ವಿದ್ಯಾರ್ಥಿಗಳಿಗೆ ಹೊಸ ಸ್ಕಾಲರ್ಶಿಪ್ ಯೋಜನೆ ತಂದ ಕೇಂದ್ರ ಸರ್ಕಾರ! ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

Education scholarship : ಈ ಹೊಸ ಸ್ಕಾಲರ್ಶಿಪ್ ನ ಹೆಸರು ಪಿಎಮ್ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ ಆಗಿದೆ. ಈ ಯೋಜನೆಗೆ ಯಾವೆಲ್ಲಾ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದು? ಇದರ ಸೌಲಭ್ಯ ಪಡೆಯುವುದು ಹೇಗೆ? ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ

Bengaluru, Karnataka, India
Edited By: Satish Raj Goravigere

Education scholarship : ಕೇಂದ್ರ ಸರ್ಕಾರವು ಆರ್ಥಿಕವಾಗಿ ಕಷ್ಟದಲ್ಲಿ ಇರುವ ವಿದ್ಯಾರ್ಥಿಗಳು ಅವರ ಕನಸುಗಳನ್ನು ನನಸು ಮಾಡಿಕೊಳ್ಳಲಿ ಎನ್ನುವ ಸಲುವಾಗಿ ಇದೀಗ ಹೊಸ ಸ್ಕಾಲರ್ಶಿಪ್ ಒಂದನ್ನು ಜಾರಿಗೆ ತಂದಿದ್ದು, ಅದರ ಮೂಲಕ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಲಿದೆ. ಈ ಹೊಸ ಸ್ಕಾಲರ್ಶಿಪ್ ನ ಹೆಸರು ಪಿಎಮ್ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ ಆಗಿದೆ. ಈ ಯೋಜನೆಗೆ ಯಾವೆಲ್ಲಾ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದು? ಇದರ ಸೌಲಭ್ಯ ಪಡೆಯುವುದು ಹೇಗೆ? ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ..

ಪಿಎಮ್ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ:

ಈ ಒಂದು ಯೋಜನೆಯನ್ನ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಕ್ಕಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ 12ನೇ ತರಗತಿಯಲ್ಲಿ ಒಳ್ಳೆಯ ಅಂಕ ತೆಗೆದುಕೊಂಡು ಪಾಸ್ ಆಗಿರುವ ವಿದ್ಯಾರ್ಥಿಗಳು ಬೋರ್ಡ್ ಎಕ್ಸಾಂ ನಲ್ಲಿ ಪಡೆದಿರುವ ಮಾರ್ಕ್ಸ್ ನ ಅನುಸಾರ ಪದವಿ ಹಾಗೂ ಮಾಸ್ಟರ್ಸ್ ಮಾಡುವುದಕ್ಕಾಗಿ ಈ ಸ್ಕಾಲರ್ಶಿಪ್ ಮೂಲಕ ಸಹಾಯ ಸಿಗುತ್ತದೆ.

The central government brought a new scholarship scheme for students

ಅಕಸ್ಮಾತ್ ನಿಮ್ಮ ಕಾರಿಗೆ ಹಸು-ಎಮ್ಮೆ ಗುದ್ದಿದ್ರೆ ಇನ್ಶೂರೆನ್ಸ್ ಕ್ಲೈಮ್ ಆಗುತ್ತಾ? ದುಡ್ಡು ಬರುತ್ತಾ? ಇಲ್ಲಿದೆ ಮಾಹಿತಿ

ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ:

*ವರ್ಷಕ್ಕೆ 82 ಸಾವಿರ ವರೆಗು ಸ್ಕಾಲರ್ಶಿಪ್ ಸಿಗುತ್ತದೆ.
*ಒಂದು ರಾಜ್ಯದ ಜನಸಂಖ್ಯೆ ಎಷ್ಟಿದೆ ಎನ್ನುವುದರ ಮೇಲೆ 18 ರಿಂದ 25 ವರ್ಷಗಳ ಒಳಗಿನ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಸೌಲಭ್ಯವನ್ನು ನೀಡಲಾಗುತ್ತದೆ.
*ಈ ಸ್ಕಾಲರ್ಶಿಪ್ ನಲ್ಲಿ 50% ಸ್ಕಾಲರ್ಶಿಪ್ ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಾಗಿ ಇಡಲಾಗಿದೆ. ಈ ಮೂಲಕ ಎಲ್ಲರಿಗೂ ಸಮಾನವಾಗಿ ಸ್ಕಾಲರ್ಶಿಪ್ ಸಿಗುತ್ತದೆ.

