Business News

ನಿಮ್ಮ ಬಳಿ ಇರುವ 500 ರೂಪಾಯಿ ನೋಟು ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ?

  • 500 ರೂಪಾಯಿ ನಕಲಿ ನೋಟುಗಳ ಹಾವಳಿ ಹೆಚ್ಚಿದೆ
  • ನಕಲಿ ನೋಟುಗಳನ್ನು ಪತ್ತೆ ಮಾಡಲು ಆರ್ ಬಿ ಐ ಹೊಸ ಮಾರ್ಗಸೂಚಿ
  • ನಿಮ್ಮ ಬಳಿ ಇರುವ 500 ನೋಟಿನಲ್ಲಿ ಈ ರೀತಿ ಬರೆದಿದೆಯಾ ನೋಡಿ

500 Rupees Note : ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡರೂ ಕೂಡ ನಕಲಿ ನೋಟುಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ನಕಲಿ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆ ಆಗುತ್ತಿದೆ. ಇದರಿಂದ ಮುಗ್ದ ಜನರು ಮೋಸ ಹೋಗುವಂತಾಗಿದೆ. ಆದರೆ ಆರ್ ಬಿ ಐ (RBI Bank) ಸೂಚಿಸಿರುವ ಸೂಚನೆಯ ಪ್ರಕಾರ 500 ರೂಪಾಯಿ ನೋಟು ಅಸಲಿಯೋ ನಕಲಿಯೋ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

ಸಾವಿರ ಮತ್ತು ಎರಡು ಸಾವಿರ ರೂಪಾಯಿಗಳ ನೋಟನ್ನು ಬ್ಯಾನ್ ಮಾಡಿದ ನಂತರ 500 ರೂಪಾಯಿಯ ನೋಟು ಹೆಚ್ಚು ಚಲಾವಣೆಯಲ್ಲಿ ಇದೆ ಇದೇ ಕಾರಣಕ್ಕೆ ನಕಲಿ ನೋಟುಗಳ ಸಂಖ್ಯೆಯು ಜಾಸ್ತಿ ಆಗುತ್ತಿದೆ.

ನಿಮ್ಮ ಬಳಿ ಇರುವ 500 ರೂಪಾಯಿ ನೋಟು ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ?

ಇಲ್ಲಿವರೆಗೆ ಬಂದಿರುವ ಮಾಹಿತಿಯ ಪ್ರಕಾರ, 2018-19ರಲ್ಲಿ 21,865 ಮಿಲಿಯನ್ ನೋಟುಗಳು ನಕಲಿಯಾಗಿದ್ದವು. 2022-23 ರಲ್ಲಿ 91,110 ಮಿಲಿಯನ್‌ ನಷ್ಟು ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ. ಸರ್ಕಾರದ ಕಠಿಣ ಭದ್ರತೆಯಿಂದಾಗಿ 2023-24ರಲ್ಲಿ 15% ರಷ್ಟು ಕಡಿಮೆ ಅಂದರೆ ನಕಲಿ ನೋಟುಗಳ ಮೌಲ್ಯ 85,711 ಮಿಲಿಯನ್ ಆಗಿದೆ ಎನ್ನಲಾಗುತ್ತದೆ.

ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕ್ ನಲ್ಲಿ ಬರೆದಿರೋ ‘G’ ಏನನ್ನ ಸೂಚಿಸುತ್ತೆ ಗೊತ್ತಾ?

ನಕಲಿ ನೋಟುಗಳನ್ನು ಗುರುತಿಸುವುದು ಹೇಗೆ?

* 500 ರೂ. ನೋಟು ಒರ್ಜಿನಲ್ ಆಗಿದ್ದರೆ, 66*159ಮಿಮಿ ಅಳತೆಯಲ್ಲಿರುತ್ತದೆ. ಹಸಿರು ಬಣ್ಣದಲ್ಲಿರುವ ಲೈನ್ ನೋಟನ್ನು ಸ್ವಲ್ಪ ಓರೆ ಮಾಡಿದಾಗ ನೀಲಿ ಬಣ್ಣದಲ್ಲಿ ಕಾಣಿಸುತ್ತದೆ.

* 500 ಎನ್ನುವ ಸಂಖ್ಯೆ ದೇವನಾಗರಿ ಲಿಪಿಯಲ್ಲಿ ಇದೆ

* ನೋಟಿನ ವಾಟರ್ ಮಾರ್ಕ್ ಮಹಾತ್ಮ ಗಾಂಧೀಜಿಯವರ ಫೋಟೋವನ್ನು ಹೊಂದಿದೆ.

* ನೋಟಿನ ಮಧ್ಯ ಭಾಗದಲ್ಲಿ ಮಹಾತ್ಮ ಗಾಂಧೀಜಿಯವರ ಫೋಟೋ ಕಾಣಬಹುದು.

* ಭಾರತ ಮತ್ತು ಆರ್ ಬಿ ಐ ಎನ್ನುವ ಶಬ್ದವನ್ನು ಬಹಳ ಸೂಕ್ಷ್ಮವಾಗಿ ಬರೆಯಲಾಗಿದೆ.

* ಅಶೋಕ ಸ್ತಂಭದ ಲಾಂಛನವನ್ನು ನೋಟಿನ ಬಲಭಾಗದಲ್ಲಿ ಮುದ್ರಿಸಲಾಗಿದ್ದರೆ, ಮುದ್ರಣ ವರ್ಷವನ್ನು ಎಡ ಭಾಗದಲ್ಲಿ ಕಾಣಬಹುದು

ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ನಿಂದ 10 ಲಕ್ಷ ಸಬ್ಸಿಡಿ ಸಾಲ, ಯಾವುದೇ ದಾಖಲೆಗಳು ಬೇಕಿಲ್ಲ

ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿಮ್ಮ ಬಳಿ ಇರುವ 500 ರೂಪಾಯಿಗಳ ನೋಟು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ತಿಳಿದುಕೊಳ್ಳಬಹುದು.

How to identify if the 500 rupee note is fake or real

English Summary

Related Stories