ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ ಪಿಎಮ್ ಮಾತೃ ವಂದನಾ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಗರ್ಭಿಣಿ ಮಹಿಳೆಯರಿಗೆ ₹11,000 ರೂಪಾಯಿಗಳ ವರೆಗು ಆರ್ಥಿಕ ನೆರವು ನೀಡಲಾಗುತ್ತಿದೆ. ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಈ ಯೋಜನೆಯ ಮೂಲಕ ಮಗುವಿನ ಪೋಷಣೆ ಹಾಗೂ ತಮ್ಮ ಆರೋಗ್ಯ ನೋಡಿಕೊಳ್ಳುವುದಕ್ಕೆ ಸರ್ಕಾರದಿಂದ ಸಹಾಯ ಪಡೆಯಬಹುದು..
ಪಿಎಮ್ ಮಾತೃ ವಂದನಾ ಯೋಜನೆಯನ್ನು 2017ರ ಜನವರಿ 1 ರಂದು ಜಾರಿಗೆ ತರಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶ, ಕಷ್ಟದಲ್ಲಿದ್ದು, ಕಾರ್ಮಿಕ ವರ್ಗದಲ್ಲಿರುವ ಮಹಿಳೆಯರು ಗರ್ಭಿಣಿ ಆದಾಗ ಅವರಿಗೆ ಕೆಲಸ ಮಾಡಿ, ಸಂಬಳ ಪಡೆಯಲು ಸಾಧ್ಯವಿಲ್ಲ.
ಅಂಥ ಸಮಯದಲ್ಲಿ ಅವರಿಗೆ ಅನುಕೂಲ ಆಗಲಿ, ಅವರ ಆರೋಗ್ಯಕ್ಕೆ ಮಗುವಿನ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಆಗದೇ ಇರಲಿ, ಎನ್ನುವ ಉದ್ದೇಶದಿಂದ ಮಗುವಿಗಾಗಿ ಮತ್ತು ತಾಯಿಗಾಗಿ ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ..
ಒಬ್ಬ ಮಹಿಳೆ ಮೊದಲ ಸಾರಿ ಗರ್ಭಿಣಿ ಆದಾಗ, ಗರ್ಭಿಣಿ ಮಹಿಳೆಗೆ ₹5000 ಆರ್ಥಿಕ ಸಹಾಯ ಮಾಡಲಾಗುತ್ತದೆ, ಎರಡನೇ ಸಾರಿ ಗರ್ಭಿಣಿ ಆದಾಗ ₹6000 ಆರ್ಥಿಕ ಸಹಾಯ ನೀಡಲಾಗುತ್ತದೆ. ಎರಡು ಬಾರಿ ಗರ್ಭಿಣಿ ಆದಾಗ ಒಟ್ಟಾರೆಯಾಗಿ ₹11,000 ಆರ್ಥಿಕ ಸಹಾಯ ಸಿಗುತ್ತದೆ.
ನೀವು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆಶಾ ಕಾರ್ಯಕರ್ತೆಯರಿಗೆ ಅಥವಾ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಷಯ ತಿಳಿಸಿದರೆ, ಅವರೇ ನಿಮಗೆ ಮಾತೃತ್ವ ವಂದನಾ ಯೋಜನೆಯ ಸಹಾಯ ಸಿಗುವ ಹಾಗೆ ಮಾಡುತ್ತಾರೆ.
ಇನ್ನು ಮೊದಲ ಬಾರಿ ಮಹಿಳೆ ಗರ್ಭಿಣಿ ಆದಾಗ, ಮಾತೃತ್ವ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿದಾಗ, ತಕ್ಷಣವೇ ₹3000 ಸಿಗುತ್ತದೆ, ಮಗು ಜನಿಸಿದ ನಂತರ ಇನ್ನು ₹2000 ರೂಪಾಯಿ ಗರ್ಭಿಣಿ ಮಹಿಳೆಯ ಬ್ಯಾಂಕ್ ಖಾತೆಗೆ (Bank Account) ಕ್ರೆಡಿಟ್ ಆಗುತ್ತದೆ.
ಹಾಗೆಯೇ 2ನೇ ಮಗುವಿಗೆ ತಾಯಿ ಆದಾಗ, ಒಂದೇ ಸಾರಿಗೆ ₹6000 ರೂಪಾಯಿ ನೀಡಲಾಗುತ್ತದೆ. ಈ ರೀತಿಯಾಗಿ ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ ಒಟ್ಟು ₹11,000 ರೂಪಾಯಿಗಳು ಗರ್ಭಿಣಿ ಮಹಿಳೆಯರಿಗೆ ಸಹಾಯ ನೀಡಲಾಗುತ್ತದೆ.
ಇನ್ನು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಏನು ನೋಡುವುದಾದರೆ, ಗರ್ಭಿಣಿ ಮಹಿಳೆ ಭಾರತದ ಪ್ರಜೆ ಆಗಿರಬೇಕು, ಜೊತೆಗೆ ಆಕೆ 19 ವರ್ಷ ಮೇಲ್ಪಟ್ಟಿರಬೇಕು. ಮಾತೃತ್ವ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ, ಗರ್ಭಿಣಿಯ ಆಧಾರ್ ಕಾರ್ಡ್, ಮಗುವಿನ ಬರ್ತ್ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಇನ್ಕಮ್ ಸರ್ಟಿಫಿಕೇಟ್, ಫೋನ್ ನಂಬರ್, ಪಾಸ್ ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಇದೆಲ್ಲವೂ ಬೇಕಾಗುತ್ತದೆ. ಅಂಗನವಾಡಿ ಕೇಂದ್ರದಲ್ಲಿ ಅಪ್ಲಿಕೇಶನ್ ಫಾರ್ಮ್ ಸಿಗಲಿದ್ದು, ಅದನ್ನು ಫಿಲ್ ಮಾಡಿ ಅರ್ಜಿ ಸಲ್ಲಿಸಬಹುದು.
Married women get 11000 thousand rupees, apply for this money like this
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.