ಸಾಮಾನ್ಯವಾಗಿ ಎಲ್ಲರ ಬಳಿ ಬ್ಯಾಂಕ್ ಅಕೌಂಟ್ (Bank Account) ಇದ್ದೇ ಇರುತ್ತದೆ. ಬ್ಯಾಂಕ್ ಅಕೌಂಟ್ ಹೊಂದುವುದು ಈಗ ಅವಶ್ಯಕತೆ ಕೂಡ ಆಗಿದೆ, ಯಾಕೆಂದರೆ ಭಾರತ ದೇಶ ಈಗ ಡಿಜಿಟಲ್ ಇಂಡಿಯಾ ಆಗಿದ್ದು, ಬಹುತೇಕ ಎಲ್ಲರೂ ಕೂಡ ಡಿಜಿಟಲ್ ಪೇಮೆಂಟ್ (Digital Payment) ಇಂದಲೇ ಹಣಕಾಸಿನ ವಹಿವಾಟು ನಡೆಸುತ್ತಾರೆ. ಹಾಗೆಯೇ ಬ್ಯಾಂಕ್ ಅಕೌಂಟ್ ಹೊಂದಿರುವಾಗ ಮಿನಿಮಮ್ ಬ್ಯಾಲೆನ್ಸ್ ಹೊಂದಿರುವುದು ಮುಖ್ಯ ಆಗಿರುತ್ತದೆ. ಅಕಸ್ಮಾತ್ ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸಲು ಸಾಧ್ಯ ಆಗಿಲ್ಲ ಎಂದರೆ ಕೆಲವು ಬ್ಯಾಂಕ್ ಗಳು ದಂಡ ವಿಧಿಸುತ್ತದೆ. ಯಾವ ಬ್ಯಾಂಕ್ ನಲ್ಲಿ ಎಷ್ಟು ದಂಡ ವಿಧಿಸಲಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಯೆಸ್ ಬ್ಯಾಂಕ್: ಈ ಬ್ಯಾಂಕ್ ನ ಕೆಲವು ರೂಲ್ಸ್ ಫಾಲೋ ಮಾಡಿದರೆ, ಗ್ರಾಹಕರಿಗೆ ದಂಡ ಕೂಡ ವಿಧಿಸುವುದಿಲ್ಲ. ಅಕೌಂಟ್ ನಲ್ಲಿ ಇರಬೇಕಾದ ಬ್ಯಾಲೆನ್ಸ್ ಗಿಂತ 50% ಹೆಚ್ಚಾಗಿದ್ದರೆ 5% ದಂಡ ವಿಧಿಸಲಾಗುತ್ತದೆ. ಆದರೆ ಬ್ಯಾಲೆನ್ಸ್ 50% ಗಿಂತ ಕಡಿಮೆ ಇದ್ದರೆ, ಅಕೌಂಟ್ ನಲ್ಲಿ ಎಷ್ಟು ಮೊತ್ತ ಇದೆಯೋ ಆ ಹಣದ ಮೇಲೆ 10% ದಂಡ ಹಾಕುತ್ತಾರೆ ಅಥವಾ 5% ದಂಡ ಪಾವತಿ ಮಾಡಬೇಕಾಗುತ್ತದೆ.
ICICI Bank: ಈ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೆ, ನಿಮ್ಮ ಅಕೌಂಟ್ ನ ಮಿನಿಮಮ್ ಬ್ಯಾಲೆನ್ಸ್ ₹5000 ಇರಲೇಬೇಕು. ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎಂದರೆ, 5% ದಂಡ ವಿಧಿಸಲಾಗುತ್ತದೆ ಜೊತೆಗೆ 100 ರೂಪಾಯಿ ದಂಡ ಕೂಡ ವಿಧಿಸಲಾಗುತ್ತದೆ.
ನಿಮ್ಮತ್ರ 10 ಸಾವಿರ ಇದ್ದದ್ದೇ ಆದ್ರೆ ಈ ಬ್ಯುಸಿನೆಸ್ ಆರಂಭಿಸಿ, ತಿಂಗಳಿಗೆ 50 ಸಾವಿರ ಲಾಭ ಫಿಕ್ಸ್
ಪಂಜಾಬ್ ನ್ಯಾಷನಲ್ ಬ್ಯಾಂಕ್ : ಈ ಬ್ಯಾಂಕ್ ಅಕೌಂಟ್ ಹೊಂದಿರುವವರು ಹಳ್ಳಿಯವರಾದರೆ ಅವರಿಗೆ ₹400 ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು, ನಗರಗಳಲ್ಲಿ ವಾಸ ಮಾಡುವವರು ₹500 ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು, ಮೆಟ್ರೋ ನಗರ ಪ್ರದೇಶಗಳಲ್ಲಿ ವಾಸ ಮಾಡುವವರು ₹600 ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು. ಇಲ್ಲದೇ ಹೋದರೆ ನಿಮಗೆ ದಂಡ ವಿಧಿಸಲಾಗುತ್ತದೆ. ದಂಡ ಎಷ್ಟಿದೆ ಎನ್ನುವುದು ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದನ್ನು ಅವಲಂಬಿಸಿರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಇದು ಸರ್ಕಾರದ ಬ್ಯಾಂಕ್ ಆಗಿದ್ದು, SBI ಅಕೌಂಟ್ ಇರುವವರು ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೇ ಹೋದರೆ, ನಿಮಗೆ ದಂಡ ಹಾಕುವುದಿಲ್ಲ. ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸಲು ಸಾಧ್ಯ ಆಗದೆ ಇರುವವರು SBI ಅಕೌಂಟ್ ಶುರು ಮಾಡಬಹುದು.
HDFC ಬ್ಯಾಂಕ್: ನಗರಗಳಲ್ಲಿ ವಾಸವಿರುವವರು ₹10 ಸಾವಿರ ಮಿನಿಮಮ್ ಬ್ಯಾಲೆನ್ಸ್ ಹಾಗೂ 1 ಲಕ್ಷದ ಫಿಕ್ಸೆಡ್ ಡೆಪಾಸಿಟ್ ಇಡಬೇಕು, ಹಳ್ಳಿಗಳಲ್ಲಿ ವಾಸ ಮಾಡುವವರು ₹5 ಸಾವಿರ ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ₹50 ಸಾವಿರ ಫಿಕ್ಸೆಡ್ ಡೆಪಾಸಿಟ್ ಇಡಬೇಕು. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸಿಲ್ಲ ಎಂದರೆ, 6% ಅಂದರೆ 600 ರೂಪಾಯಿ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.
ವಿವಾಹಿತ ಮಹಿಳೆಯರಿಗೆ ಸಿಗುತ್ತೆ 11000 ಸಾವಿರ ರೂಪಾಯಿ, ಈ ಹಣಕ್ಕಾಗಿ ಹೀಗೆ ಅಪ್ಲೈ ಮಾಡಿ
ಇದಿಷ್ಟು ಪ್ರಮುಖ ಬ್ಯಾಂಕ್ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ (Minimum Balance) ನಿರ್ವಹಿಸದೇ ಇದ್ದರೆ, ಅದರಿಂದ ವಿಧಿಸುವಂಥ ದಂಡ ಆಗಿದ್ದು, ಈ ಮಾಹಿತಿ ನಿಮಗೆ ತಿಳಿದಿದ್ದರೆ ಒಳ್ಳೆಯದು. ಈವರೆಗೂ ನಮ್ಮ ದೇಶದ ಬ್ಯಾಂಕ್ ಗಳು, ಮಿನಿಮಮ್ ಬ್ಯಾಲೆನ್ಸ್ ಹೊಂದಿರದೇ ಇರುವವರಿಂದ ₹8,495 ಕೋಟಿ ರೂಪಾಯಿ ದಂಡವನ್ನು ಪಡೆದಿದೆ.
Do you know how much penalty will be charged by the bank if there is no minimum balance
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.