ಅರ್ಹತೆಗಳು:

*ಅರ್ಜಿ ಸಲ್ಲಿಸುವ ವಿದ್ಯಾರ್ಥಿ 12ನೇ ತರಗತಿಯಲ್ಲಿ 50% ಗಿಂತ ಹೆಚ್ಚು ಮಾರ್ಕ್ಸ್ ಪಡೆದಿರಬೇಕು, ಅಂಥವರಿಗೆ ಅರ್ಹತೆ ಸಿಗುತ್ತದೆ.
*ಸರ್ಕಾರದ ಮಾನ್ಯತೆ ಹೊಂದಿರುವ ಕಾಲೇಜು ಅಥವಾ ಸಂಸ್ಥೆಗಳಲ್ಲಿ ಪದವಿ ಓದುತ್ತಿರುವವರಿಗೆ ಈ ಒಂದು ಸೌಲಭ್ಯ ಸಿಗುತ್ತದೆ.
*ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷಕ್ಕಿಂತ ಕಡಿಮೆ ಇರಬೇಕು.
*ವಿದ್ಯಾರ್ಥಿಗಳು ಪ್ರಸ್ತುತ ಬೇರೆ ಯಾವುದೇ ಸ್ಕಾಲರ್ಶಿಪ್ ಪಡೆಯುತ್ತಿರಬಾರದು.

ನೀವು ಬ್ಯಾಂಕಿನಲ್ಲಿ ಇಟ್ಟ ನಿಮ್ಮ ಫಿಕ್ಸೆಡ್ ಹಣಕ್ಕೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಸಿಗುತ್ತೆ ನೋಡಿ!

ಸಿಗುವ ಸ್ಕಾಲರ್ಶಿಪ್ ಎಷ್ಟು?

*ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ರೂಪಾಯಿಗಳ ಸ್ಕಾಲರ್ಶಿಪ್ ಸಿಗುತ್ತದೆ.
*ಮಾಸ್ಟರ್ಸ್, 4 ವರ್ಷಗಳ ಇಂಜಿನಿಯರಿಂಗ್, ಮೆಡಿಸನ್ ಓದುತ್ತಿರುವವರಿಗೆ ವರ್ಷಕ್ಕೆ 20 ವರ್ಷದವರೆಗು ಸ್ಕಾಲರ್ಶಿಪ್ ಸಿಗುತ್ತದೆ.

ನಿಯಮಗಳು:

*ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ವಿದ್ಯಾರ್ಥಿ ಎಕ್ಸಾಂ ಗಳಲ್ಲಿ 50% ಗಿಂತ ಹೆಚ್ಚು ಮಾರ್ಕ್ಸ್ ಪಡೆದಿರಬೇಕು, ಹಾಗೆಯೇ ಅಟೆಂಡೆನ್ಸ್ 75% ಇರಬೇಕು.
*ವಿದ್ಯಾರ್ಥಿಯು ಯಾವುದೇ ಥರದ ಕ್ರಿಮಿನಲ್ ಕೆಲಸಗಳಲ್ಲಿ ತೊಡಗಿಸಿಕೊಂಡಿರಬಾರದು. ಈ ರೀತಿ ಆದರೆ ಸ್ಕಾಲರ್ಶಿಪ್ ಜ್ಯಾನ್ಸಲ್ ಆಗುತ್ತದೆ.

ಎಲ್ಲಾ ಲೋನ್ EMI ಸರಿಯಾಗಿ ಕಟ್ಟಿದ್ರೂ ಕ್ರೆಡಿಟ್‌ ಸ್ಕೋರ್ ಕಡಿಮೆಯಾಗಿದ್ಯಾ? ಇಲ್ಲಿದೆ ಅದಕ್ಕೆ ಕಾರಣ

ನೇರವಾಗಿ ಸಿಗಲಿದೆ ಸ್ಕಾಲರ್ಶಿಪ್:

ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮೊತ್ತವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ. ಇದು ಸರಳವಾದ ಮಾರ್ಗ ಜೊತೆಗೆ ಓಪನ್ ಆಗಿಯೂ ಇರುತ್ತದೆ, ಯಾವುದೇ ಮುಚ್ಚು ಮರೆ ಇರುವುದಿಲ್ಲ.

The central government brought a new scholarship scheme for students