ನಿಮ್ಮತ್ರ 10 ಸಾವಿರ ಇದ್ದದ್ದೇ ಆದ್ರೆ ಈ ಬ್ಯುಸಿನೆಸ್ ಆರಂಭಿಸಿ, ತಿಂಗಳಿಗೆ 50 ಸಾವಿರ ಲಾಭ ಫಿಕ್ಸ್
10 ಸಾವಿರ ಹೂಡಿಕೆಯಲ್ಲಿ ಈ ಬ್ಯುಸಿನೆಸ್ ಶುರು ಮಾಡಿ, ತಿಂಗಳಿಗೆ 50 ಸಾವಿರ ಗಳಿಸಿ! ಅತ್ಯಂತ ಲಾಭದಾಯಕ ಬ್ಯುಸಿನೆಸ್
ಹಲವರಿಗೆ ಬ್ಯುಸಿನೆಸ್ ಮಾಡಬೇಕೆಂಬ ಮನಸ್ಸಿದ್ದು ಯಾವ ಬ್ಯುಸಿನೆಸ್ ಮಾಡಬೇಕು ಎಂದು ಐಡಿಯಾ ಇಲ್ಲದೇ ಸುಮ್ಮನಿರುತ್ತಾರೆ..ಅಂಥವರಿಗಾಗಿ ಇಂದು ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ ತಿಳಿಸಲಿದ್ದೇವೆ, ಇದು ಮಾಲಿನ್ಯ ಪರೀಕ್ಷಾ ಕೇಂದ್ರ ಸ್ಥಾಪಿಸುವ ಬ್ಯುಸಿನೆಸ್ ಆಗಿದೆ. ಪ್ರಸ್ತುತ ಈ ಒಂದು ಕೆಲಸ ಮಾಡಿಸುವುದಕ್ಕೆ ಭಾರಿ ಬೇಡಿಕೆ ಇದೆ ಎನ್ನುವುದು ನಿಮಗೆ ಗೊತ್ತಿರಲಿ..
ಸರ್ಕಾರದ ಹೊಸ ನಿಯಮದ ಅನುಸಾರ, ನೀವು ಯಾವುದೇ ವಾಹನ ಖರೀದಿ ಮಾಡಿದ್ದರೂ, ನಿಮ್ಮ ಬಳಿ ಯಾವುದೇ ವಾಹನ ಇದ್ದರೂ ಕೂಡ ಅವುಗಳನ್ನು ನಿರ್ವಹಿಸಲು ಡ್ರೈವಿಂಗ್ ಲೈಸೆನ್ಸ್ ಇರುವುದು ಎಷ್ಟು ಮುಖ್ಯವೋ, ಅದೇ ರೀತಿ ಮಾಲಿನ್ಯ ಪ್ರಮಾಣಪತ್ರ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಮಾಲಿನ್ಯ ಪರೀಕ್ಷಾ ಕೇಂದ್ರವನ್ನು ನೀವು ಶುರು ಮಾಡಬಹುದು. ಈ ಒಂದು ಕೇಂದ್ರ ಶುರು ಮಾಡುವುದಕ್ಕೆ, ನಿಮಗೆ 10 ಸಾವಿರದ ವರೆಗು ಬಂಡವಾಳ ಬೇಕಾಗುತ್ತದೆ.
ಟೆಸ್ಟಿಂಗ್ ಗೆ ಬೇಕಾದ ಉಪಕರಣಗಳನ್ನು ಖರೀದಿಸಲು ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ₹10 ಸಾವಿರ ಖರ್ಚಾಗುತ್ತದೆ. ಹಾಗೆಯೇ ಮಾಲಿನ್ಯ ಪರೀಕ್ಷಾ ಕೇಂದ್ರ ಶುರು ಮಾಡುವುದಕ್ಕೆ ನೀವು ವರ್ಕ್ ಶಾಪ್ ಗಳನ್ನು ಅಟೆಂಡ್ ಮಾಡಬೇಕು, ಉಪಕರಣಗಳನ್ನು ಬಳಸುವ ಜ್ಞಾನ ನಿಮಗಿದೆ ಎನ್ನುವ ಪ್ರಮಾಣಪತ್ರ ನೀಡಿ, ಲೈಸೆನ್ಸ್ ಪಡೆಯಬೇಕು. ಆಟೋಮೊಬೈಲ್ ಸಂಸ್ಥಾಗಳು, ಕೈಗಾರಿಕಾ ಸಂಸ್ಥೆಗಳು, ಸರ್ಕಾರದ ಏಜೆನ್ಸಿಗಳು ಇದೆಲ್ಲವೂ ಕೋರ್ಸ್ ನಡೆಸುತ್ತವೆ.
