Technology

ಬಂಪರ್ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ ಏರ್ಟೆಲ್ ಮತ್ತು ಜಿಯೋ

ಟೆಲಿಕಾಂ ರೆಗುಲೇಟರ್ ಅಥಾರಿಟಿ ಆಫ್ ಇಂಡಿಯಾ ಡಿಸೆಂಬರ್ 23, 2023ಕ್ಕೇ ಪ್ರತಿಯೊಂದು ಟೆಲಿಕಾಂ ಕಂಪನಿಗೂ ಆದೇಶ ಹೊರಡಿಸಿತ್ತು. ಇನ್ನು ಮುಂದೆ ಗ್ರಾಹಕರಿಗೆ ಅನುಕೂಲವಾಗುವಂತೆ ವಾಯ್ಸ್ ಕಾಲ್ ಓನ್ಲಿ ಪ್ಲಾನ್ ಗಳನ್ನು ಕೂಡ ಬಿಡುಗಡೆ ಮಾಡಬೇಕು ಎಂದಿತ್ತು.

ಇದೀಗ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು TRAI ತಿಳಿಸಿರುವಂತೆ, ಡಾಟಾ ಇಲ್ಲದೆ ಕೇವಲ ಕರೆ ಮತ್ತು ಎಸ್ಎಮ್ಎಸ್ ಸೌಲಭ್ಯವನ್ನು ಒದಗಿಸುವಂತಹ ಬಿಡುಗಡೆ ಮಾಡಿವೆ.

ಬಂಪರ್ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ ಏರ್ಟೆಲ್ ಮತ್ತು ಜಿಯೋ

84 ದಿನಗಳ ವ್ಯಾಲಿಡಿಟಿ ಹೊಂದಿರುವ ಜಿಯೋ ಪ್ಲಾನ್!

ರಿಲಯನ್ಸ್ ಜಿಯೋ 458 ಮತ್ತು 1958 ರೂಪಾಯಿಗಳ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಈ ಪ್ಲಾನ್ ಮೂಲಕ ದೇಶಾದ್ಯಂತ ಯಾವುದೇ ನೆಟ್ವರ್ಕ್ ಗೆ ಜಿಯೋಗ್ರಾಹಕರು ಅನಿಯಮಿತ ಕರೆ ಮಾಡಬಹುದು, ಜೊತೆಗೆ ಸಾವಿರ ಎಸ್ಎಂಎಸ್ ಫ್ರೀ ಇರುತ್ತದೆ.

ಆದರೆ ಈ ಯೋಜನೆಯಲ್ಲಿ ಯಾವುದೇ ರೀತಿಯ ಡಾಟಾ ಕೊಡಲಾಗುವುದಿಲ್ಲ. ಗ್ರಾಮೀಣ ಭಾಗದಲ್ಲಿ ಇರುವ ಜನರಿಗೆ 2ಜಿ ನೆಟ್ವರ್ಕ್ ಬಳಕೆ ಮಾಡುವವರಿಗೆ ಹಾಗೂ ಡುಯಲ್ ಸಿಮ್ ಇಟ್ಟುಕೊಂಡಿರುವವರಿಗೆ ಈ ಪ್ಲಾನ್ ಹೆಚ್ಚು ಪ್ರಯೋಜನಕಾರಿ ಆಗಲಿದೆ.

ಇನ್ನು 1958 ರೂಪಾಯಿಗಳ ಪ್ಲಾನ್ ರಿಚಾರ್ಜ್ ಮಾಡಿಕೊಂಡರೆ ಒಂದು ವರ್ಷದವರೆಗೆ ಅನ್ಲಿಮಿಟೆಡ್ ಕರೆ ಸೌಲಭ್ಯ ಹಾಗೂ 3,600 ಎಸ್ಎಂಎಸ್ ಗಳು ಉಚಿತವಾಗಿ ಸಿಗುತ್ತವೆ. ಇದರಲ್ಲಿ ಯಾವುದೇ ಡಾಟ ಪ್ರಯೋಜನ ಸಿಗುವುದಿಲ್ಲ.

ಏರ್ಟೆಲ್ 509 ರೂ ಪಾಯಿಗಳ ಪ್ಲಾನ್!

ಇದು ಕೂಡ 84 ದಿನಗಳ ವ್ಯಾಲಿಡಿಟಿ ಹೊಂದಿದೆ 900 ಎಸ್ಎಂಎಸ್ ಗಳನ್ನು ಹಾಗೂ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದು. ಇನ್ನು ಈ ಸೌಲಭ್ಯ ಒಂದು ವರ್ಷಗಳವರೆಗೆ ಬೇಕಿದ್ದಲ್ಲಿ, 1,999 ರೂಪಾಯಿಗಳನ್ನು ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ಅನಿಯಮಿತ ಕರೆ ಸೌಲಭ್ಯ ಹಾಗೂ 300 ಎಸ್ಎಂಎಸ್ ಗಳು ಉಚಿತವಾಗಿ ಸಿಗುತ್ತವೆ. ಎರಡು ಪ್ಲಾನ್ ನಲ್ಲಿ ಡಾಟಾ ಸೌಲಭ್ಯ ಇರುವುದಿಲ್ಲ.

Airtel and Jio Announce Bumper Recharge Plans

Stay connected with the latest bumper recharge plans unveiled by Airtel and Jio. Check out the benefits and choose the best plan for you!

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories