ಎಲ್ಲಾ ಲೋನ್ EMI ಸರಿಯಾಗಿ ಕಟ್ಟಿದ್ರೂ ಕ್ರೆಡಿಟ್‌ ಸ್ಕೋರ್ ಕಡಿಮೆಯಾಗಿದ್ಯಾ? ಇಲ್ಲಿದೆ ಅದಕ್ಕೆ ಕಾರಣ

ನಾವು Loan ಪಡೆಯುವುಡಕ್ಕೆ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿರುವುದು ಬಹಳ ಮುಖ್ಯ. ಸಾಲ ಪಡೆದಾಗ ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡದೇ ಹೋದರೆ, ಆಗ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿಬಿಡುತ್ತದೆ.

ಈಗ ನಮ್ಮ ಬ್ಯಾಂಕ್ ವ್ಯವಹಾರಗಳೆಲ್ಲವು ಸರಿಯಾಗಿ ನಡೆಯಬೇಕು ಎಂದರೆ, ಯಾವುದೇ ಸಮಸ್ಯೆ ಉಂಟಾಗಬಾರದು ಎಂದರೆ, ನಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (CIBIL Score) ಅನ್ನು ನಾವು ಸರಿಯಾಗಿ ಕಾಪಾಡಿಕೊಂಡು ಬರಬೇಕು.

ಅದರಲ್ಲೂ ನಾವು Loan ಪಡೆಯುವುಡಕ್ಕೆ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿರುವುದು ಬಹಳ ಮುಖ್ಯ. ಸಾಲ ಪಡೆದಾಗ ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡದೇ ಹೋದರೆ, ಆಗ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿಬಿಡುತ್ತದೆ. ಹಾಗಾಗಿ ಕ್ರೆಡಿಟ್ ಸ್ಕೋರ್ ಉಳಿಸಿಕೊಳ್ಳುವುದಕ್ಕೆ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡುವುದು ಮುಖ್ಯ.

ಆದರೆ ಕೆಲವೊಮ್ಮೆ ನೀವು ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡಿದರೂ ಕೂಡ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಈ ಥರದ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಇತ್ತೀಚಿಗೆ ಒಬ್ಬ ವ್ಯಕ್ತಿ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡಿದ್ದರೂ, 50 ಪಾಯಿಂಟ್ಸ್ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿದೆ.

Credit score is low even if all loan EMIs are paid correctly

ಬ್ಯಾಂಕಿನಲ್ಲಿ ಲೋನ್ ಪಡೆದು EMI ಕಟ್ಟುತ್ತಿರುವವರಿಗೆ ಬಿಗ್ ಅಪ್ಡೇಟ್, ಇನ್ಮುಂದೆ ಹೊಸ ರೂಲ್ಸ್!

ಕ್ರೆಡಿಟ್ ಲಿಮಿಟ್ ಗಿಂತಲು 30% ಕಡಿಮೆ ಹಣವನ್ನೇ ಅವರು ಖರ್ಚು ಮಾಡಿದ್ದಾರೆ, ಹಾಗಿದ್ದರೂ ಈ ರೀತಿ ಯಾಕಾಗಿದೆ ಎಂದು ಚೆಕ್ ಮಾಡಿದರೆ, ಆ ವ್ಯಕ್ತಿ ಕೇವಲ ತಿಂಗಳ ಮಿನಿಮಮ್ ಬ್ಯಾಲೆನ್ಸ್ ಅನ್ನು ಮಾತ್ರ ಪಾವತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಮಿನಿಮಮ್ ಮೊತ್ತ ಎಷ್ಟಿತ್ತು ಎಂದು ನೋಡುವುದಾದರೆ, ಕ್ರೆಡಿಟ್ ಲಿಮಿಟ್ ಗಿಂತ 60% ಜಾಸ್ತಿ ಇತ್ತು, ಇದು ಹೆಚ್ಚಿನ ಡಿಫರೆನ್ಸ್ ಆಗಿರುವ ಕಾರಣ, ಆತನ ಕ್ರೆಡಿಟ್ ಸ್ಕೋರ್ ನಲ್ಲಿ ಇಳಿಕೆ ಕಂಡುಬಂದಿತ್ತು. ಆದರೆ ಆ ವ್ಯಕ್ತಿ ಪೂರ್ತಿ ಹಣವನ್ನು ಪಾವತಿ ಮಾಡಿದ ಬಳಿಕ 3 ತಿಂಗಳ ಅವಧಿಯಲ್ಲಿ ಕ್ರೆಡಿಟ್ ಸ್ಕೋರ್ ಮತ್ತೆ ಒಳ್ಳೆಯ ಹಂತಕ್ಕೆ ತಲುಪಿದೆ.

