Google Pay, PhonePe ಬಳಸೋರಿಗೆ ಬಿಗ್ ಅಲರ್ಟ್! UPI ಬಳಕೆದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್
ಈಗ ಹೆಚ್ಚಿನ ಜನರು ಹಣಕಾಸಿನ ವಹಿವಾಟು ನಡೆಸಲು ಯುಪಿಐ ಆಪ್ ಗಳನ್ನು ಬಳಕೆ ಮಾಡುತ್ತಾರೆ. ಭಾರತ ದೇಶ ಈಗ ಡಿಜಿಟಲ್ ಇಂಡಿಯಾ ಆಗುತ್ತಿದೆ. ಫೋನ್ ಪೇ, ಗೂಗಲ್ ಪೇ ಇಂಥ ಆಪ್ ಗಳ ಮೂಲಕ ಕೂತಲ್ಲಿಂದಲೇ, ನಿಂತಲ್ಲಿಂದಲೇ ಹಣಕಾಸಿನ ವಹಿವಾಟು ನಡೆಸಬಹುದು.
ಆದರೆ ಈ ಆಪ್ ಗಳನ್ನು ಬಳಕೆ ಮಾಡುವಾಗ, ನೀವು ಬಹಳ ಹುಷಾರಾಗಿ ಇರಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ನಿಮಗೆ ಹಾನಿ ಉಂಟಾಗಬಹುದು. ಹಾಗಿದ್ದಲ್ಲಿ ಗೂಗಲ್ ಪೇ ಫೋನ್ ಪೇ ವಿಷಯದಲ್ಲಿ ಯಾವ ಥರ ಹುಷಾರಾಗಿ ಇರಬೇಕು ಎಂದು ತಿಳಿದುಕೊಳ್ಳೋಣ..
ಈ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ ₹500 ರೂಪಾಯಿ! ಇಂದೇ ಅಪ್ಲೈ ಮಾಡಿ ಪಡೆಯಿರಿ!
ಈ ಕ್ರಮಗಳನ್ನು ಅನುಸರಿಸಿ:
ಸುರಕ್ಷತೆ ಇದ್ದಲ್ಲಿ ಮಾತ್ರ ಹಣ ಪಾವತಿಸಿ: ಈಗ ಎಲ್ಲಾ ಕಡೆ ಗೂಗಲ್ ಪೇ, ಫೋನ್ ಪೇ ಬಳಕೆದಾರರು ಇದ್ದಾರೆ. ಸಣ್ಣ ಅಂಗಡಿ, ದೊಡ್ಡ ಅಂಗಡಿ, ಮಾಲ್ ಗಳು ಎಲ್ಲಾ ಕಡೆ ಗೂಗಲ್ ಪೇ, ಫೋನ್ ಪೇ ಬಳಸಿ ಹಣಪಾವತಿ ಮಾಡಬಹುದು. ಇದು ಸುಲಭ ಹೌದು, ಆದರೆ ಎಲ್ಲಾ ಕಡೆ ಸ್ಕ್ಯಾನ್ ಮಾಡುವುದಕ್ಕಿಂತ ಮೊದಲು ಅದು ಸುರಕ್ಷಿಯವಾಗಿದೆಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನಿಮಗೆ ತೊಂದರೆಯಾಗುತ್ತದೆ. ಹಾಗಾಗಿ ಹುಷಾರಾಗಿರಿ..
Two Factor Authentication: ಜಿಮೇಲ್, ಫೇಸ್ ಬುಕ್ ಇದಕ್ಕೆಲ್ಲ ಇರುವ ಹಾಗೆ ಗೂಗಲ್ ಪೇ, ಫೋನ್ ಪೇ ಆಪ್ ಗಳಿಗೆ ಕೂಡ Two Factor Authentication ಶುರು ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಅಕೌಂಟ್ ಗೆ ಸುರಕ್ಷತೆ, ಭದ್ರತೆ ಇರುತ್ತದೆ. ಹ್ಯಾಕ್ ಮಾಡುವವರು ಅಷ್ಟು ಸುಲಭವಾಗಿ ನಿಮ್ಮ ಅಕೌಂಟ್ ಗೆ ಪ್ರವೇಶ ಪಡೆಯಲು ಸಾಧ್ಯ ಆಗುವುದಿಲ್ಲ. ಹಾಗಾಗಿ ಭದ್ರತೆ ವಿಷಯದಲ್ಲಿ ಇದೊಂದು ಜಾರಿಗೆ ಬಂದರೆ ಉತ್ತಮವಾಗಿರುತ್ತದೆ.
ಮನೆ ಮೇಲೆ ಖಾಲಿ ಟೆರೆಸ್ ಇದ್ರೆ ಸಾಕು, ಟವರ್ ಹಾಕಿಸಿ ಪ್ರತಿ ತಿಂಗಳು ₹60 ಸಾವಿರ ಸಂಪಾದನೆ ಮಾಡಿ!
ನಿಮ್ಮ ಮೊಬೈಲ್ ಇಂಟರ್ನೆಟ್ ಮಾತ್ರ ಬಳಸಿ: ನೀವು ಯುಪಿಐ ಮೂಲಕ ವಹಿವಾಟು ನಡೆಸಬೇಕು ಎಂದರೆ, ನಿಮ್ಮ ಮೊಬೈಲ್ ನೆಟ್ವರ್ಕ್ ಹಾಗೂ ಸುರಕ್ಷಿತವಾಗಿರುವ ಇಂಟರ್ನೆಟ್ ಗಳನ್ನು ಮಾತ್ರ ಬಳಕೆ ಮಾಡಿ. Public wifi ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬೇಡಿ. ಇದರಿಂದ ನಿಮ್ಮ ಪರ್ಸನಲ್ ಡೇಟಾ ಹ್ಯಾಕರ್ ಗಳ ಪಾಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸುರಕ್ಷಿತವಾದ ನಿಮ್ಮ ಮೊಬೈಲ್ ಇಂಟರ್ನೆಟ್ ಗಳನ್ನು ಮಾತ್ರ ಬಳಕೆ ಮಾಡುವುದು ನಿಮಗೆ ಒಳ್ಳೆಯದು..
ಗೂಗಲ್ ಪ್ಲೇ ಸ್ಟೋರ್ (Google Play Store) ಇಂದ ಮಾತ್ರ ಆಪ್ ಡೌನ್ಲೋಡ್ (App Download)ಮಾಡಿ: ನೀವು ಯುಪಿಐ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಬೇಕು ಎಂದರೆ, ಅದನ್ನು ಸುರಕ್ಷಿತವಾದ ಸೈಟ್ ಇಂದ ಅಥವಾ ಗೂಗಲ್ ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಿ. ಬೇರೆ ಸೈಟ್ ಗಳಿಂದ ಇನ್ಸ್ಟಾಲ್ ಮಾಡಿದರೆ, ನಿಮ್ಮ ಫೋನ್ ಗೆ ಮಾಲ್ವೇರ್ ಅತ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹುಷಾರಾಗಿರಿ.
ವಹಿವಾಟುಗಳನ್ನು ಟ್ರ್ಯಾಕ್ ಮಾಡಿ: ಯುಪಿಐ ಬಳಕೆ ಮಾಡುವಾಗ ನಿಮ್ಮ ದೈನಂದಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತಾ ಇರಿ. ಎಲ್ಲವೂ ಸರಿ ಇದೆಯಾ ಎಂದು ಚೆಕ್ ಮಾಡುತ್ತಾ ಇರಿ. ಅಕಸ್ಮಾತ್ ಏನಾದರೂ ಸಹ, ಅನುಮಾನ ಬರುವ ಹಾಗೆ ನೀವು ಮಾಡಿಲ್ಲದ ಹಣಕಾಸಿನ ವಹಿವಾಟು ಕಂಡುಬಂದರೆ, ಅಂಥ ಸಮಯದಲ್ಲಿ ಬ್ಯಾಂಕ್ ಗೆ ದೂರು ನೀಡಿ. ಒಟ್ಟಿನಲ್ಲಿ ಇದೆಲ್ಲವನ್ನು ಟ್ರ್ಯಾಕ್ ಮಾಡುವುದು ತುಂಬಾ ಮುಖ್ಯ.
ಯುಪಿಐ ಬಳಕೆ ಹೆಚ್ಚಾಗಿರುವುದರ ಜೊತೆಗೆ ಅದರ ಸುರಕ್ಷತೆ ಕೂಡ ಅದೇ ರೀತಿ ಇರಬೇಕು. ಯುಪಿಐ ಪೇಮೆಂಟ್ ಗಳನ್ನು ಮಾಡುವಾಗ, ಎಲ್ಲವನ್ನು ಟ್ರ್ಯಾಕ್ ಮಾಡುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕು. ಮೇಲೆ ತಿಳಿಸಿರುವ ಎಲ್ಲಾ ಕ್ರಮಗಳನ್ನು ಅನುಸರಿಸುವ ಮೂಲಕ ಹುಷಾರಾಗಿರಿ. ನಿಮ್ಮ ಅಕೌಂಟ್ ಗೆ ಯಾವುದೇ ಸಮಸ್ಯೆ ಮಾಡಿಕೊಳ್ಳಬೇಡಿ..
Big Alert for Google Pay, PhonePe Users, Here is a new update for UPI users
Our Whatsapp Channel is Live Now 👇