ಮನೆ ಮೇಲೆ ಖಾಲಿ ಟೆರೆಸ್‌ ಇದ್ರೆ ಸಾಕು, ಟವರ್ ಹಾಕಿಸಿ ಪ್ರತಿ ತಿಂಗಳು ₹60 ಸಾವಿರ ಸಂಪಾದನೆ ಮಾಡಿ!

ನಿಮ್ಮ ಮನೆಯ ಟೆರೆಸ್ ಇಂದಲೇ ನೀವು ಪ್ರತಿ ತಿಂಗಳು ₹60 ಸಾವಿರ ರೂಪಾಯಿಯವರೆಗು ಆದಾಯ ಗಳಿಸಬಹುದು. ಹೌದು ಇದು ಸತ್ಯ. ಹಾಗಿದ್ರೆ ಟೆರೆಸ್ ಇಂದ ಅಷ್ಟೆಲ್ಲಾ ಆದಾಯ ಗಳಿಸೋದು ಹೇಗೆ ಎಂದು ತಿಳಿಯೋಣ

Bengaluru, Karnataka, India
Edited By: Satish Raj Goravigere

ಚೆನ್ನಾಗಿ ಓದಿದ್ದು ಒಳ್ಳೆಯ ಕೆಲಸ ಸಿಗ್ತಿಲ್ವಾ? ಅಥವಾ ಈಗ ಮಾಡ್ತಿರೋ ಕೆಲಸದ ಜೊತೆಗೆ ಹೆಚ್ಚುವರಿ ಆದಾಯ ಬೇಕಾ? ಸುಲಭವಾಗಿ ಆದಾಯ ಬರೋ ವಿಧಾನ ಬೇಕಾ? ಹಾಗಿದ್ರೆ ಇಂದು ನಿಮಗೊಂದು ಒಳ್ಳೆಯ ಐಡಿಯಾ ತಿಳಿಸಿಕೊಡುತ್ತೇವೆ. ನಿಮ್ಮ ಮನೆಯ ಟೆರೆಸ್ ಇಂದಲೇ ನೀವು ಪ್ರತಿ ತಿಂಗಳು ₹60 ಸಾವಿರ ರೂಪಾಯಿಯವರೆಗು ಆದಾಯ ಗಳಿಸಬಹುದು. ಹೌದು ಇದು ಸತ್ಯ. ಹಾಗಿದ್ರೆ ಟೆರೆಸ್ ಇಂದ ಅಷ್ಟೆಲ್ಲಾ ಆದಾಯ ಗಳಿಸೋದು ಹೇಗೆ ಎಂದು ತಿಳಿಯೋಣ..

ನಂಬುವುದಕ್ಕೆ ಕಷ್ಟ ಅನ್ನಿಸಿದರೂ ಕೂಡ ಇದು ಸತ್ಯ. ನಿಮ್ಮ ಮನೆಯಲ್ಲಿ ಒಂದು ಟೆರೆಸ್ ಇದ್ರೆ ಸಾಕು, ಅದರಿಂದ ನೀವು ಪ್ರತಿ ತಿಂಗಳು 60 ಸಾವಿರ ವರೆಗು ಸುಲಭವಾಗಿ ಸಂಪಾದನೆ ಮಾಡಬಹುದು. ಇದು ಹಣ ಸಂಪಾದನೆ ಮಾಡಲು ಅತ್ಯಂತ ಸರಳವಾದ ವಿಧಾನ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಹಣ ಗಳಿಸುವುದು ಯಾವ ರೀತಿ ಎಂದು ಹೇಳಿದರೆ ನಿಮ್ಮ ಮನೆಯ ಟೆರೆಸ್ ನಲ್ಲಿ ಮೊಬೈಲ್ ನೆಟ್ವರ್ಕ್ ಟವರ್ (Tower) ಸ್ಥಾಪಿಸುವ ಮೂಲಕ ಹಣ ಸಂಪಾದನೆ ಮಾಡಬಹುದು..

If there is an empty terrace on the house, put up a tower and earn 60 thousand

ಯಾವುದೇ ಬ್ಯಾಂಕ್ ಅಕೌಂಟ್ ಇದ್ದು ಈ ರೂಲ್ಸ್ ಫಾಲೋ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಬಂದ್ ಆಗುತ್ತೆ!

ಹೌದು, ಈಗ ಟೆಲಿಕಾಂ ಕಂಪನಿಗಳು ಜನರಿಗೆ ಒಳ್ಳೆಯ ನೆಟ್ವರ್ಕ್ ಸೇವೆ ಕೊಡಬೇಕು ಎಂದು ಪ್ರಯತ್ನಪಡುತ್ತಿದೆ. ಹಾಗಾಗಿ ಹೆಚ್ಚು ಟವರ್ ಗಳನ್ನು ಸ್ಥಾಪಿಸುವ ಪ್ಲಾನ್ ಅನ್ನು ಕೂಡ ಹೊಂದಿದೆ. ಹಾಗಾಗಿ ನಿಮ್ಮಮನೆಯ ಟೆರೆಸ್ ಮೇಲೆ ಕೂಡ ಮೊಬೈಲ್ ನೆಟ್ವರ್ಕ್ ಟವರ್ ಅನ್ನು ಸ್ಥಾಪಿಸಬಹುದು. ಇದಕ್ಕಾಗಿ ನಿಮ್ಮ ಮನೆಯ ಟೆರೆಸ್ ನಲ್ಲಿ 500 ಚಡರಗಳಷ್ಟು ಜಾಗ ಇರಬೇಕು ಎನ್ನುವುದು ಕಡ್ಡಾಯವಾದ ನಿಯಮ ಆಗಿರುತ್ತದೆ. ಇದಿಷ್ಟು ಜಾಗ ನಿಮ್ಮ ಬಳಿ ಇದ್ದರೆ, ಮೊಬೈಲ್ ಟವರ್ ಅನ್ನು ಸುಲಭವಾಗಿ ಸ್ಥಾಪಿಸಬಹುದು.

ಹೌದು, ಮೊಬೈಲ್ ಟವರ್ ಸ್ಥಾಪಿಸುವುದಕ್ಕೆ ಕಂಪನಿಯವರು ನಿಮ್ಮನ್ನು ಅಪ್ರೋಚ್ ಮಾಡುವುದಿಲ್ಲ. ನೀವೇ ಆಯಾ ಕಂಪನಿಯ ಏಜೆಂಟ್ ಗಳನ್ನು ಸಂಪರ್ಕಿಸಬೇಕಾಗುತ್ತದೆ. ಅಥವಾ ಆನ್ಲೈನ್ ಮೂಲಕ ಅವರನ್ನು ಸಂಪರ್ಕಿಸಬಹುದು. ಅವರೇ ಬಂದು ನಿಮ್ಮ ಮನೆಯ ಟೆರೆಸ್ ಅನ್ನು ಚೆಕ್ ಮಾಡಿ, ಜಾಗ ಸರಿ ಇದೆ ಎಂದರೆ ಟವರ್ ಸ್ಥಾಪನೆ ಮಾಡುತ್ತಾರೆ. ಹಾಗೆಯೇ ಯಾಗ ಕಂಪನಿಯ ಟವರ್ ಸ್ಥಾಪನೆ ಆಗಿದೆ ಎನ್ನುವುದರ ಮೇಲೆ ತಿಂಗಳಿಗೆ 10 ಸಾವಿರದಿಂದ 50 ಸಾವಿರ ವರೆಗು ಬಾಡಿಗೆ ಕೊಡುತ್ತಾರೆ.

ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಪ್ರತಿ ತಿಂಗಳು ₹1500 ಹೂಡಿಕೆ ಮಾಡಿದ್ರೆ, 31 ಲಕ್ಷ ರಿಟರ್ನ್ಸ್ ಸಿಗುತ್ತೆ

Idea Telecom Infra Ltd, Vodafone, Airtel, American Tower Corporation, BSNL Tower Infrastructure SR Telecom, GTL Infrastructure, NFCL Connection Infrastructure ಇದಿಷ್ಟು ಕಂಪನಿಗಳು ಮೊಬೈಲ್ ನೆಟ್ವರ್ಕ್ ಟವರ್ ಗಳ ನಿರ್ಮಾಣ ಮಾಡುತ್ತವೆ. ಇವುಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನಿಮ್ಮ ಊರಿನ ನಗರಸಭೆ ಇಂದ ಪರ್ಮಿಶನ್ ಕೂಡ ಪಡೆಯಬೇಕಾಗುತ್ತದೆ.

If there is an empty terrace on the house, put up a tower and earn 60 thousand