ಇನ್ನೊಬ್ಬ ಮಹಿಳೆಯ ವಿಷಯದಲ್ಲಿ ಕೂಡ ಇದೇ ಥರ ಆಗಿದೆ. ಆಕೆ ಲೋನ್ ಪಡೆದಿದ್ದು, ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡುತ್ತಿದ್ದರೂ ಸಹ ಆಕೆಯ ಕ್ರೆಡಿಟ್ ಸ್ಕೋರ್ 40 ಪಾಯಿಂಟ್ಸ್ ಕಡಿಮೆ ಆಗಿದೆ.

ಈ ರೀತಿ ಆಗಿರುವುದು ಯಾಕೆ ಎಂದು ಪರೀಕ್ಷಿಸಿ ನೋಡಿದಾಗ, ಇದಕ್ಕಿಂತ ಮೊದಲೇ ಒಂದು ಸಾಲವನ್ನು ಪಡೆದದ್ದ ಆಕೆ, ಮತ್ತೆ ಹೋಮ್ ಲೋನ್ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದ್ದು, ಈ ಕಾರಣಕ್ಕೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ.

ಬ್ಯಾಂಕ್ ಅಕೌಂಟ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ವಾ? ಯಾವ ಬ್ಯಾಂಕ್‌ ಎಷ್ಟು ದಂಡ ವಿಧಿಸುತ್ತೆ ಗೊತ್ತಾ?

ಎರಡು ಸಾರಿ ಸಾಲ ಪಡೆದಿರುವುದರಿಂದ ಆಕೆಯ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿದೆ. ಒಮ್ಮೆಗೆ ಸಾಲ ತೀರಿಸಿದರೇ, ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ. ಹಾಗೆಯೇ ಇಎಂಐ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಸರಿ ಹೋಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ನಮ್ಮ ದೇಶದಲ್ಲಿ 4 ಕ್ರೆಡಿಟ್ ಸ್ಕೋರ್ ಕಂಪನಿಗಳು RBI ಇಂದ ಲೈಸೆನ್ಸ್ ಪಡೆದುಕೊಂಡಿದೆ. ಆ ಕಂಪನಿಗಳು ಯಾವುವು ಎಂದು ನೋಡುವುದಾದರೆ, Credit Information Bureau (India) Limited (CIBIL), Experian, Equifax and Highmark. ಈ ನಾಲ್ಕು ಕಂಪನಿಗಳ ಪೈಕಿ ಸಿಬಿಲ್ ಹೆಚ್ಚು ಜನಪ್ರಿಯತೆ ಹೊಂದಿರುವ ಕಂಪನಿ, ಈ ಕಂಪನಿ ಒಳ್ಳೆಯ ರೇಟಿಂಗ್ ಕೊಡುತ್ತದೆ, ಹಾಗೆಯೇ ಈ ಸ್ಕೋರ್ 300 ಇಂದ 900 ವರೆಗು ಇರುತ್ತದೆ. 750 ಅಥವಾ ಅದಕ್ಕಿಂತ ಹೆಚ್ಚಿನ ಪಾಯಿಂಟ್ಸ್ ಅನ್ನು ಒಳ್ಳೆಯ ಸ್ಕೋರ್ ಎಂದು ಹೇಳಲಾಗುತ್ತದೆ.

Credit score is low even if all loan EMIs are paid correctly

Related Stories