ಹೊಸ ಮನೆ ಕಟ್ಟೋರಿಗೆ ಬಂಪರ್ ಸುದ್ದಿ! ಕಮ್ಮಿ ಬಡ್ಡಿಗೆ ಹೋಂ ಲೋನ್ ಪಡೆಯಲು ಅವಕಾಶ

ಡಿಸೆಂಬರ್‌ನಿಂದ ಹಲವು ಬ್ಯಾಂಕ್‌ಗಳು ಹೋಂ ಲೋನ್ ಬಡ್ಡಿದರಗಳನ್ನು ಪರಿಷ್ಕರಿಸಿವೆ. ಸರ್ಕಾರಿ ಬ್ಯಾಂಕ್‌ಗಳು ಕಡಿಮೆ ರೇಟ್ ನೀಡುತ್ತಿದ್ದು, ಕೆಲವು ಖಾಸಗಿ ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ಆಧಾರಿತವಾಗಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿವೆ.

Home Loan: ಹೋಂ ಲೋನ್ ಪಡೆಯಲು ಯೋಜನೆ ಮಾಡಿಕೊಂಡಿರುವವರಿಗೆ ಬಡ್ಡಿದರಗಳ ಹೋಲಿಕೆ ಅತ್ಯಂತ ಮುಖ್ಯ. ಈ ತಿಂಗಳಲ್ಲಿ ವಿವಿಧ ಬ್ಯಾಂಕ್‌ಗಳು ಆರಂಭಿಕ ಬಡ್ಡಿದರಗಳನ್ನು 7.30%–8% ಮದ್ಯೆ ನಿಗದಿಪಡಿಸಿವೆ. ಅದರಲ್ಲಿ ಕರ್ನಾಟಕ ಬ್ಯಾಂಕ್ 7.30% ಆರಂಭಿಕ ಬಡ್ಡಿದರದಿಂದ (Karnataka Bank Home Loan) ಅತ್ಯಂತ ಕಡಿಮೆ ರೇಟ್ ನೀಡುತ್ತಿರುವುದು ಗಮನಾರ್ಹ.

ಸರ್ಕಾರಿ ಬ್ಯಾಂಕ್‌ಗಳ ಆಕರ್ಷಕ ಬಡ್ಡಿ ರೇಟ್‌ಗಳು

ಬಲವಾದ ಕ್ರೆಡಿಟ್ ಪ್ರೊಫೈಲ್ ಹೊಂದಿರುವ ಗ್ರಾಹಕರಿಗೆ ಸರ್ಕಾರಿ ಬ್ಯಾಂಕ್‌ಗಳು ಕಡಿಮೆ ಬಡ್ಡಿಗೆ ಲೋನ್ ನೀಡುತ್ತಿವೆ.

  • SBI : 7.50% ರಿಂದ 8.95%
  • Bank of Baroda : 7.45% ರಿಂದ 9.50%
  • Union Bank & Bank of India : 7.35% ಆರಂಭ
  • PNB : 7.45% ರಿಂದ 9.35%
  • Canara Bank : 7.40% ರಿಂದ 10.25%

ಕೆಲವು ಬ್ಯಾಂಕ್‌ಗಳು ಮಹಿಳಾ ಸಾಲಗಾರರಿಗೆ ಅಥವಾ ವೇತನ ಖಾತೆ ಹೊಂದಿರುವವರಿಗೆ 5–10 ಬಿಪಿಎಸ್ ವರೆಗೆ ಸಡಿಲಿಕೆ ನೀಡುತ್ತಿವೆ.

ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಗಿಂತ ಹೆಚ್ಚು ಲಾಭ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 1 ಲಕ್ಷಕ್ಕೆ 44,995 ಬಡ್ಡಿ ಸಿಗುತ್ತೆ

ಖಾಸಗಿ ಬ್ಯಾಂಕ್‌ಗಳಲ್ಲಿ ಏರುತ್ತಿರುವ ಬಡ್ಡಿ ದರ

ಕಡಿಮೆ ಅಪಾಯದ ಗ್ರಾಹಕರಿಗೆ ಖಾಸಗಿ ಬ್ಯಾಂಕ್‌ಗಳು ಸಹ ಸ್ಪರ್ಧಾತ್ಮಕ ಬಡ್ಡಿ ನೀಡುವುದಾದರೂ, ಸರಾಸರಿ ದರಗಳು ಸಾರ್ವಜನಿಕ ಬ್ಯಾಂಕ್‌ಗಳಿಗಿಂತ ಹೆಚ್ಚಾಗಿವೆ.

  • HDFC Bank : 7.90% ರಿಂದ
  • ICICI Bank : 7.65% ರಿಂದ
  • Kotak, HSBC, South Indian Bank : 7.70–7.80%

ಕೆಲ ಖಾಸಗಿ ಬ್ಯಾಂಕ್‌ಗಳು ದುರ್ಬಲ ಕ್ರೆಡಿಟ್ ಸ್ಕೋರ್ (Credit Score) ಇದ್ದರೆ ಹೆಚ್ಚು ಬಡ್ಡಿ ವಸೂಲಿ ಮಾಡಬಹುದು.

ಹೌಸಿಂಗ್ ಫೈನಾನ್ಸ್ ಕಂಪನಿಗಳ ರೇಟ್ ಹೇಗಿದೆ?

LIC Housing Finance, ICICI Home Finance, Bajaj Housing Finance ಮುಂತಾದ ಸಂಸ್ಥೆಗಳು 7.45–7.50% ದರದಿಂದ ಸಾಲ ನೀಡುತ್ತಿವೆ. ಆದರೆ ಹೆಚ್ಚಿನ ಅಪಾಯವಿರುವ ಗ್ರಾಹಕರಿಗೆ PNB Housing Finance, SMFG India Home Finance ಮುಂತಾದ ಸಂಸ್ಥೆಗಳು 10% ಕ್ಕಿಂತ ಹೆಚ್ಚಾಗುವ ಬಡ್ಡಿ ವಿಧಿಸಬಹುದು.

ಸಾಕಷ್ಟು ಬ್ಯಾಂಕ್‌ಗಳಲ್ಲಿ ಬಡ್ಡಿದರ ವ್ಯತ್ಯಾಸ ಇರುವುದರಿಂದ, ಕ್ರೆಡಿಟ್ ಸ್ಕೋರ್, ಆದಾಯ ಮತ್ತು ಲೋನ್ ಪ್ರಮಾಣವನ್ನು ಪರಿಗಣಿಸಿ ಬ್ಯಾಂಕ್‌ಗಳನ್ನು ಹೋಲಿಕೆ ಮಾಡುವುದು ಉತ್ತಮ.

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories