ಮಾರುತಿ 800 ಕಾರನ್ನು ಮೊದಲು ಖರೀದಿಸಿದವರು ಯಾರು, ಆಗ ಬೆಲೆ ಎಷ್ಟಿತ್ತು ಗೊತ್ತಾ?
ಮೊದಲ ಮಾರುತಿ 800 ಕಾರನ್ನು ದೆಹಲಿಯಲ್ಲಿ ಹರ್ಪಾಲ್ ಸಿಂಗ್ ಎಂಬ ವ್ಯಕ್ತಿ ಖರೀದಿಸಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರೇ ಅವರಿಗೆ ಕಾರಿನ ಕೀ ಹಸ್ತಾಂತರಿಸಿದರು.
Maruti Car: ಭಾರತದಲ್ಲಿ ಮಾರುತಿ ಕಂಪನಿಗೆ ಸೇರಿದ ಮೊದಲ ಕಾರು ಮಾರುತಿ 800 (Maruti 800 Car). ಭಾರತದಲ್ಲಿ ಈ ಮಾರುತಿ ಕಾರನ್ನು ಮೊದಲು ಖರೀದಿಸಿದ್ದು ಯಾರು? ಯಾವಾಗ? ಎಂಬ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ.
ಮಾರುತಿ ತನ್ನ ಮಾರುತಿ 800 ಅನ್ನು 1983 ರಲ್ಲಿ ಹರಿಯಾಣದಲ್ಲಿ (Haryana) ಬಿಡುಗಡೆ ಮಾಡಿತು. ಇದರ ಬೆಲೆ ಆಗ ರೂ. 47,500 ರೂಪಾಯಿ ಇತ್ತು. ಇನ್ನು ಮಾರುತಿ 800 ಉತ್ಪಾದನೆಯನ್ನು ಕಂಪನಿಯು 2010 ರಲ್ಲಿ ನಿಲ್ಲಿಸಿತು. ಆದರೆ 2004 ರವರೆಗೆ ಇದು ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು (Most Selling Car) ಎಂದೇ ಹೇಳಬಹುದು.
ಮೊದಲ ಮಾರುತಿ ಕಾರು ಖರೀದಿಸಿದವರು ಯಾರು?
ಮೊದಲ ಮಾರುತಿ 800 ಕಾರನ್ನು ದೆಹಲಿಯಲ್ಲಿ ಹರ್ಪಾಲ್ ಸಿಂಗ್ ಎಂಬ ವ್ಯಕ್ತಿ ಖರೀದಿಸಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರೇ ಅವರಿಗೆ ಕಾರಿನ ಕೀ ಹಸ್ತಾಂತರಿಸಿದರು.
ಹರ್ಪಾಲ್ ಸಿಂಗ್ 2010 ರಲ್ಲಿ ನಿಧನರಾದರು. ಆದರೆ ಅಲ್ಲಿಯವರೆಗೆ ಈ ಕಾರು ಅವರ ಬಳಿಯೇ ಇದೆ. ಪ್ರಸ್ತುತ, ಈ ಮೊದಲ ಕಾರನ್ನು ಮಾರುತಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ. ಇದರ ನೋಂದಣಿ ಸಂಖ್ಯೆ DIA 6479.
ಮಾರುತಿ 800 ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಒಂದಾಗಿತ್ತು. 30 ವರ್ಷಗಳಿಗೂ ಹೆಚ್ಚು ಕಾಲದ ತನ್ನ ಪ್ರಯಾಣದಲ್ಲಿ ಈ ಕಾರು ತನ್ನ ಹೆಸರಿಗೆ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಒಟ್ಟಾರೆಯಾಗಿ ಮಾರುತಿ 2,917,000 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಮಾರುತಿ ಸುಜುಕಿ ಆಲ್ಟೊ, ಹ್ಯುಂಡೈ ಐ10, ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಸುಜುಕಿ ವ್ಯಾಗನೀರ್ ಕಾರುಗಳು ಭಾರತದಲ್ಲಿ ಮಾರುತಿ 800 ನಂತೆಯೇ ಹೆಚ್ಚು ಮಾರಾಟವಾಗಿವೆ.
Who bought the first Maruti 800 car in India