ಕಡಿಮೆ ಬಡ್ಡಿಗೆ ಸಿಗಲಿದೆ ವಿದ್ಯಾರ್ಥಿಗಳಿಗೆ ಪರ್ಸನಲ್ ಲೋನ್; ಇಲ್ಲಿದೆ ಡಿಟೇಲ್ಸ್
- ಎಜುಕೇಶನ್ ಲೋನ್ ಗಿಂತ ವಿದ್ಯಾರ್ಥಿ ಪರ್ಸನಲ್ ಲೋನ್ ವಿಭಿನ್ನ
- 50 ಲಕ್ಷ ರೂಪಾಯಿಗಳ ವರೆಗೂ ಸಿಗುತ್ತೆ ವಿದ್ಯಾರ್ಥಿ ಪರ್ಸನಲ್ ಲೋನ್
- ವಿದ್ಯಾರ್ಥಿ ವೈಯಕ್ತಿಕ ಸಾಲ ಮರುಪಾವತಿ ಮಾಡಲು ಆರು ವರ್ಷಗಳ ಕಾಲವಕಾಶ
Student Personal Loan : ಶಿಕ್ಷಣ ಎನ್ನುವುದು ಒಂದು ವ್ಯಾಪಾರವಾಗಿ ಬಿಟ್ಟಿದೆ. ದಿನದಿಂದ ದಿನಕ್ಕೆ ಶಿಕ್ಷಣಕ್ಕಾಗಿ ತೆಗೆದುಕೊಳ್ಳುವ ಡೊನೇಷನ್ ಮತ್ತು ಶುಲ್ಕದ ದರ ಹೆಚ್ಚುತ್ತಿದೆ. ಹೀಗಾಗಿ ಎಷ್ಟೋ ವಿದ್ಯಾರ್ಥಿಗಳು ತಮ್ಮ ಕನಸಿನ ಎಜುಕೇಶನ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅತಿಯಾದ ಡೋನೇಷನ್ ನಿಂದಾಗಿ ಕೆಲವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರೆ ಇನ್ನು ಕೆಲವರು ಎಜುಕೇಶನ್ ಲೋನ್ (Education Loan) ತೆಗೆದುಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ.
ವಿದ್ಯಾರ್ಥಿ ಪರ್ಸನಲ್ ಲೋನ್
ಸಾಮಾನ್ಯವಾಗಿ ನೀವು ಸ್ಟೂಡೆಂಟ್ ಲೋನ್ (Student Loan) ಬಗ್ಗೆ ಕೇಳಿರುತ್ತೀರಿ. ಆದರೆ ಸ್ಟೂಡೆಂಟ್ ಪರ್ಸನಲ್ ಲೋನ್ ಕೂಡ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಿಗುತ್ತೆ, ಆದರೆ ವಿದ್ಯಾರ್ಥಿ ವೈಯಕ್ತಿಕ ಸಾಲ ವಿಭಿನ್ನವಾಗಿದೆ. ಇದಕ್ಕೆ ಯಾವುದೇ ವ್ಯಕ್ತಿಯ ಜಾಮೀನು ಅಥವಾ ಗ್ಯಾರಂಟಿಯ ಅಗತ್ಯವಿರುತ್ತದೆ.
ಆಧಾರ್ ಕಾರ್ಡ್ ಒಂದಿದ್ರೆ ಸಿಗುತ್ತೆ 50,000 ಸಾಲ, ಈ ವಿಚಾರ ಸಾಕಷ್ಟು ಜನಕ್ಕೆ ತಿಳಿದಿಲ್ಲ
ವಿದ್ಯಾರ್ಥಿ ವೈಯಕ್ತಿಕ ಸಾಲದ ಪ್ರಯೋಜನಗಳು!
ವಿದ್ಯಾರ್ಥಿಗಳು ತಮ್ಮ ಬೋಧನಾ ಶುಲ್ಕವನ್ನು ಭರಿಸುವುದಕ್ಕಾಗಿ ಎಜುಕೇಶನಲ್ ಲೋನ್ ತೆಗೆದುಕೊಳ್ಳುತ್ತಾರೆ. ಆದರೆ ಪ್ರಯಾಣ, ಕಂಪ್ಯೂಟರ್ ವೆಚ್ಚ, ಬಾಡಿಗೆ ಮೊದಲಾದ ಖರ್ಚುಗಳನ್ನು ಪೂರೈಸುವುದಕ್ಕಾಗಿ ಸ್ಟುಡೆಂಟ್ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು. ಇದಕ್ಕೆ ಯಾವುದೇ ಮೇಲಾಧಾರದ ಅಗತ್ಯ ಇಲ್ಲ. ಆದರೆ ಒಬ್ಬರ ಗ್ಯಾರಂಟಿ ಇರಲೇಬೇಕು.
ಅಂದರೆ ವಿದ್ಯಾರ್ಥಿಗಳು ಸಾಲ ತೆಗೆದುಕೊಂಡು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಜಾಮೀನುದಾರನನ್ನು ಬ್ಯಾಂಕ್ ಪ್ರಶ್ನೆ ಮಾಡುತ್ತದೆ. ಇನ್ನು ವಿದ್ಯಾರ್ಥಿ ಪರ್ಸನಲ್ ಲೋನ್ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತದೆ. ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ದರದಲ್ಲಿ ಸಾಲ ತೆಗೆದುಕೊಳ್ಳಬಹುದು ಎಂಬುದನ್ನು ನೋಡೋಣ.
ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ನಿಂದ 10 ಲಕ್ಷ ಸಬ್ಸಿಡಿ ಸಾಲ, ಯಾವುದೇ ದಾಖಲೆಗಳು ಬೇಕಿಲ್ಲ
ಐಸಿಐಸಿಐ ಬ್ಯಾಂಕ್: ವಿದ್ಯಾರ್ಥಿ ಪರ್ಸನಲ್ ಲೋನ್ ಅನ್ನು 50 ಲಕ್ಷ ರೂಪಾಯಿಗಳವರೆಗೆ ಈ ಬ್ಯಾಂಕ್ ನೀಡುತ್ತದೆ ಒಂದರಿಂದ ಆರು ವರ್ಷಗಳ ಅವಧಿಯ ಒಳಗೆ ನೀವು ಸಾಲವನ್ನು ಮರುಪಾವತಿ ಮಾಡಬೇಕು 2% ಪ್ರೊಸೆಸಿಂಗ್ ಶುಲ್ಕ ತೆಗೆದುಕೊಳ್ಳಲಾಗುತ್ತದೆ. 10.85% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.
ಆಕ್ಸಿಸ್ ಬ್ಯಾಂಕ್: ಇಲ್ಲಿ 11.25% ಬಡ್ಡಿ ದರದಲ್ಲಿ, 10 ಲಕ್ಷ ರೂಪಾಯಿಗಳವರೆಗೆ ವಿದ್ಯಾರ್ಥಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಸಾಲ ಮರುಪಾವತಿ ಮಾಡಲು ಐದು ತಿಂಗಳಿನಿಂದ ಐದು ವರ್ಷಗಳವರೆಗೆ ಸಮಯ ನೀಡಲಾಗುವುದು.
ಹೆಚ್ ಡಿ ಎಫ್ ಸಿ ಬ್ಯಾಂಕ್: ಇಲ್ಲಿ ವಿದ್ಯಾರ್ಥಿಗಳು 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. 10.85% ಬಡ್ಡಿದರ ನಿಗದಿಪಡಿಸಲಾಗಿದ್ದು, ಸುಮಾರು 6500 ರೂಪಾಯಿಗಳಷ್ಟು ಪ್ರೊಸೆಸಿಂಗ್ ಫೀ ಇರುತ್ತದೆ.
ಕೋಟಕ್ ಮಹಿಂದ್ರ ಬ್ಯಾಂಕ್: ವಿದ್ಯಾರ್ಥಿಗಳ ವೈಯಕ್ತಿಕ ಸಾಲವನ್ನು 35 ಲಕ್ಷ ರೂಪಾಯಿಗಳ ವರೆಗೆ ಪಡೆದುಕೊಳ್ಳಬಹುದು. ಈ ಸಾಲಕ್ಕೆ ವಿಧಿಸಲಾಗುವ ಬಡ್ಡಿ 10.99% ಶೇಕಡ 5 ವರೆಗೆ ಸಂಸ್ಕರಣಾ ಶುಲ್ಕ ವಿಧಿಸಲಾಗುವುದು. ಆರು ವರ್ಷಗಳವರೆಗೆ ಸಾಲ ಮರುಪಾವತಿ ಮಾಡಬೇಕು.
ಐಡಿಎಫ್‌ಸಿ ಬ್ಯಾಂಕ್; ಈ ಬ್ಯಾಂಕ್ ನಲ್ಲಿಯೂ 10.99% ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ವಿದ್ಯಾರ್ಥಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ಸಾಲಮರುಪಾವತಿಗೆ ಐದು ವರ್ಷಗಳ ಕಾಲಾವಧಿ ಇತ್ತು ಸಂಸ್ಕರಣಾ ಶುಲ್ಕ 2% ಇರುತ್ತದೆ.
Personal Loan for Students at Low Interest Rates; Here are the Details