Business News

ಮಹಿಳೆಯರಿಗೆ ಮೋದಿ ಸರ್ಕಾರದಿಂದ ಸಿಗುತ್ತಿದೆ 2 ಲಕ್ಷ ಸಾಲ; ಸ್ವಂತ ಉದ್ಯೋಗ ಆರಂಭಿಸಿ

ಕೇಂದ್ರದ ಮೋದಿ ಜಿ ಸರ್ಕಾರ (Central Modi ji government) ಮಹಿಳೆಯರ ಸಬಲೀಕರಣಕ್ಕಾಗಿ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆಯರು ಕೂಡ ಆರ್ಥಿಕವಾಗಿ ಸ್ವಾವಲಂಬನೆ (financial independence) ಪಡೆದುಕೊಳ್ಳಬೇಕು ಎನ್ನುವ ಸಲುವಾಗಿ ಬೇರೆ ಬೇರೆ ರೀತಿಯ ಸಾಲ ಸೌಲಭ್ಯ (Loan) ನೀಡುವಂತಹ ಹಾಗೂ ಸಬ್ಸಿಡಿ (subsidy) ಕೊಡುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಸಮಾಜದ ಎಲ್ಲಾ ವರ್ಗದ ಮಹಿಳೆಯರಿಗೆ ಅನುಕೂಲವಾಗುವಂತಹ ಬೇರೆ ಬೇರೆ ರೀತಿಯ ಯೋಜನೆಗಳು ಚಾಲ್ತಿಯಲ್ಲಿ ಇವೆ.

5 lakh interest free loan for women, Loan scheme of Modi government

ಕೇಂದ್ರ ಸರ್ಕಾರ ಈಗ ಜಾರಿಗೆ ತಂದಿರುವ ಯೋಜನೆಯ ಮೂಲಕ ಮಹಿಳೆಯರು ತಮ್ಮದೇ ಆಗಿರುವ ಉದ್ಯೋಗ (own business) ಆರಂಭಿಸಲು ಆರ್ಥಿಕ ನೆರವು (financial help) ನೀಡಲಾಗುತ್ತದೆ.

ಆಧಾರ್ ಬಿಗ್ ಅಪ್ಡೇಟ್! ಇನ್ಮುಂದೆ ಇಂತಹವರು ಆಧಾರ್ ಕಾರ್ಡ್ ಬಳಸಲು ಸಾಧ್ಯವಿಲ್ಲ

ಯಾವುದೇ ಬಂಡವಾಳ (investment) ಇಲ್ಲದೆ ಯಾವುದೇ ಹಿನ್ನೆಲೆಯೂ ಇಲ್ಲದೆ ಈಗ ಹೊಸದಾಗಿ ಉದ್ಯಮ ಆರಂಭಿಸಬೇಕು ಎಂದುಕೊಂಡಿರುವ ಮಹಿಳೆಯರಿಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ 2 ಲಕ್ಷ ರೂಪಾಯಿಗಳ ವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Govt Loan) ನೀಡುವ ಯೋಜನೆ ಇದಾಗಿದೆ.

ಪ್ರಧಾನ ಮಂತ್ರಿ ಸ್ವರ್ಣಿಮ ಯೋಜನೆ! (Pm swarnima Yojana)

ಪ್ರಧಾನ ಮಂತ್ರಿ ಸ್ವರ್ಣಿಮ ಯೋಜನೆ ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಇರುವಂತದ್ದು, ಯಾವುದೇ ಮಹಿಳೆ ಸ್ವಂತ ಉದ್ಯಮ ಮಾಡುತ್ತಿದ್ದರೆ ಅಥವಾ ಹೊಸ ಉದ್ಯಮ ಆರಂಭಿಸಲು ಪ್ರಯತ್ನಿಸಿದರೆ ಅವರಿಗೆ ಆರ್ಥಿಕ ಸಹಾಯ ನೀಡಲು, ಸ್ವರ್ಣಿಮಾ ಯೋಜನೆ ಜಾರಿಗೆ ತಂದಿದೆ.

ಸ್ವರ್ಣಿಮಾ ಯೋಜನೆಯ ಅಡಿಯಲ್ಲಿ ಮಹಿಳೆಯರು ಎರಡು ಲಕ್ಷಗಳ ವರೆಗೆ ಸಾಲ ಸೌಲಭ್ಯ (Loan Facility) ಪಡೆದುಕೊಳ್ಳಬಹುದು. ಇದಕ್ಕೆ ಅತಿ ಕಡಿಮೆ ಬಡ್ಡಿ ದರ (low interest rate ) ನಿಗದಿಪಡಿಸಲಾಗಿದ್ದು ಕೇವಲ 5% ಬಡ್ಡಿ ದರದಲ್ಲಿ ಈ ಯೋಜನೆಯ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

Study Abroad: ವಿದೇಶದಲ್ಲಿ ಓದಬೇಕು ಅನ್ನೋರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ!

ಮಹಿಳೆಯರಿಗಾಗಿಯೇ 5% ಬಡ್ಡಿ ದರದ ಯೋಜನೆ – Loan Scheme

Loan Schemeಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಸ್ವರ್ಣಿಮಾ ಯೋಜನೆ ಕೂಡ ಒಂದು. ಹಿಂದುಳಿದ ವರ್ಗದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ವಾರ್ಷಿಕ ವರಮಾನ ಮೂರು ಲಕ್ಷಕ್ಕಿಂತ ಕಡಿಮೆ ಇರುವ ಯಾವುದೇ ಕುಟುಂಬದ ಮಹಿಳೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದೇಶಕ್ಕೆ ಹೋಗೋ ಪ್ಲಾನ್ ಇದ್ರೆ ಪ್ರಯಾಣ ವಿಮೆ ತೆಗೆದುಕೊಳ್ಳೋದು ಮರೆಯಬೇಡಿ! ಯಾಕೆ ಗೊತ್ತಾ?

ಸರ್ಕಾರದಿಂದ ಈ ಯೋಜನೆಯ ಅಡಿಯಲ್ಲಿ 2 ಲಕ್ಷ ರೂಪಾಯಿಗಳನ್ನು 5% ಬಡ್ಡಿ ದರದಲ್ಲಿ ಸಾಲವಾಗಿ ಪಡೆಯಬಹುದು. ಸಾಲ ಮರುಪಾವತಿ ಮಾಡಲು ಎಂಟು ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಎಂಐ (EMI) ಮೂಲಕ ಮಹಿಳೆಯರು ಸಾಲದ ಮೊತ್ತವನ್ನು ಪಾವತಿಸಬೇಕು (Loan Re-Payment).

ಪ್ರಧಾನ ಮಂತ್ರಿ ಸ್ವರ್ಣಿಮಾ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು https://www.nbcfdc.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.

Women get 2 lakh loan from Modi government to Start own business

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories