ಸರ್ಕಾರಿ ನೌಕರಿ ಯಾವಾಗ ಎಲ್ಲಿ ಖಾಲಿ ಇರುತ್ತೆ? ಇಲ್ಲಿದೆ ಲಿಂಕ್, ಎಲ್ಲೇ ಕೆಲಸ ಖಾಲಿ ಇದ್ರೂ ಗೊತ್ತಾಗುತ್ತೆ
ಸರ್ಕಾರಿ ನೌಕರಿ (government job) ಅಂದ್ರೆ ಅದಕ್ಕೆ ಇರುವ ಬೆಲೆ ಮಹತ್ವವೇ ಬೇರೆ, ಯಾರಾದರೂ ಸರ್ಕಾರಿ ನೌಕರಿಯಲ್ಲಿ ಇದ್ದಾರೆ ಅಂತ ಹೇಳಿದ್ರೆ ಅಂಥವರಿಗೆ ಮದುವೆ ಸಂಬಂಧಗಳು ಹುಡುಕಿಕೊಂಡು ಬರುತ್ತೆ ಅನ್ನುವುದು ಬಹಳ ಹಳೆಯ ಮಾತು
ಆದ್ರೆ ಇದನ್ನ ಸಾರ್ವಕಾಲಿಕ ಸತ್ಯ ಎಂದೇ ಹೇಳಬಹುದು. ಯಾಕೆಂದರೆ ಸರ್ಕಾರಿ ನೌಕರಿಯಲ್ಲಿ ಇದ್ದಾರೆ ಅಂದ್ರೆ ಅವರ ಲೈಫ್ ಸೆಕ್ಯೂರ್ಡ್ (secured life) ಆಗಿರುತ್ತೆ ಎನ್ನುವ ನಂಬಿಕೆ ಇದೆ
ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಬೆನಿಫಿಟ್ (government job benefit) ಗಳು ಕೂಡ ಲಭ್ಯ ಇರುತ್ತವೆ ಹಾಗಾಗಿ ರಾಜ್ಯ ಸರ್ಕಾರಿ ನೌಕರಿ ಇರಬಹುದು ಅಥವಾ ಕೇಂದ್ರ ಸರ್ಕಾರಿ ನೌಕರಿ ಇರಬಹುದು, ಜನ ಸರ್ಕಾರಿ ಕೆಲಸ ಮಾಡಲು ಮುಗಿಬೀಳುತ್ತಾರೆ.
ಈ ಕಾರ್ಡ್ ನಿಮ್ಮ ಬಳಿ ಇದ್ರೆ ಪ್ರತಿ ತಿಂಗಳು ಸಿಗುತ್ತೆ 3,000 ರೂಪಾಯಿ ಪಿಂಚಣಿ, ಜೊತೆಗೆ 2 ಲಕ್ಷ ವಿಮೆ
ಕೆಲವೊಮ್ಮೆ ಸರ್ಕಾರಿ ನೌಕರಿ ಖಾಲಿ ಇದೆ ಎನ್ನುವ ಪೋಸ್ಟ್ ಪ್ರಕಟಣೆಗೊಂಡಾಗ ಕೇವಲ ಒಂದು ಸಾವಿರ ಖಾಲಿ ಇರುವ ಹುದ್ದೆಗೆ ಕೋಟಿಯಷ್ಟು ಜನ ಅರ್ಜಿ ಸಲ್ಲಿಸುತ್ತಾರೆ ಅಂದ್ರೆ ನೀವು ನಂಬಲೇಬೇಕು.
ನಿಮಗೂ ಸರ್ಕಾರಿ ನೌಕರಿ ಗಳಿಸಿಕೊಳ್ಳಬೇಕು ಎನ್ನುವ ಆಸೆ ಇದೆಯಾ? ಯಾವಾಗ ಎಲ್ಲಿ ಸರ್ಕಾರಿ ನೌಕರಿ ಖಾಲಿ ಇರುತ್ತೆ ಅನ್ನುವ ಮಾಹಿತಿ ತಿಳಿದುಕೊಳ್ಳಬೇಕಾ? ಸರ್ಕಾರಿ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸುವುದು? ಯಾವ ಹುದ್ದೆಗೆ ಎಷ್ಟು ಸಂಬಳ (Salary) ನಿಗದಿಪಡಿಸಲಾಗಿರುತ್ತದೆ? ಇವೆಲ್ಲವನ್ನ ತಿಳಿದುಕೊಳ್ಳಬೇಕು ಅಂದ್ರೆ ಈ ಲೇಖನವನ್ನು ಕಂಪ್ಲೀಟ್ ಆಗಿ ಓದಿ.
ಪರ್ಸನಲ್ ಲೋನ್ ತೆಗೆದುಕೊಳ್ಳೋ ಮುನ್ನ ಈ ಕೆಲಸ ಮಾಡಿ! ಬಡ್ಡಿ ಕಡಿಮೆ ಆಗುತ್ತೆ, ಬೇಗ ಸಾಲ ಸಿಗುತ್ತೆ
ಸರ್ಕಾರಿ ನೌಕರಿ ಬಗ್ಗೆ ತಿಳಿದುಕೊಳ್ಳುವುದು ಹೇಗೆ?
ಯಾವ ಕ್ಷೇತ್ರದಲ್ಲಿ ಎಷ್ಟು ಸರಕಾರಿ ಹುದ್ದೆಗಳು ಖಾಲಿ ಇವೆ, ಅದಕ್ಕೆ ಯಾರು ಅಪ್ಲೈ ಮಾಡಬೇಕು (how to apply for government job) ಹೇಗೆ ಅಪ್ಲೈ ಮಾಡಬೇಕು ಎಲ್ಲಾ ವಿವರಗಳನ್ನು ತಿಳಿದುಕೊಳ್ಳಲು ನೀವು ಮೊದಲನೆಯದಾಗಿ https://allgovernmentjobs.in/ ಸರ್ಕಾರದ ಈ ವೆಬ್ಸೈಟ್ ಲಿಂಕ್ (government website) ಅನ್ನು ಕ್ಲಿಕ್ ಮಾಡಿ
ಇಲ್ಲಿ ನಿಮಗೆ ಬೇಕಾಗಿರುವ ಸಂಪೂರ್ಣವಾದ ಮಾಹಿತಿ ಲಭ್ಯವಾಗುತ್ತದೆ. ಈ ವೆಬ್ಸೈಟ್ ಕ್ಲಿಕ್ ಮಾಡಿದಾಗ ನೀವು ವೆಬ್ ಸೈಟ್ ತೆರೆದ ಕ್ಷಣದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನ ತೋರಿಸುತ್ತದೆ.
ಉದಾಹರಣೆಗೆ ಈ ವೆಬ್ಸೈಟ್ನ ಮುಖಪುಟದಲ್ಲಿ ಮೇಲ್ಭಾಗದಲ್ಲಿ ಇರುವ ಸರ್ಚ್ ಆಯ್ಕೆಯಲ್ಲಿ ನಿಮಗೆ ಯಾವ ಕ್ಷೇತ್ರದ ಹುದ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಆ ಹುದ್ದೆಗಳ ಲಿಸ್ಟ್ ಇಲ್ಲಿರುತ್ತದೆ.
ನೀವು ನಿಮ್ಮ ವಿದ್ಯಾರ್ಹತೆಗೆ (Education Qualification) ತಕ್ಕಂತೆ ಜಾಬ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 8ನೇ ತರಗತಿಯಿಂದ ಉನ್ನತ ವಿದ್ಯಾಭ್ಯಾಸ ಮಾಡಿದವರಿಗೆ (Higher Education) ಸಿಗಲ್ಪಡುವ ಎಲ್ಲಾ ಹುದ್ದೆಗಳ ವಿವರ ಇದರಲ್ಲಿ ಇರುತ್ತದೆ.
ಕಾರ್ ಇನ್ಸೂರೆನ್ಸ್ ತೆಗೆದುಕೊಳ್ಳುವ ಮುನ್ನ ಈ ಟಿಪ್ಸ್ ಪಾಲಿಸಿದ್ರೆ ಸಾಕಷ್ಟು ಹಣ ಉಳಿಸಬಹುದು
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್ಸೈಟ್ನಲ್ಲಿ ನೀವು ಹುದ್ದೆಗಳ ವಿವರ ತಿಳಿದುಕೊಳ್ಳಬಹುದು, ಆದರೆ ಇಲ್ಲಿ ನೀವು ಅಪ್ಲೈ ಮಾಡಲು ಸಾಧ್ಯವಿಲ್ಲ. ಇಲ್ಲಿ ಸಿಗುವ ಮಾಹಿತಿಯನ್ನು ಪಡೆದುಕೊಂಡು ಯಾವ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅಲ್ಲಿಯೇ ಬೇರೆ ಒಂದು ಲಿಂಕ್ ಕೊಡಲಾಗಿರುತ್ತೆ ಆ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಅಲ್ಲಿ ನೀವು ಅಪ್ಲೈ ಮಾಡಬೇಕು.
ಎಷ್ಟೋ ಬಾರಿ ಈ ಲಿಂಕ್ ಗಳು ಥರ್ಡ್ ಪಾರ್ಟಿ ಅಪ್ಲಿಕೇಶನ್ (third party application) ಆಗಿರಬಹುದು, ಅಂತಹ ಸಮಯದಲ್ಲಿ ನಿಮ್ಮಿಂದ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ
ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ
ಸರ್ಕಾರಿ ನೌಕರಿ ಪಡೆದುಕೊಳ್ಳಲು ಅಪ್ಲೈ ಮಾಡುವುದಕ್ಕೆ ಹಣ ಕೇಳುವ ಅಗತ್ಯವಿಲ್ಲ. ನೀವು ಅರ್ಜಿ ಫಾರಂ ಸಲ್ಲಿಸಿ ನಿಮ್ಮ ಮಾಹಿತಿಗಳನ್ನು ನೀಡಿದ ನಂತರ ಡಿಡಿ ಮಾಡಬೇಕಾಗಿರುವ ಸಾಧ್ಯತೆಗಳು ಇರುತ್ತವೆ, ಅದನ್ನ ನೇರವಾಗಿ ಬ್ಯಾಂಕಿಗೆ (Bank) ಮಾಡಬೇಕು.
ಈ ರೀತಿಯಾಗಿ ನಿಮ್ಮ ವಿದ್ಯಾರ್ಥಿಗೆ ತಕ್ಕಂತೆ ಸರ್ಕಾರಿ ನೌಕರಿ ಪಡೆದುಕೊಳ್ಳಲು ಇಂದಿನಿಂದಲೇ ಜಾಬ್ ಸರ್ಚ್ (Job Search) ಮಾಡಲು ಆರಂಭಿಸಿ. ಒಟ್ಟಾರೆಯಾಗಿ ದೇಶದಲ್ಲಿ ಸಾಕಷ್ಟು ಸರ್ಕಾರಿ ನೌಕರಿ ಖಾಲಿ ಇದ್ದು ಒಂದಲ್ಲ ಒಂದು ಅವಕಾಶ ನಿಮ್ಮನ್ನು ಅರಸಿ ಬರಬಹುದು, ನೀವು ಕೂಡ ಸರ್ಕಾರಿ ನೌಕರರಾಗಬಹುದು.
When and where are government job vacancies, Here is the link to know details