Loan Scheme : ನಮ್ಮ ರಾಜ್ಯದಲ್ಲಿ ಸ್ವಂತ ಉದ್ಯಮ, ಸ್ವಂತ ಉದ್ಯೋಗ ಮಾಡುವವರಿಗೆ ಸಹಾಯ ಆಗಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರವು ಅವರಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಆಗಿದೆ.
ಈ ಒಂದು ಯೋಜನೆಯ ಅಡಿಯಲ್ಲಿ ಸ್ವಂತ ಉದ್ಯೋಗ (Own Business) ಮಾಡಬೇಕು ಎಂದುಕೊಂಡಿರುವವರಿಗೆ 2 ಲಕ್ಷದವರೆಗು ಸಾಲ ಸಿಗುತ್ತದೆ. ಅತೀ ಕಡಿಮೆ ಬಡ್ಡಿಯಲ್ಲಿ ಅಂದರೆ 4% ಬಡ್ಡಿಗೆ ಈ ಸಾಲ ಸೌಲಭ್ಯ ಸಿಗುತ್ತಿದೆ. ಹಾಗಿದ್ದಲ್ಲಿ ಈ ಸಾಲ ಪಡೆಯುವುದು ಹೇಗೆ ಎನ್ನುವ ಪೂರ್ತಿ ಮಾಹಿತಿಯನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ..
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
ಇದು ಸ್ವಂತ ಉದ್ಯಮ ಅಥವಾ ಸ್ವಂತ ಉದ್ಯೋಗ ಮಾಡಬೇಕು ಎಂದುಕೊಂಡಿರುವವರಿಗಾಗಿ ಜಾರಿಗೆ ತಂದಿರುವ ನೇರ ಸಾಲ ಯೋಜನೆ (Loan Scheme) ಆಗಿದ್ದು, ಈ ಯೋಜನೆಯ ಮೂಲಕ ಬ್ಯುಸಿನೆಸ್ ಮಾಡುವವರಿಗೆ ಸಬ್ಸಿಡಿ ಸಾಲ ಸಿಗುತ್ತದೆ. ಒಂದು ವೇಳೆ ನೀವು 2 ಲಕ್ಷ ಸಾಲ ಪಡೆದರೆ, ಅದರ ಮೇಲೆ 4% ಬಡ್ಡಿದರ ಸಿಗಲಿದೆ. ಹಾಗೆಯೇ ₹30,000 ಸಬ್ಸಿಡಿ ಕೂಡ ಸಿಗುತ್ತದೆ. ಇನ್ನುಳಿದ ₹1.70 ಲಕ್ಷ ರೂಪಾಯಿಗಳನ್ನು ನೀವು ಪಾವತಿ ಮಾಡಬೇಕಾಗುತ್ತದೆ. ಈ ರೀತಿಯಾಗಿ ಸರ್ಕಾರದ ಸಹಾಯ ಪಡೆದು ನಿಮ್ಮ ಬ್ಯುಸಿನೆಸ್ ಕನಸನ್ನು ನನಸು ಮಾಡಿಕೊಳ್ಳಬಹುದು.
Google Pay, PhonePe ಬಳಸೋರಿಗೆ ಬಿಗ್ ಅಲರ್ಟ್! UPI ಬಳಕೆದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವುದು ಎಲ್ಲಿ?
ಈ ಯೋಜನೆಯ ಮೂಲಕ ಹಣಕಾಸಿನ ಸಹಾಯ ಪಡೆಯಬೇಕು ಎಂದರೆ, ಅದಕ್ಕಾಗಿ ನೀವು ನಿಮಗೆ ಹತ್ತಿರ ಇರುವ ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ, ನಿಮ್ಮ ಬ್ಯುಸಿನೆಸ್ ಗೆ ಸಹಾಯ ಪಡೆಯುವುದಕ್ಕೆ 2024ರ ಆಗಸ್ಟ್ 31ನೇ ತಾರೀಕು ಕೊನೆಯ ದಿನಾಂಕ ಆಗಿರುತ್ತದೆ. ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:
*ಅರ್ಜಿದಾರರ ಆಧಾರ್ ಕಾರ್ಡ್ ಕಾಪಿ
*ಬ್ಯಾಂಕ್ ಪಾಸ್ ಬುಕ್ ಕಾಪಿ
*ಪಾಸ್ ಪೋರ್ಟ್ ಸೈಜ್ ಫೋಟೋ
*ಕ್ಯಾಸ್ಟ್ ಹಾಗೂ ಇನ್ಕಮ್ ಸರ್ಟಿಫಿಕೇಟ್
*ಬಿಪಿಎಲ್ ರೇಶನ್ ಕಾರ್ಡ್ ಡೀಟೇಲ್ಸ್
*ವಿದ್ಯಾಭ್ಯಾಸದ ಮಾರ್ಕ್ಸ್ ಕಾರ್ಡ್ ಗಳು.
ಸಾಲ ಪಡೆಯಲು ಅರ್ಹತೆ:
*ಅರ್ಜಿ ಸಲ್ಲಿಸುವ ವ್ಯಕ್ತಿ ಹಳ್ಳಿಯವರಾದರೆ ಅವರ ಕುಟುಂಬದ ವಾರ್ಷಿಕ ಆದಾಯ ₹98 ಸಾವಿರದ ಒಳಗಿರಬೇಕು. ಸಿಟಿಯವರಾದರೆ ಅವರ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷದ ಒಳಗಿರಬೇಕು.
*ಕರ್ನಾಟಕದಲ್ಲಿ ವಾಸ ಮಾಡುವವರೇ ಆಗಿದ್ದು, ಅವರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
*ಈ ಮೊದಲು ಸರ್ಕಾರದ ಇನ್ಯಾವುದೇ ಸೌಲಭ್ಯ ಪಡೆದಿರಬಾರದು.
*ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರಬೇಕು, ಅದಕ್ಕೆ ಫೋನ್ ನಂಬರ್ ಲಿಂಕ್ ಆಗಿರಬೇಕು.
*ಒಂದು ಫ್ಯಾಮಿಲಿಯಲ್ಲಿ ಒಬ್ಬರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.
*ನೀವು ಶುರು ಮಾಡುವ ಉದ್ಯಮ ಅಥವಾ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು.
*ಅರ್ಜಿ ಹಾಕುವ ವ್ಯಕ್ತಿ ಈ ವೇಳೆ ನಿರುದ್ಯೋಗಿ ಆಗಿದ್ದು, ಅದಕ್ಕೆ ಬೇಕಾದ ದಾಖಲೆ ಇರಬೇಕು.
You will get a loan of up to 2 lakhs to start your own business
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.