Business News

ಈ ಸ್ಟೇಟ್ ಬ್ಯಾಂಕ್ FDಯಲ್ಲಿ 10 ಲಕ್ಷ ಆದಾಯ, ಮಾರ್ಚ್ 31ರವರೆಗೆ ಮಾತ್ರ ಅವಕಾಶ

  • ಸ್ಟೇಟ್ ಬ್ಯಾಂಕ್ FDಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ
  • ರೂ. 1 ಲಕ್ಷ ಹೂಡಿಕೆಗೆ ಸಿಗುತ್ತೆ 10,000 ದಷ್ಟು ಬಡ್ಡಿ
  • 10 ಲಕ್ಷ ರೂಪಾಯಿ ಹೂಡಿಕೆಗೆ ಸಿಗುವ ಆದಾಯ ಎಷ್ಟು

SBI Fixed Deposit : ಭವಿಷ್ಯದ ದೃಷ್ಟಿಯಿಂದ ಎಫ್‌ಡಿ ಹೂಡಿಕೆ ಮಾಡುವುದು ಅತ್ಯಂತ ಒಳ್ಳೆಯದು. ನಮ್ಮ ಕೈಯಲ್ಲಿ ಹಣ ಇದ್ರೆ ಅದನ್ನ ಒಂದಲ್ಲ ಒಂದು ರೀತಿಯಲ್ಲಿ ಖರ್ಚು ಮಾಡುತ್ತೇವೆ ಅದರ ಬದಲು ಸ್ವಲ್ಪ ಸ್ವಲ್ಪವೇ FD ಮೂಲಕ ಹೂಡಿಕೆ ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಉತ್ತಮ ಆದಾಯವನ್ನು ಗಳಿಸಿಕೊಳ್ಳಬಹುದು.

ಅದರಲ್ಲೂ ಇತ್ತೀಚಿಗೆ ಕೆಲವು ಬ್ಯಾಂಕುಗಳು (Banks) ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ ಸೌಲಭ್ಯವನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಕಡಿಮೆ ಅವಧಿಗೆ ಹೂಡಿಕೆ ಮಾಡಿದರು ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಬಹುದು.

ಈ ಸ್ಟೇಟ್ ಬ್ಯಾಂಕ್ FDಯಲ್ಲಿ 10 ಲಕ್ಷ ಆದಾಯ, ಮಾರ್ಚ್ 31ರವರೆಗೆ ಮಾತ್ರ ಅವಕಾಶ

ಕಡಿಮೆ ಬಡ್ಡಿಗೆ ಸಿಗಲಿದೆ ವಿದ್ಯಾರ್ಥಿಗಳಿಗೆ ಪರ್ಸನಲ್ ಲೋನ್; ಇಲ್ಲಿದೆ ಡಿಟೇಲ್ಸ್

180 ದಿನಗಳಿಗೆ ಹೂಡಿಕೆ!

ಪ್ರಸ್ತುತ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಉತ್ತಮ ಆದಾಯವನ್ನು ಗಳಿಸಿಕೊಡಲು ಸಹಕಾರಿಯಾಗಿದೆ. ಕೇವಲ 180 ದಿನಗಳಿಗೆ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 7.75% ಗಿಂತಲೂ ಅಧಿಕ ಬಡ್ಡಿಯನ್ನು ನೀಡಲಾಗುತ್ತದೆ.

ಹಿರಿಯ ನಾಗರಿಕರು 180 ದಿನಗಳಿಗೆ 10 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ಪಾಲಿಸಿ ಮೆಚೂರ್ ಆಗುವ ಹೊತ್ತಿಗೆ ಸಿಗುವ ಮೊತ್ತ 10,34,814 ರೂಪಾಯಿಗಳು. ಅದೇ ರೀತಿ ಸಾಮಾನ್ಯ ಗ್ರಾಹಕರು 10 ಲಕ್ಷ ರೂಪಾಯಿಯನ್ನು 180 ದಿನಗಳಿಗೆ ಹೂಡಿಕೆ ಮಾಡಿದರೆ 10,29,804 ರೂಪಾಯಿಗಳನ್ನು ಆದಾಯವಾಗಿ ಪಡೆಯಬಹುದು.

ಇನ್ನು ಎಫ್ ಡಿ ಹೂಡಿಕೆಯ ಮೇಲೆ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಬೇರೆ ಬೇರೆ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.

ಆಧಾರ್ ಕಾರ್ಡ್ ಒಂದಿದ್ರೆ ಸಿಗುತ್ತೆ 50,000 ಸಾಲ, ಈ ವಿಚಾರ ಸಾಕಷ್ಟು ಜನಕ್ಕೆ ತಿಳಿದಿಲ್ಲ

5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ಸಿಗುವ ಲಾಭ ಎಷ್ಟು?

ಎಸ್ ಬಿ ಐ ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿಗಳನ್ನು 444 ದಿನಗಳಿಗೆ ಸ್ಥಿರ ಠೇವಣಿ ಮಾಡಿದರೆ, ಹಿರಿಯ ನಾಗರಿಕರು 7.75% ಬಡ್ಡಿ ದರದಲ್ಲಿ 5,48,935.21 ರೂ. ನ್ನು ಹಿಂಪಡೆಯಬಹುದು. ಅದೇ ರೀತಿ ಸಾಮಾನ್ಯ ನಾಗರಿಕರು 7.25% ಬಡ್ಡಿ ದರದಲ್ಲಿ, 5,45,667.69 ರೂ. ಗಳನ್ನು ಆದಾಯವಾಗಿ ಪಡೆಯಬಹುದು.

ಒಂದು ಲಕ್ಷ ಹೂಡಿಕೆ ಮಾಡಿದರೆ ಸಿಗುವ ಆದಾಯ ಎಷ್ಟು?

444 ದಿನಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಹೂಡಿಕೆಯ ಮೇಲೆ 9,630 ರೂ. ಬಡ್ಡಿಯಾಗಿ ಸಿಗುತ್ತದೆ. ಅದೇ ರೀತಿ ಸಾಮಾನ್ಯ ನಾಗರಿಕರಿಗೆ 9,280 ರೂ. ಹೆಚ್ಚುವರಿಯಾಗಿ ಬಡ್ಡಿಯ ರೂಪದಲ್ಲಿ ಸಿಗುತ್ತದೆ. ಈ ಯೋಜನೆ ಮಾರ್ಚ್ 31, 2025 ರವರೆಗೆ ಮಾತ್ರ ಲಭ್ಯವಿದ್ದು, ಹೆಚ್ಚಿನ ಆದಾಯ ಗಳಿಸಲು ಇಂದೇ ಹೂಡಿಕೆ ಮಾಡಿ.

Earn up to 10 Lakhs from This SBI FD, Offer Valid Until March 31

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories