ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಪ್ರತಿ ತಿಂಗಳು ₹1500 ಹೂಡಿಕೆ ಮಾಡಿದ್ರೆ, 31 ಲಕ್ಷ ರಿಟರ್ನ್ಸ್ ಸಿಗುತ್ತೆ
ಪೋಸ್ಟ್ ಆಫೀಸ್ ನಲ್ಲಿ ಗ್ರಾಹಕರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳನ್ನು ತರಲಾಗುತ್ತದೆ. ಅವುಗಳಿಂದ ಒಳ್ಳೆಯ ರಿಟರ್ನ್ಸ್ ಅನ್ನು ಕೂಡ ಪಡೆಯುತ್ತೀರಿ. ಅಂಥದ್ದೇ ಒಳ್ಳೆಯ ಲಾಭ ತರುವಂಥ ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ₹1500 ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ವೇಳೆಗೆ 31 ರಿಂದ 35 ಲಕ್ಷದವರೆಗೂ ಆದಾಯ ಪಡೆಯಬಹುದು..
ಈ ಒಂದು ಹೂಡಿಕೆಯ ಯೋಜನೆ ಇಂದ ನಿಮಗೆ ಒಳ್ಳೆಯ ರಿಟರ್ನ್ಸ್ ಬರುವುದರ ಜೊತೆಗೆ, ನಿಮ್ಮ ಹಣ ಕೂಡ ಅಷ್ಟೇ ಸುರಕ್ಷಿತವಾಗಿ ಇರುತ್ತದೆ. ನಿಮ್ಮ ಹಣಕ್ಕೆ ಯಾವುದೇ ಅಪಾಯ ತರದಂಥ ಈ ಒಂದು ಯೋಜನೆಯ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ, ಈ ಯೋಜನೆಯ ಹೆಸರು ಗ್ರಾಮೀಣ ಸುರಕ್ಷಾ ಯೋಜನೆ ಅಥವಾ ಗ್ರಾಮ ಸುರಕ್ಷಾ ಯೋಜನೆ. ಈ ಒಂದು ಯೋಜನೆಯಲ್ಲಿ 19 ರಿಂದ 55 ವರ್ಷಗಳ ನಡುವೆ ಇರುವ ಯಾವುದೇ ವ್ಯಕ್ತಿ ಹೂಡಿಕೆ ಶುರು ಮಾಡಬಹುದು..

ಸ್ಟೇಟ್ ಬ್ಯಾಂಕಿನಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಎಫ್‌ಡಿ ಯೋಜನೆ ಶುರು! ಈಗಲೇ ಡೆಪಾಸಿಟ್ ಮಾಡಿ
ಗ್ರಾಮ ಸುರಕ್ಷಾ ಯೋಜನೆಯಲ್ಲಿ ಕಟ್ಟುವ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಯಾವುದೇ ಅವಧಿಯಲ್ಲಿ ಪಾವತಿ ಮಾಡಬಹುದು. ಕನಿಷ್ಠ ಪಾವತಿ 10 ಸಾವಿರ ಆಗಿದ್ದು, ಗರಿಷ್ಠ ಪಾವತಿ 10 ಲಕ್ಷ ಆಗಿರುತ್ತದೆ. ಈ ಯೋಜನೆಗೆ 80 ವರ್ಷ ಮೇಲ್ಪಟ್ಟವರು ತೆಗೆದುಕೊಂಡರೆ, ಅವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಈ ಪ್ರೀಮಿಯಂ ಪಾವತಿ ಮಾಡುವುದಕ್ಕೆ 30 ದಿನಗಳ ಗ್ರೇಸ್ ಪೀರ್ಯೆಡ್ ಕೊಡಲಾಗುತ್ತದೆ. ಅಕಸ್ಮಾತ್ ಪಾಲಿಸಿ ಸಮಯ ಡೀಫಾಲ್ಟ್ ಆಗಿದ್ದರೆ, ಉಳಿದಿರುವ ಪ್ರೀಮಿಯಂ ಪಾವತಿ ಮಾಡಿ, ಪಾಲಿಸಿಯನ್ನು ಅಪ್ಡೇಟ್ ಮಾಡಿಸಿಕೊಳ್ಳಬಹುದು..
ಇದಷ್ಟೇ ಅಲ್ಲದೇ, ಈ ಒಂದು ಯೋಜನೆಯ ಅಡಿಯಲ್ಲಿ ನಿಮಗೆ ಸಾಲ ಕೂಡ ಸಿಗುತ್ತದೆ. ಮೂರು ವರ್ಷಗಳ ಕಾಲ ನೀವು ಪ್ರೀಮಿಯಂ ಪಾವತಿ ಮಾಡಿ, ಪಾಲಿಸಿಯನ್ನು ಸರೆಂಡರ್ ಮಾಡಿಬಿಡುವ ಆಯ್ಕೆ ಸಹ ಇರುತ್ತದೆ. ಒಂದು ವೇಳೆ ಈ ರೀತಿ ಆದರೆ, ಆಗ ಅದು ಗ್ರಾಮೀಣ ಸುರಕ್ಷತಾ ಯೋಜನೆಯ ಅಡಿಯಲ್ಲಿ ಬರುವುದಿಲ್ಲ. ಈ ಯೋಜನೆ ಹೇಗೆ ವರ್ಕ್ ಆಗುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುವುದಾದರೆ, 19 ವರ್ಷದ ವ್ಯಕ್ತಿ ಗ್ರಾಮೀಣ ಸುರಕ್ಷತಾ ಯೋಜನೆಯಲ್ಲಿ 10 ಲಕ್ಷ ಹೂಡಿಕೆ ಮಾಡುತ್ತಾರೆ ಎಂದರೆ..
ವಿದ್ಯಾರ್ಥಿಗಳಿಗೆ ಹೊಸ ಸ್ಕಾಲರ್ಶಿಪ್ ಯೋಜನೆ ತಂದ ಕೇಂದ್ರ ಸರ್ಕಾರ! ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಅವರಿಗೆ 55 ವರ್ಷಕ್ಕೆ 1515 ತಿಂಗಳ ಪ್ರೀಮಿಯಂ ಬೀಳುತ್ತದೆ, 58 ವರ್ಷಗಳ ಅವಧಿಗೆ ₹1463 ಪ್ರೀಮಿಯಂ ಬೀಳುತ್ತದೆ, ಹಾಗೆಯೇ 60 ವರ್ಷಕ್ಕೆ ₹1411 ಪ್ರೀಮಿಯಂ ಬೀಳುತ್ತದೆ. 55 ವರ್ಷಗಳ ಪಾಲಿಸಿ ಪಡೆದರೆ 31.60 ಲಕ್ಷ ಲಾಭ ನಿಮ್ಮದಾಗುತ್ತದೆ. 58 ವರ್ಷಗಳ ಪಾಲಿಸಿ ಪಡೆದರೆ 33.40 ಲಕ್ಷ ಲಾಭ ನಿಮ್ಮದಾಗುತ್ತದೆ. 60 ವರ್ಷಗಳ ವಿಮೆ ಪಡೆದರೆ 34.60 ಲಕ್ಷ ಲಾಭ ನಿಮ್ಮದಾಗುತ್ತದೆ. ಈ ರೀತಿಯಾಗಿ ಗ್ರಾಮೀಣ ಸುರಕ್ಷಿತಾ ಯೋಜನೆಯ ಮೂಲಕ ಲಾಭ ಪಡೆಯಬಹುದು.
If you invest 1500 every month in this scheme of Post Office, you will get 31 lakh returns