ವಿವಾಹಿತ ಮಹಿಳೆಯರಿಗೆ ಸಿಗುತ್ತೆ 11000 ಸಾವಿರ ರೂಪಾಯಿ, ಈ ಹಣಕ್ಕಾಗಿ ಹೀಗೆ ಅಪ್ಲೈ ಮಾಡಿ
ಅವುಗಳಲ್ಲಿ ಪಾಲ್ಗೊಂಡು, ಎಕ್ಸಾಂ ಕ್ಲಿಯರ್ ಮಾಡಿ, ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಅಥವಾ ಖಾಸಗಿ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು. ಇದರಿಂದ ಲೈಸೆನ್ಸ್ ಪಡೆದು, ನಿಮ್ಮದೇ ಸ್ವಂತ ಮಾಲಿನ್ಯ ಪರೀಕ್ಷೆ ಕೇಂದ್ರ ಶುರು ಮಾಡಬಹುದು.
ಈಗ ಎಲ್ಲಾ ವಾಹನಗಳಿಗೂ ಮಾಲಿನ್ಯ ಸರ್ಟಿಫಿಕೇಟ್ ಹೊಂದಿರುವುದು ಕಡ್ಡಾಯ ಆಗಿದೆ. ಹಾಗೆಯೇ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ ಆಗಿದ್ದು, ಈ ಬ್ಯುಸಿನೆಸ್ ಇಂದ ಒಳ್ಳೆಯ ಲಾಭ ಪಡೆಯಬಹುದು.
ಮಾಲಿನ್ಯ ಪರೀಕ್ಷಾ ಕೇಂದ್ರವನ್ನು ಹೆಚ್ಚಿನ ವಾಹನಗಳು ಓಡಾಡುವಂಥ ಕಡೆಗಳಲ್ಲಿ ಶುರು ಮಾಡಿದರೆ, ಆಗ ಹೆಚ್ಚು ಜನರು ನಿಮ್ಮ ಟೆಸ್ಟಿಂಗ್ ಸೆಂಟರ್ ಗೆ ಬಂದು ಮಾಲಿನ್ಯ ಪರೀಕ್ಷೆ ಮಾಡಿಸುತ್ತಾರೆ. ಹೆಚ್ಚು ವಾಹನಗಳು ಬಂದಷ್ಟು ಸಂಪಾದನೆ ಜಾಸ್ತಿ ಆಗುತ್ತದೆ.
ದಿನಕ್ಕೆ 1000 ಇಂದ 1500 ರೂಪಾಯಿಯವರೆಗು ಲಾಭ ಗಳಿಸಬಹುದು. ತಿಂಗಳಿಗೆ 30 ರಿಂದ 50 ಸಾವಿರವರೆಗು ಸಂಪಾದನೆ ಮಾಡಬಹುದು. ಈ ರೀತಿಯಾಗಿ ಹೆಚ್ಚಿನ ಲಾಭ ಬರುವಂಥ ಬ್ಯುಸಿನೆಸ್ ಟ್ರೈ ಮಾಡಿ.
ಒಂದೇ ದಿನದಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತ? ಇಂದು ಬೆಳಗ್ಗೆ 6 ಗಂಟೆಗೆ ಬೆಲೆಗಳಲ್ಲಿ ಭಾರೀ ಬದಲಾವಣೆ
If you have 10 thousand then start this business, 50 thousand profit per month