ಚಿನ್ನದ ಬಣ್ಣ ನಿಮಗೆ ಗೊತ್ತಿದೆ, ಆದ್ರೆ ಬಿಳಿ ಬಂಗಾರದ ಬಗ್ಗೆ ನಿಮಗೆ ಗೊತ್ತಾ?
- ಹಳದಿ ಬಂಗಾರಕ್ಕಿಂತ ದುಬಾರಿ ಬಿಳಿ ಬಂಗಾರ
- ಪ್ಲಾಟಿನಮ್ಗೆ ಪರ್ಯಾಯವಾಗಿರುವ ಬಿಳಿ ಬಂಗಾರದ ಬಗ್ಗೆ ನಿಮಗೆಷ್ಟು ಗೊತ್ತು
- ಬಿಳಿ ಬಂಗಾರದಲ್ಲಿ ಚಿನ್ನ ಕೇವಲ 75% ಇರುತ್ತೆ
ಬಂಗಾರ ಅಥವಾ ಚಿನ್ನ ಅಂದ್ರೆ ಸಾಕು ಎಲ್ಲರೂ ಇಷ್ಟಪಡುವ ವಿಚಾರ. ಕೆಲವರಿಗೆ ಬಂಗಾರ ಪ್ರತಿಷ್ಠೆಯ ಸಂಕೇತವಾಗಿದ್ದರೆ, ಕೆಲವರು ಹೂಡಿಕೆಗಾಗಿ ಬಂಗಾರವನ್ನು ಖರೀದಿಸುತ್ತಾರೆ. ಇನ್ನು ಕೆಲವರು ಆಪತ್ಬಾಂಧವ ಅನ್ನುವ ಹಾಗೆ ಬಂಗಾರವನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ
ಭಾರತೀಯರು ಬಂಗಾರ ಪ್ರಿಯರು ಅದರಲ್ಲೂ ಹಳದಿ ಬಣ್ಣದ ಬಂಗಾರವನ್ನು ನಾವು ಹೆಚ್ಚಾಗಿ ಬಳಸುತ್ತೇವೆ. ಆದರೆ ಹಳದಿ ಬಣ್ಣಕ್ಕಿಂತ ದುಬಾರಿಯಾಗಿರುವ ಬಿಳಿ ಬಣ್ಣದ ಬಂಗಾರದ ಬಗ್ಗೆ ನಿಮಗೆ ಗೊತ್ತಾ?
ಪ್ಲಾಟಿನಮ್ಗೆ ಪರ್ಯಾಯ ಈ ಬಿಳಿ ಬಂಗಾರ!
ಹೌದು, ಇದನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು. ದುಬಾರಿಯಾಗಿರುವ ಪ್ಲಾಟಿನಮ್ ಗೆ ಪರ್ಯಾಯವಾಗಿ ಬಿಳಿ ಬಂಗಾರವನ್ನು ಖರೀದಿ ಮಾಡ್ತಾರೆ. ಬಿಳಿ ಬಂಗಾರ 75% ನಷ್ಟು ಬಂಗಾರ ಹಾಗೂ 25% ಸತು ಮತ್ತು ನಿಕ್ಕಲ್ ಲೋಹದಿಂದ ತಯಾರಿಸಲ್ಪಡುತ್ತದೆ. ಬಿಳಿ ಬಂಗಾರದ ಆಭರಣಗಳನ್ನು ತಯಾರಿಸುವ ಪ್ರಕ್ರಿಯೆ ಬಹಳ ಸಂಕೀರ್ಣ ಮಾತ್ರದಿಂದ ಹಳದಿ ಬಂಗಾರಕ್ಕಿದ್ದ ಬಿಳಿ ಬಂಗಾರ ಕಾಸ್ಟ್ಲಿ.
ಈ ಸ್ಟೇಟ್ ಬ್ಯಾಂಕ್ FDಯಲ್ಲಿ 10 ಲಕ್ಷ ಆದಾಯ, ಮಾರ್ಚ್ 31ರವರೆಗೆ ಮಾತ್ರ ಅವಕಾಶ
ಬಿಳಿ ಬಂಗಾರದ ಖರೀದಿ ಬೆಲೆ ಹೆಚ್ಚು ಆದರೆ ಮಾರಾಟದ ಬೆಲೆ ಕಡಿಮೆ. ಇದು ಪ್ಲಾಟಿನಮ್ಗಿಂತಲೂ ಗಟ್ಟಿ ಹಾಗೂ ಹಳದಿ ಬಂಗಾರಕ್ಕಿಂತ ಮೃದುವಾಗಿರುತ್ತದೆ. ಹಾಗಾಗಿ ಬಹಳ ಬೇಗ ಹೊಳಪನ್ನು ಕಳೆದುಕೊಳ್ಳುತ್ತದೆ. ಅದರಿಂದ ಆಗಾಗ ಬಿಳಿ ಬಂಗಾರಕ್ಕೆ ಪಾಲಿಶ್ ಹಾಕಿಸಬೇಕು.
ಬಿಳಿ ಬಂಗಾರದ ಆಭರಣಗಳನ್ನು ವಿಶೇಷ ಟೇಸ್ಟ್ ಇರುವವರು ಮಾತ್ರ ಖರೀದಿಸುತ್ತಾರೆ. ಅಲ್ಲದೆ ಇದನ್ನು ಫ್ಯಾಶನೇಬಲ್ ಆಭರಣವಾಗಿ ಹೆಚ್ಚು ಬಳಸಲಾಗುತ್ತದೆ.
ಬಿಳಿಯ ಬಂಗಾರ ಎಷ್ಟೇ ಕಾಸ್ಟ್ಲಿಯಾಗಿದ್ರು ಜನರಿಗೆ ಹೆಚ್ಚು ಆಕರ್ಷಿಸೋದು ಮಾತ್ರ ಹಳದಿ ಬಂಗಾರ.. ಏನಂತಿರ?
White Gold Costlier Than Yellow, A Platinum Alternative