ಆಧಾರ್ ಕಾರ್ಡ್ ಒಂದಿದ್ರೆ ಸಿಗುತ್ತೆ 50,000 ಸಾಲ, ಈ ವಿಚಾರ ಸಾಕಷ್ಟು ಜನಕ್ಕೆ ತಿಳಿದಿಲ್ಲ
- ಆಧಾರ್ ಕಾರ್ಡ್ ಒಂದಿದ್ರೆ ಸಿಗುತ್ತೆ ವೈಯಕ್ತಿಕ ಸಾಲ
- ಸುಲಭವಾಗಿ ಪಡೆದುಕೊಳ್ಳಿ 50,000 ಸಾವಿರ ರೂಪಾಯಿಗಳವರೆಗೆ ಸಾಲ
- ಆಧಾರ್ ಕಾರ್ಡ್ ಮೂಲಕ ಆನ್ಲೈನಲ್ಲಿ ಕ್ಷಣಮಾತ್ರದಲ್ಲಿ ಲೋನ್ ಮಂಜೂರು
Personal Loan : ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಪ್ರಮುಖ ಗುರುತಿನ ಆಧಾರವಾಗಿದೆ. ಆಧಾರ್ ಕಾರ್ಡ್ (Aadhaar Card) ಒಂದಿದ್ರೆ ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಸೇವೆಯನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ. ಬ್ಯಾಂಕ್ ನ ವ್ಯವಹಾರಕ್ಕೆ ಅಥವಾ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಹೆಸರನ್ನು ಸೇರಿಸಲು, ವಿದೇಶ ಪ್ರಯಾಣಕ್ಕೆ ಅಷ್ಟೇ ಯಾಕೆ ಮದುವೆ ರಿಜಿಸ್ಟರ್ ಮಾಡಿಕೊಳ್ಳುವುದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು.
ಇನ್ನು ಆಧಾರ್ ಕಾರ್ಡ್ ಗುರುತಿನ ಪುರಾವೆ ಆಗಿರುವ ಹಿನ್ನೆಲೆಯಲ್ಲಿ ಇದೇ ಕಾರ್ಡ್ ಇಟ್ಟುಕೊಂಡು ನೀವು ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು (Bank Loan) ಕೂಡ ಪಡೆದುಕೊಳ್ಳಬಹುದು.
ನಿಮ್ಮ ಬಳಿ ಇರುವ 500 ರೂಪಾಯಿ ನೋಟು ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ?
ಆಧಾರ್ ಕಾರ್ಡ್ ನಿಂದ ಪಡೆದುಕೊಳ್ಳಿ ರೂ. 50,000 ವರೆಗೆ ಸಾಲ!
ಹೌದು, ಸಾಕಷ್ಟು ಜನರಿಗೆ ಈ ವಿಚಾರದ ಬಗ್ಗೆ ತಿಳಿದಿಲ್ಲ. ಬ್ಯಾಂಕ್ ನಲ್ಲಿ ಮೊದಲಿನಂತೆ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಸಾಕಷ್ಟು ದಾಖಲೆಗಳನ್ನು ಕೊಡುವ ಅಗತ್ಯವಿಲ್ಲ ಅಥವಾ ಬ್ಯಾಂಕ್ನಿಂದ ಬ್ಯಾಂಕ್ಗೆ ಅಲೆಯುವ ಕೆಲಸವು ಇಲ್ಲ.
ನೀವು ಆನ್ಲೈನ್ ಮೂಲಕವೇ ನಿಮ್ಮ ಆಧಾರ್ ಕಾರ್ಡ್ ಒಂದನ್ನೇ ಆಧಾರವಾಗಿಟ್ಟುಕೊಂಡು 50,000ಗಳವರೆಗೆ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು. ನೀವು ನೀಡುವ ದಾಖಲೆಗಳು ಸರಿಯಾಗಿದ್ದರೆ ಬ್ಯಾಂಕ್ ಅಪ್ಲಿಕೇಶನ್ ಗಳು ಮೂಲಕ ಕೆಲವೇ ನಿಮಿಷಗಳಲ್ಲಿ ಸಾಲ ಮಂಜೂರು ಮಾಡಿಸಿಕೊಳ್ಳಬಹುದು.
ಯಾರಿಗೆ ಸಿಗುತ್ತೆ ಸಾಲ?
ಸಾಮಾನ್ಯವಾಗಿ ದುಡಿಯುವ ಜನರಿಗೆ ವೈಯಕ್ತಿಕ ಸಾಲವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ನೀಡುತ್ತವೆ. 21ರಿಂದ 60 ವರ್ಷ ವಯಸ್ಸಿನ ನಡುವೆ ಇರುವವರು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡನ್ನು ಮುಖ್ಯ ದಾಖಲೆಯಾಗಿ ವೈಯಕ್ತಿಕ ಸಾಲಕ್ಕೆ ಕೊಡಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಸಿಬಿಲ್ ಸ್ಕೋರ್ 750 ಪಾಯಿಂಟ್ ಗಿಂತ ಜಾಸ್ತಿ ಇರಬೇಕು.
ಬಹುತೇಕ ಎಲ್ಲಾ ಬ್ಯಾಂಕುಗಳು ಆಧಾರ್ ಕಾರ್ಡ್ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತವೆ. ಈ ಸಾಲಕ್ಕೆ 10.55% ನಿಂದ 14% ವರೆಗೆ ಬಡ್ಡಿ ದರ ನಿಗದಿಪಡಿಸಲಾಗಿದೆ. ಬ್ಯಾಂಕ್ನಿಂದ ಬ್ಯಾಂಕ್ಗೆ ಬಡ್ಡಿ ದರದಲ್ಲಿ ವ್ಯತ್ಯಾಸ ಆಗಬಹುದು ಜೊತೆಗೆ ಸಂಸ್ಕರಣ ಶುಲ್ಕವು ವಿಭಿನ್ನವಾಗಿರುತ್ತದೆ.
ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ನಿಂದ 10 ಲಕ್ಷ ಸಬ್ಸಿಡಿ ಸಾಲ, ಯಾವುದೇ ದಾಖಲೆಗಳು ಬೇಕಿಲ್ಲ
ವಿದ್ಯಾರ್ಥಿಗಳಿಂದ ಹಿಡಿದು ಕೆಲಸ ಮಾಡುವವರಿಗೆ ಆಧಾರ್ ಕಾರ್ಡ್ ದಾಖಲೆಯನ್ನು ತೆಗೆದುಕೊಂಡು ಸಾಲ ಮಂಜೂರು ಮಾಡಲಾಗುತ್ತದೆ. ನಿಮಗೆ ಕನಿಷ್ಠ 15,000 ರೂ. ತಿಂಗಳ ಸಂಬಳ ಬರುತ್ತಿದ್ದರೆ ಆಧಾರ್ ಕಾರ್ಡ್ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು (Personal Loan) ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಆಧಾರ್ ಕಾರ್ಡ್ ಸಾಲವನ್ನು ಪಡೆಯಬಹುದು.
Personal Loan with Aadhaar Card, Easily Get Loans by Aadhaar