Business News

ಹೊಸ ಮನೆ, ಹಳೆಯ ಮನೆ ರಿಪೇರಿ ಹಾಗೂ ಮನೆ ವಿಸ್ತರಣೆಗೂ ಸಿಗುತ್ತೆ ಹೋಮ್ ಲೋನ್

Home Loan : ಜೀವನದಲ್ಲಿ ಒಮ್ಮೆಯಾದರೂ ಸ್ವಂತ ಮನೆ ನಿರ್ಮಾಣ ಮಾಡಿಕೊಂಡು ಅದರಲ್ಲಿ ಕೆಲವು ದಿನವಾದರೂ ವಾಸಿಸಬೇಕು ಎನ್ನುವುದು ಹಲವರ ಕನಸು. ಹಾಗಾಗಿಯೇ ಸಾಕಷ್ಟು ಜನ ದುಡಿದ ಹಣದಲ್ಲಿ ಒಂದಷ್ಟು ಹಣವನ್ನ ಮನೆ ನಿರ್ಮಾಣಕ್ಕಾಗಿ ಎತ್ತಿಡುತ್ತಾರೆ.

ಇನ್ನು ಶತಾಯಗತಾಯ ಮನೆ ನಿರ್ಮಾಣ ಮಾಡಲೇಬೇಕು ಎಂದು ಕೊಡುವವರು ಹೋಂ ಲೋನ್ ಅಥವಾ ಗೃಹ ಸಾಲವನ್ನು ತೆಗೆದುಕೊಳ್ಳುವುದು ಸಹಜ. ಬೇರೆ ಬೇರೆ ಬ್ಯಾಂಕುಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಮನೆ ನಿರ್ಮಾಣಕ್ಕಾಗಿ ಸಾಲ (Loan) ಸೌಲಭ್ಯ ನೀಡಲಾಗುತ್ತದೆ.

ಹೊಸ ಮನೆ, ಹಳೆಯ ಮನೆ ರಿಪೇರಿ ಹಾಗೂ ಮನೆ ವಿಸ್ತರಣೆಗೂ ಸಿಗುತ್ತೆ ಹೋಮ್ ಲೋನ್

ಹಾಗೆಯೇ ಬೇರೆ ಬೇರೆ ಬ್ಯಾಂಕ್ಗಳಲ್ಲಿ (Banks) ಬಡ್ಡಿ ದರವು ವಿಭಿನ್ನವಾಗಿರುತ್ತದೆ. ನೀವು ಗೃಹ ಸಾಲವನ್ನ (Home Loan) ತೆಗೆದುಕೊಳ್ಳಬೇಕು ಎಂದು ಬಯಸಿದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಹೆಚ್ಚಿನ ಹಣ ಉಳಿತಾಯ ಮಾಡಬಹುದು.

ಗೃಹ ಸಾಲ ಯಾವುದಕ್ಕೆ ಸಿಗುತ್ತದೆ?

ಸಾಮಾನ್ಯವಾಗಿ ಗೃಹ ಸಾಲ ಎಂದರೆ ಮನೆ ನಿರ್ಮಾಣಕ್ಕೆ ಎಂದಷ್ಟೇ ಜನ ಭಾವಿಸುತ್ತಾರೆ ಆದರೆ ಗೃಹ ಸಾಲ ಎನ್ನುವುದು ನೀವು ಹೊಸ ಮನೆ ನಿರ್ಮಾಣ ಮಾಡಿಕೊಳ್ಳುವುದು ಮಾತ್ರವಲ್ಲದೆ ಇನ್ನು ಸಾಕಷ್ಟು ವಿಷಯಗಳಿಗೆ ಸಿಗುತ್ತದೆ.

ಉದಾಹರಣೆಗೆ ಕಟ್ಟಿರುವ ಮನೆ ಖರೀದಿ ಮಾಡಿದರೆ, ಇರುವ ಮನೆಯನ್ನ ರೆನೋವೇಟ್ ಮಾಡಿದರೆ, ಮನೆಯನ್ನು ವಿಸ್ತರಿಸಿದರೆ, ಮನೆ ರಿಪೇರಿ ಮಾಡಿದರೆ ಹೀಗೆ ಮನೆಗೆ ಸಂಬಂಧಪಟ್ಟ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಬಹುದು. ನೀವು ಯಾವುದಕ್ಕೆ ಸಾಲ ತೆಗೆದುಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ಸಾಲದ ಮೊತ್ತವು ನಿರ್ಧಾರವಾಗುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನೀಡಲಿದೆ ಒಂದು ಲಕ್ಷಕ್ಕೂ ಹೆಚ್ಚಿನ ಆದಾಯ! ಇಲ್ಲಿದೆ ಮಾಹಿತಿ

ಗೃಹ ಸಾಲಕ್ಕೆ ಬಡ್ಡಿ!

ಗೃಹ ಸಾಲಕ್ಕೆ ಸಾಮಾನ್ಯವಾಗಿ 8 ರಿಂದ 10% ನಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ ಅದರಲ್ಲೂ ಸರ್ಕಾರದ ಕೆಲವು ಯೋಜನೆಗಳ ಅಡಿಯಲ್ಲಿ ಗೃಹ ಸಾಲವನ್ನು ತೆಗೆದುಕೊಂಡರೆ ಬಡ್ಡಿಯಲ್ಲಿ ವಿನಾಯಿತಿ ಕೂಡ ಸಿಗುತ್ತದೆ.

ಇನ್ನು ಗೃಹ ಸಾಲವನ್ನ 25 ರಿಂದ 35 ವರ್ಷಗಳ ಅವಧಿಗೆ ತೆಗೆದುಕೊಳ್ಳಬಹುದು. ಈ ರೀತಿ ಹೆಚ್ಚು ವರ್ಷಗಳ ಅವರಿಗೆ ಗೃಹ ಸಾಲ ತೆಗೆದುಕೊಂಡಾಗ ತಿಂಗಳಿಗೆ ಪಾವತಿಸಬೇಕಾದ ಈ ಎಂಐ ಕಡಿಮೆ ಬರಬಹುದು ಆದರೆ ಬಡ್ಡಿದರ ಹೆಚ್ಚಾಗುತ್ತದೆ.

ಸಾಲ ತೆಗೆದುಕೊಳ್ಳಲು ಬೇಕಾಗುವ ದಾಖಲೆಗಳು!

ನಿಮಗೆ ಯಾವುದಾದರೂ ಸ್ಥಿರ ಆದಾಯ ಇದ್ದರೆ ಅದನ್ನ ದಾಖಲೆಯಾಗಿ ಕೊಡಬಹುದು. ಯಾವುದೇ ಉದ್ಯೋಗದಲ್ಲಿ ಇರುವವರು ಗೃಹ ಸಾಲವನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಸಾಮಾನ್ಯವಾಗಿ 50,000 ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಸಂಬಳ ಹೊಂದಿರುವವರಿಗೆ ಸುಲಭವಾಗಿ 30 ರಿಂದ 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಪ್ರತಿ ತಿಂಗಳು 20 ರಿಂದ 60,000 ವರೆಗೆ EMI ಪಾವತಿ ಮಾಡಬೇಕಾಗಬಹುದು.

ಗೃಹ ಸಾಲವನ್ನು ತೆಗೆದುಕೊಂಡವರು ಆದಷ್ಟು ಬೇಗ ಸಾಲ ತೀರಿಸುವುದಕ್ಕೆ ಪ್ರಯತ್ನಿಸಬೇಕು. ಉದಾಹರಣೆಗೆ ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಕ್ಕಾಗ ಆ ಹಣವನ್ನು ಗೃಹ ಸಾಲಕ್ಕಾಗಿ ಮೀಸಲಿಟ್ಟರೆ ಬಹಳ ಕಡಿಮೆ ಅವಧಿಯಲ್ಲಿ ಗೃಹ ಸಾಲ ತೀರಿಸಬಹುದು ನಿಮ್ಮ 55 – 60ನೇ ವಯಸ್ಸಿನಲ್ಲಿ ಯಾವುದೇ ಆರ್ಥಿಕ ಹೊರೆ ಇಲ್ಲದೆ ನಿಮ್ಮ ಸ್ವಂತ ಮನೆಯಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ.

ಇಂಟರ್ನೆಟ್ ಇಲ್ಲದಿದ್ದರೂ ಮಾಡಬಹುದು ಮನಿ ಟ್ರಾನ್ಸ್ಫರ್! ಇಲ್ಲಿದೆ ವಿಧಾನ

ತೆರಿಗೆ ವಿನಾಯಿತಿ!

ಆದಾಯ ತೆರಿಗೆ 80 ಸಿ ಮತ್ತು 24 ಬಿ ಸೆಕ್ಷನ್ ಅಡಿಯಲ್ಲಿ 50 ರಿಂದ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

Home Loans Available for New Homes, Repairs and Extensions

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories