ಆಸ್ತಿ ಖರೀದಿಸುವಾಗ ಆಸ್ತಿ ದಾಖಲೆ ಅಸಲಿಯೋ ನಕಲಿಯೋ ಈ ರೀತಿ ಚೆಕ್ ಮಾಡಿಕೊಳ್ಳಿ! ಏಕಾಏಕಿ ಹೊಸ ರೂಲ್ಸ್

Property Documents : ಹಣ ಉಳಿತಾಯ ಮಾಡುವುದಕ್ಕೆ ಇರುವ ಉತ್ತಮ ಮಾರ್ಗಗಳಲ್ಲಿ ಆಸ್ತಿ ಖರೀದಿ (Buy Property) ಕೂಡ ಒಂದು. ಬಂಗಾರದ ಖರೀದಿ (Buy Gold), ವಾಹನ ಖರೀದಿಯನ್ನು (Vehicle) ಕೂಡ ಮಾಡುತ್ತಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ಆಸ್ತಿ ಖರೀದಿ ಕೂಡ ಮಾಡಲಾಗುತ್ತದೆ.
ಈಗ ಆಸ್ತಿ ಖರೀದಿ ಮಾಡಿದರೆ ಮುಂದೆ ಹೆಚ್ಚಿನ ಬೆಲೆಗೆ ಮಾರಾಟ ಆಗುವ ಮೂಲಕ ಹೆಚ್ಚು ಲಾಭ ತಂದುಕೊಡುತ್ತದೆ ಎನ್ನುವುದು ಹಲವರ ಯೋಜನೆ ಆಗಿರುತ್ತದೆ. ಹಾಗಾಗಿ ಹೆಚ್ಚು ಜನರು ಆಸಕ್ತಿ ವಹಿಸಿ ಆಸ್ತಿ ಖರೀದಿ ಮಾಡುತ್ತಾರೆ..
ಆಸ್ತಿ ಖರೀದಿ ಮಾಡುವ ಸಮಯದಲ್ಲಿ ನೀವು ಕೆಲವು ವಿಚಾರಗಳ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಆಸ್ತಿ ವಿಚಾರದಲ್ಲಿ ಯಾವುದೇ ಒಂದು ವಿಷಯದಲ್ಲಿ ಚಿಕ್ಕದಾದ ತಪ್ಪುಗಳು ನಡೆದರು ಕೂಡ, ಅದರಿಂದ ನೀವು ತೊಂದರೆ ಅಥವಾ ನಷ್ಟ ಅನುಭವಿಸಬೇಕಾಗುತ್ತದೆ.
ಕಾರ್ ಬೈಕ್ ಮೇಲೆ ಜಾತಿ-ಧರ್ಮದ ಸ್ಟಿಕ್ಕರ್‌ಗಳು ಅಂಟಿಸುವಂತಿಲ್ಲ! ಯೋಗಿ ರಾಜ್ಯದಲ್ಲಿ ಪೋಲಿಸರಿಂದ ಭಾರೀ ದಂಡ
ಹಾಗಾಗಿ ನೀವು ಆಸ್ತಿ ಖರೀದಿ ಮಾಡುತ್ತಿರುವ ಜಾಗದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಬೇಕು. ಆಸ್ತಿ ಮಾರಾಟ ಮಾಡುವವರು ಮೋಸ ಮಾಡುವ ಉದ್ದೇಶ ಹೊಂದಿದ್ದರೆ ನಕಲಿ ಆಸ್ತಿ ಪತ್ರ ಕೊಡುವ ಸಾಧ್ಯತೆ ಕೂಡ ಇರುತ್ತದೆ..
ನೀವು ಆಸ್ತಿ ಖರೀದಿ ಮಾಡುವ ವೇಳೆ, ನೀವು ಖರೀದಿ ಮಾಡುತ್ತಿರುವುದು ಜಾಗ, ಮನೆ, ಅಂಗಡಿ ಏನೇ ಆಗಿದ್ದರು ಕೂಡ ಅದಕ್ಕೆ ಸಂಬಂಧಪಟ್ಟ ಡಾಕ್ಯುಮೆಂಟ್ ಗಳನ್ನು ಪಡೆಯುವುದಕ್ಕಿಂತ ಮೊದಲು ಜಾಗ್ರತೆಯಿಂದ ಇರಿ.
ಈ ವೇಳೆ ನೀವು ಆಸ್ತಿ RERA ರಿಜಿಸ್ಟ್ರೇಶನ್ ಮತ್ತು ಆಸ್ತಿಗೆ ಸೇರಿದ ಹಾಗೆ ಎಲ್ಲಾ ಡಾಕ್ಯುಮೆಂಟ್ ಗಳನ್ನು ನೀವು ಚೆಕ್ ಮಾಡುವುದು ಒಳ್ಳೆಯದು ಎನ್ನುವುದು ನಿಮ್ಮ ನೆನಪಲ್ಲಿರಬೇಕು. ಮೋಸ ಮಾಡುವವರು ಒಂದು ಜಮಿನನ್ನು ನಕಲಿ ಡಾಕ್ಯುಮೆಂಟ್ ಗಳ ಮೂಲಕ ಹೆಚ್ಚು ಜನರಿಗೆ ಮಾರಾಟ ಮಾಡಿ, ಮೋಸ ಮಾಡುತ್ತಾರೆ.
ಇಂಥ ಮೋಸ ಆಗಬಾರದು ಎಂದರೆ, ಅಸಲಿ ಮತ್ತು ನಕಲಿ ದಾಖಲೆ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು. ಆಸ್ತಿ ಅಥವಾ ಮನೆ ಖರೀದಿ ಮಾಡುವಾಗ ಜನರು ರಿಜಿಸ್ಟ್ರೇಶನ್ ದಾಖಲೆಗಳನ್ನು ಚೆಕ್ ಮಾಡುತ್ತಾರೆ. ಆದರೆ ನಿಮಗೆ ಆ ಭೂಮಿಯ ಮೇಲೆ ಎಷ್ಟು ಹಕ್ಕಿದೆ ಎನ್ನುವುದನ್ನು ತಿಳಿಯಲು ಈ ಎರಡು ದಾಖಲೆಗಳಿಂದ ಮಾತ್ರ ಸಾಧ್ಯ ಆಗುವುದಿಲ್ಲ.
ಬಟ್ಟೆ ಇಲ್ಲದೆ ವಾಹನ ಚಲಾಯಿಸಿದರೆ ದಂಡ, ಡ್ರೈವಿಂಗ್ ನ ಇಂತಹ ವಿಚಿತ್ರ ನಿಯಮಗಳು ನಿಮಗೆ ಗೊತ್ತೇ?

*ಹೊಸ ರಿಜಿಸ್ಟ್ರೇಶನ್ ಜೊತೆಗೆ ಈ ಹಿಂದಿನ ಹಳೆಯ ರಿಜಿಸ್ಟ್ರೇಷನ್ ಅನ್ನು ಕೂಡ ಈಗ ಗಮನಿಸಬೇಕು.
*ನಿಮಗೆ ಜಮೀನು ಮಾರುತ್ತಿರುವ ವ್ಯಕ್ತಿ ಮತ್ತೊಬ್ಬರಿಂದ ಜಮೀನು ಪಡೆದಿದ್ದರೆ, ಮಾರಾಟ ಮಾಡುತ್ತಿರುವವರಿಗೆ ಮಾಲೀಕತ್ವ ಬಂದಿದ್ದು ಹೇಗೆ ಎಂದು ನೀವು ಪೂರ್ತಿಯಾಗಿ ತಿಳಿದುಕೊಳ್ಳಬೇಕು.
*ಭೂಮಿ ಖರೀದಿ ಮಾಡುವುದಕ್ಕಿಂತ ಮೊದಲು ಆ ಭೂಮಿ ಸರ್ಕಾರದ ಸ್ವಾಮ್ಯತೆಗೆ ಸೇರಿದೆಯಾ ಎನ್ನುವುದನ್ನು ಕೂಡ ನೀವು ತಿಳಿದುಕೊಳ್ಳಬೇಕು.
ಇದೆಲ್ಲವನ್ನು ತಿಳಿಯಲು 41 ಹಾಗೂ 45 ಏಕೀಕರಣ ಡಾಕ್ಯುಮೆಂಟ್ ಗಳನ್ನು ಚೆಕ್ ಮಾಡಿ, ಭೂಮಿಯ ವಾಸ್ತವತೆಯನ್ನು ಕೂಡ ನೀವು ಚೆಕ್ ಮಾಡಬೇಕಾಗುತ್ತದೆ.
ಹೊಸ ಹೀರೋ ಗ್ಲಾಮರ್ ಪ್ರೀಮಿಯಂ ಲುಕ್‍ನಲ್ಲಿ ಮಾರುಕಟ್ಟೆಗೆ ಎಂಟ್ರಿ! ಡಿಜಿಟಲ್ ಕ್ಲಸ್ಟರ್ ಇದೆ, ಬೆಲೆ ಎಷ್ಟು ಗೊತ್ತಾ?
ಮೋಸ ಮಾಡುವವರು ಸರ್ಕಾರಕ್ಕೆ ಸೇರಿದ ಮತ್ತು ರೈಲ್ವೆ ಇಲಾಖೆಗೆ ಸೇರಿದ ಜಮೀನನ್ನು ಮಾರಾಟ ಮಾಡಿರುವ ಉದಾಹರಣೆಗಳಿವೆ.
*ನೀವು ಖರೀದಿ ಮಾಡಬೇಕು ಎಂದುಕೊಂಡಿರುವ ಆಸ್ತಿ ಮೇಲೆ ಕೋರ್ಟ್ ಕೇಸ್ ಇದೆಯಾ ಎನ್ನುವುದನ್ನು ಕೂಡ ನೀವು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ಆ ಆಸ್ತಿ ಮೇಲೆ ಈಗಾಗಲೇ ವಿವಾದ ಇದ್ದರೆ, ಅದರಿಂದ ನಿಮಗೆ ಹೆಚ್ಚು ತೊಂದರೆ ಆಗುತ್ತದೆ..
ಆಸ್ತಿ ಖರೀದಿ ವೇಳೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.
When buying a property, check whether the property document is genuine or fake



