ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕ್ ನಲ್ಲಿ ಬರೆದಿರೋ ‘G’ ಏನನ್ನ ಸೂಚಿಸುತ್ತೆ ಗೊತ್ತಾ?
- ದೇಶದ ನಂಬರ್ ಒನ್ ಬಿಸ್ಕೆಟ್ ಬ್ರ್ಯಾಂಡ್ ಪಾರ್ಲೆ-ಜಿ
- ಪಾರ್ಲೆ- ಜಿ ಯಲ್ಲಿರುವ ‘G’ ಅರ್ಥ ಏನು ಗೊತ್ತಾ?
- ತಿಂಗಳಿಗೆ ನೂರು ಕೋಟಿ ಪಾರ್ಲೆ-ಜಿ ಪಾಕೆಟ್ ಗಳ ಉತ್ಪಾದನೆ
Parle-G biscuit : ಬಿಸಿ ಬಿಸಿ ಚಹಾನೋ ಕಾಫಿನೂ ಕುಡಿಯೋರಿಗೆ ಜೊತೆಯಲ್ಲಿ ಕರುಂ ಕುರು ಅಂತ ಬಿಸ್ಕೆಟ್ ತಿನ್ನೋಕ್ಕೆ ಸಿಕ್ಕಿದ್ರೆ ಸಖತ್ ಖುಷಿ ಆಗುತ್ತೆ. ಈ ಬಿಸ್ಕೆಟ್ ಮಕ್ಕಳಿಂದ ಹಿಡಿದು ಮುದುಕರವರೆಗೂ ಸಕ್ಕತ್ ಇಷ್ಟ ಪಡುವುದು ಗೊತ್ತೇ ಇದೆ. ಈಗಿನ ಕಾಲದ ಅಜ್ಜಂದಿರು ಕುಳಿತುಕೊಂಡು ನಾವು ಚಿಕ್ಕವರಿದ್ದಾಗ ಇದೇ ಬಿಸ್ಕೆಟ್ ತಿಂತಿದ್ವಿ ಅಂತ ನೆನಪು ಮಾಡಿಕೊಳ್ಳುತ್ತಾರೆ. ಅದೇ ಪಾರ್ಲೆ- ಜಿ.
ಪಾರ್ಲೆ ಜಿ ಬಿಸ್ಕೆಟ್ ತಿನ್ನದೇ ಇರೋರು ಬಹುಶ: ಯಾರು ಇಲ್ಲ. ಬಹಳ ವರ್ಷಗಳಿಂದನು ಈ ಬಿಸ್ಕೆಟ್ ತುಂಬಾನೇ ಫೇಮಸ್. ನಿಮಗೆ ಗೊತ್ತಾ, ಕರೋನ ಸಾಂಕ್ರಾಮಿಕ ಸಂಕಷ್ಟದ ಸಮಯದಲ್ಲಿ ಪಾರ್ಲೆ-ಜಿ ಬಿಸ್ಕೆಟ್ ದಾಖಲೆ ಮಾರಾಟ ಆಗಿದ್ಯಂತೆ. ಅಂತ ಬಿಸ್ಕೆಟ್ ನ ಬಗ್ಗೆ ಒಂದು ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಪಾರ್ಲೆ-ಜಿ ಯಲ್ಲಿರುವ ಜಿ ಅರ್ಥ ಏನು?
ಬಹಳಷ್ಟು ಜನರ ಅತ್ಯಂತ ಇಷ್ಟದ ಬಿಸ್ಕೆಟ್ ಪಾರ್ಲೆ- ಜಿ. ಇದು 1938 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪರಿಚಯಗೊಂಡಿತು. ಈ ಹಿಂದೆ ಇದೇ ಬಿಸ್ಕೆಟ್ ಪಾರ್ಲೆ ಗ್ಲುಕೋ ಎಂದು ಕರೆಯಲ್ಪಟ್ಟಿತ್ತು. ಇಂದು ಬಿಸ್ಕೆಟ್ ನ ಅದೆಷ್ಟೋ ಬ್ರಾಂಡ್ಗಳು ಆರಂಭವಾಗಿರಬಹುದು, ಆದರೆ ಪಾರ್ಲೆ ಜಿ ಮಾತ್ರ ತನ್ನ ಅಸ್ತಿತ್ವವನ್ನು ಅಂದಿನಿಂದ ಇಂದಿಗೂ ಉಳಿಸಿಕೊಂಡು ಬಂದಿದೆ.
ಪಾರ್ಲೆ ಗ್ಲುಕೋ 1985ರಲ್ಲಿ ಪಾರ್ಲೆ ಜಿ ಆಗಿ ಬದಲಾಯಿತು. ಇಲ್ಲಿ ಜಿ ಅಂದ್ರೆ ಗ್ಲುಕೋಸ್ ಎಂದರ್ಥ. ನಂತರ ಅದನ್ನು ಜೀನಿಯಸ್ ಎಂದು ಸ್ಲೋಗನ್ ನಾಗಿ ಬಳಸಲಾಯಿತು.
ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ನಿಂದ 10 ಲಕ್ಷ ಸಬ್ಸಿಡಿ ಸಾಲ, ಯಾವುದೇ ದಾಖಲೆಗಳು ಬೇಕಿಲ್ಲ
ಸ್ವಾತಂತ್ರ್ಯ ಪೂರ್ವದಲ್ಲಿಯೇ ದೇಶದಲ್ಲಿ ಬಳಕೆಯಲ್ಲಿ ಇದ್ದ ಪಾರ್ಲೆ-ಜಿ ಇಂದು ಸುಮಾರು 50,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಧಾರವಾಗಿದೆ. ಮೋಹನ್ ಲಾಲ್ ದಯಾಳ್ ಎನ್ನುವವರು ಪಾರ್ಲೆ-ಜಿಯನ್ನು 1929ರಲ್ಲಿ ಮುಂಬೈನ ವಿಲೇ ಪಾರ್ಲೆಯಲ್ಲಿ ಮೊದಲ ಕಾರ್ಖಾನೆ ಆರಂಭಿಸಿದರು. ಈ ಉದ್ಯಮ ಆರಂಭವಾದಾಗ ಕೇವಲ 12 ಜನರು ಮಾತ್ರ ಉದ್ಯೋಗಿಗಳಿದ್ದು, ಈಗ ಅದು ಐವತ್ತು ಸಾವಿರವನ್ನು ದಾಟಿದೆ.
ಪಾರ್ಲೆಜಿ ಪ್ಯಾಕ್ ಮೇಲೆ ಇರುವ ಮಗುವಿನ ಚಿತ್ರ ಯಾರದ್ದು ಗೊತ್ತಾ!
ಪಾರ್ಲೆಜಿಯನ್ನ ಮೊದಲು ಬಟರ್ ಪೇಪರ್ನಲ್ಲಿ ಸುತ್ತಿ ಕೊಡಲಾಗುತ್ತಿತ್ತು. ನಂತರ ಪ್ಯಾಕೇಜಿಂಗ್ ಕಡೆಗೆ ಗಮನ ಹರಿಸಿದ ಕಂಪನಿ, ಪ್ಲಾಸ್ಟಿಕ್ ಗಳಲ್ಲಿ ಪಾರ್ಲೆ ಜಿ ಮಾರಾಟ ಮಾಡುವ ಕೆಲಸ ಆರಂಭಿಸಿತು. ಈ ಬಿಸ್ಕೆಟ್ ಪ್ಯಾಕ್ ಮೇಲೆ ಮುದ್ದಾದ ಮಗುವಿನ ಚಿತ್ರವನ್ನು ಕಾಣಬಹುದು.
ಈ ಚಿತ್ರ ನೀರು ದೇಶಪಾಂಡೆ ಎನ್ನುವ ಹುಡುಗಿಯದ್ದು ಎಂದು ಕೆಲವು ವರ್ಷಗಳ ಹಿಂದೆ ಸಾಕಷ್ಟು ವದಂತಿಗಳು ಹಬ್ಬಿದವು. ಇನ್ನು ಕೆಲವರು ಇದು ಸುಧಾ ಮೂರ್ತಿ ಅವರ ಚಿಕ್ಕ ವಯಸ್ಸಿನ ಫೋಟೋ ಎಂದು ಕೂಡ ಹೇಳುತ್ತಿದ್ದರು. ಆದರೆ ಇವೆಲ್ಲವೂ ಊಹಾಪೋಹಗಳು ಅಷ್ಟೇ. ನಿಜವಾಗಿ ಇದೊಂದು ಕಾಲ್ಪನಿಕ ಚಿತ್ರಣ. 60ರ ದಶಕದಲ್ಲಿ ಎವರೆಸ್ಟ್ ಕ್ರಿಯೇಟಿವ್ ನ ಕಲಾವಿದ ಮಗನ್ ಲಾಲ್ ದೈಯಾ ಅವರದ್ದೇ ಕಲ್ಪನೆಯಲ್ಲಿ ಚಿತ್ರಿಸಿದ ಒಂದು ಫೋಟೋ ಅಷ್ಟೇ.
ಪಾರ್ಲೆಜಿಯ ರುಚಿ, ಗುಣಮಟ್ಟ ಯಾವುದರಲ್ಲಿಯೂ ಇಂದಿಗೂ ಕಾಂಪ್ರಮೈಸ್ ಮಾಡಿಕೊಂಡಿಲ್ಲ. ತಿಂಗಳಿಗೆ ಸುಮಾರು 100 ಕೋಟಿ ಪಾರ್ಲೆಜಿ ಪ್ಯಾಕೆಟ್ ಉತ್ಪಾದನೆಯಾಗುತ್ತವೆ ಎಂದ್ರೆ ಮೆಚ್ಚಲೇಬೇಕು. 50 ಲಕ್ಷಕ್ಕೂ ಹೆಚ್ಚು ರಿಟೇಲ್ ಅಂಗಡಿಯಲ್ಲಿ ಪಾರ್ಲೆ-ಜಿ ಬಿಸ್ಕೆಟ್ ಮಾರಾಟವಾಗುತ್ತೆ.
ಒಂದು ಸಮೀಕ್ಷೆಯ ಪ್ರಕಾರ ಚಿಲ್ಲರೆ ಮಾರಾಟದಲ್ಲಿ 5,000 ಕೋಟಿಗಳ ಗಡಿ ದಾಟಿದ ಹೆಗ್ಗಳಿಕೆ ಪಾರ್ಲೆ-ಜಿಗೆ ಸಲ್ಲುತ್ತದೆ. ಭಾರತದಲ್ಲಿ ಪಾತ್ರವಲ್ಲದೆ ಚೀನಾದಲ್ಲಿಯೂ ಕೂಡ ಪಾರ್ಲೆಜಿ ಬಿಸ್ಕೆಟ್ ಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಇನ್ನು ಯುಕೆ, ಕೆನಡಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿಯೂ ಕೂಡ ಪಾರ್ಲೆ-ಜಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಒಟ್ಟಿನಲ್ಲಿ ಎಲ್ಲರ ಅಚ್ಚುಮೆಚ್ಚಿನ ಪಾರ್ಲೆ – ಜಿಗೆ ಬಹಳ ದೊಡ್ಡ ಇತಿಹಾಸವಿದೆ.
Do you know what the ‘G’ written on the Parle-G biscuit pack signifies