ಯಾಂಕ್ ನ ಲಾಕರ್ ನಲ್ಲಿ ಚಿನ್ನದ ಆಭರಣಗಳು, ಚಿನ್ನದ ನಾಣ್ಯಗಳು, ಮದುವೆ ಪತ್ರ ಆಸ್ತಿ ಪತ್ರ ಜನನ ಮತ್ತು ಮರಣ ಪ್ರಮಾಣ ಪತ್ರದಂತಹ ಪ್ರಮುಖವಾಗಿರುವ ದಾಖಲೆಗಳು ಈ ಮೊದಲಾದ ಕಾಗದ ಪತ್ರಗಳನ್ನು ಲಾಕರ್ ನಲ್ಲಿ ಇಡಬಹುದು. ಲಾಕರ್ ನಲ್ಲಿ ಇಡುವ ಪ್ರತಿ ವಸ್ತುವಿಗೂ ಬ್ಯಾಂಕ್ ವಾರ್ಷಿಕ ಬಾಡಿಗೆಯನ್ನು ವಿಧಿಸುತ್ತದೆ ಪ್ರತಿ ವರ್ಷಕ್ಕೆ ಸಾವಿರ ರೂಪಾಯಿಗಳ ಬಾಡಿಗೆ ಪಾವತಿ ಮಾಡಬೇಕು.
ಬಂಪರ್ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ ಏರ್ಟೆಲ್ ಮತ್ತು ಜಿಯೋ
ಈ ವಸ್ತುಗಳನ್ನು ಲಾಕರ್ ನಲ್ಲಿ ಇಡುವಂತಿಲ್ಲ?
ನೀವು ಬ್ಯಾಂಕನ್ನು ಲಾಕರ್ ನಲ್ಲಿ ನಗದು ಹಣವನ್ನು ಇಡುವಂತಿಲ್ಲ. ಹಣ ಕೂಡ ಅಮೂಲ್ಯವಾದದ್ದು ಹೀಗಾಗಿ ಲಾಕರ್ ನಲ್ಲಿ ಇಡಬಹುದಲ್ಲವೇ ಎನ್ನುವ ಪ್ರಶ್ನೆ ಹಲವರಲ್ಲಿ ಇರಬಹುದು. ಆದರೆ ಆರ್ ಬಿಐ ನಿಯಮದ ಪ್ರಕಾರ ಲಾಕರ್ ನಲ್ಲಿ ಕ್ಯಾಶ್ ಇಡುವಂತಿಲ್ಲ.
ಹಾಗೆ ಒಂದು ವೇಳೆ ಬ್ಯಾಂಕ್ ನಿಯಮಕ್ಕೆ ವಿರುದ್ಧವಾಗಿ ಕ್ಯಾಶ್ ಅನ್ನು ಇಟ್ಟರೆ, ಆ ಹಣ ನಷ್ಟವಾದರೆ ಅದಕ್ಕೆ ಬ್ಯಾಂಕ್ ಹೊಣೆಗಾರನಾಗಿರುವುದಿಲ್ಲ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಬ್ಯಾಂಕ್ ನಿಯಮಗಳನ್ನು ಮೀರಿ ಲಾಕರ್ ನಲ್ಲಿ ಕ್ಯಾಶ್ ಅನ್ನು ಇಟ್ಟಿದ್ದ. ಆದರೆ ಕೆಲವು ವರ್ಷಗಳ ನಂತರ ಆ ಕ್ಯಾಶ್ ಗೆದ್ದಲು ತಿಂದು ಹೋಗಿತ್ತು.
ಹೊಸ ಮನೆ, ಹಳೆಯ ಮನೆ ರಿಪೇರಿ ಹಾಗೂ ಮನೆ ವಿಸ್ತರಣೆಗೂ ಸಿಗುತ್ತೆ ಹೋಮ್ ಲೋನ್
ಹೀಗಾಗಿ ಆತ ಇಟ್ಟ ರೂ.5,00,000 ಹಣ ಕಳೆದುಕೊಂಡಿದ್ದ ಬ್ಯಾಂಕ್ಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಇರುವ ಕಾರಣ ಬ್ಯಾಂಕ್ ಆತನಿಗೆ ಹಣ ಹಿಂತಿರುಗಿಸಲಿಲ್ಲ. ಹೀಗಾಗಿ ಬ್ಯಾಂಕ್ ಲಾಕರ್ ನಲ್ಲಿ ಕ್ಯಾಶ್ ಇಡಬಾರದು ಎನ್ನುವ ನಿಯಮವನ್ನು ಮಾಡಲಾಗಿದೆ.
ಇನ್ ಕ್ಯಾಶ್ ಮಾತ್ರವಲ್ಲದೆ, ಹಾಳಾಗುವಂತಹ ತರಕಾರಿ ಹಣ್ಣುಗಳು, ಮಾದಕ ವಸ್ತುಗಳು ಶಸ್ತ್ರಾಸ್ತ್ರಗಳು ಹಾಗೂ ಇತರ ಅಪಾಯಕಾರಿ ವಸ್ತುಗಳನ್ನು ಕೂಡ ಬ್ಯಾಂಕ್ ಲಾಕರ್ ನಲ್ಲಿ ಇಡುವಂತಿಲ್ಲ.
ಲಾಕರ್ ನಲ್ಲಿ ಇಟ್ಟ ವಸ್ತುವಿಗೆ ಜವಾಬ್ದಾರಿ ಯಾರು?
ಬ್ಯಾಂಕಿನಿಂದ ಯಾವುದೇ ತಪ್ಪಾಗಿ ಲಾಕರ್ ನಲ್ಲಿ ಇಟ್ಟ ವಸ್ತು ಕಳೆದು ಹೋದರೆ ಬಾಡಿಗೆಯ 100 ಪಟ್ಟು ಅಂದರೆ ಒಂದು ಸಾವಿರಕ್ಕೆ ಒಂದು ಲಕ್ಷ ರೂಪಾಯಿಗಳಷ್ಟು ಹಣವನ್ನು ಬ್ಯಾಂಕ್ ಗ್ರಾಹಕರಿಗೆ ಪಾವತಿಸಬೇಕು. ಪ್ರಕೃತಿ ವಿಕೋಪದ ಹೊರತಾಗಿ ಇತರ ಬ್ಯಾಂಕ್ ಸಮಸ್ಯೆಗಳಿಂದ ಲಾಕರ್ ನಲ್ಲಿ ಇಟ್ಟ ವಸ್ತುವನ್ನು ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ನೇರವಾಗಿ ಹೊಣೆಗಾರನಾಗಿರುತ್ತದೆ.
Can You Keep Cash in a Bank Locker, Here’s What the Rules Say