Bank Loan : ನಾವು ಎಷ್ಟೇ ಹುಷಾರಾಗಿ ಬದುಕು ಸಾಗಿಸುತ್ತಾ ಇದ್ದರೂ ಕೂಡ, ಹಲವು ಸಾರಿ ಹಣಕಾಸಿನ ಅವಶ್ಯಕತೆ ಎದುರಾದಾಗ, ಬ್ಯಾಂಕ್ ಲೋನ್ ಮೊರೆ ಹೋಗುತ್ತೇವೆ. ಹಲವು ಕಂಡೀಷನ್ ಗಳ ಮೇಲೆ, ದಾಖಲೆಗಳನ್ನು ಪಡೆದು, ಸಿಬಿಲ್ ಸ್ಕೋರ್ ಚೆಕ್ (CIBIL Score) ಮಾಡಿ, ಎಲ್ಲವೂ ಸರಿ ಇದ್ದರೆ ನಮಗೆ ಬ್ಯಾಂಕ್ ಇಂದ ಲೋನ್ ಸಿಗುತ್ತದೆ. ಈ ಲೋನ್ ಪಡೆದು ನಾವು ನಮ್ಮ ಆರ್ಥಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಹಾಗೆಯೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕು..
ಹೌದು, ಸಾಲ ಪಡೆಯುವುದು ಮಾತ್ರವಲ್ಲ, ಪಡೆದ ಸಾಲವನ್ನು ಮರುಪಾವತಿ ಮಾಡುವುದು ಕೂಡ ಬಹಳ ಮುಖ್ಯ ಆಗುತ್ತದೆ. ಎಷ್ಟು ಮೊತ್ತ ಸಾಲ ಪಡೆಯುತ್ತೀರಿ ಎನ್ನುವುದರ ಮೇಲೆ ನೀವು ಪ್ರತಿ ತಿಂಗಳು ಎಷ್ಟು ಇಎಂಐ ಪಾವತಿ ಮಾಡಬೇಕು ಎನ್ನುವುದು ನಿಗದಿ ಆಗುತ್ತದೆ. ಇಎಂಐ ಮೊತ್ತವನ್ನು ತಿಂಗಳಿಗೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಾ ಹೋಗಬೇಕು. ಅಕಸ್ಮಾತ್ ನೀವು ಸರಿಯಾಗಿ ಇಎಂಐ ಪಾವತಿ ಮಾಡದೇ ಹೋದರೆ, ಅದರಿಂದ ನಿಮಗೆ ತೊಂದರೆ ಎದುರಾಗುತ್ತದೆ.
EMI ಕಟ್ಟಲಿಲ್ಲ ಎಂದರೆ ಈ ಸಮಸ್ಯೆಗಳನ್ನು ಎದುರಿಸಬೇಕು:
ಸಾಲ ಪಡೆದ ಬಳಿಕ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಸಿಬಿಲ್ ಸ್ಕೋರ್ (Credit Score) ಇಂಪ್ರೂವ್ ಆಗುತ್ತದೆ. ಹಾಗೆಯೇ ಸಾಲ ಕೂಡ ತೀರುತ್ತದೆ. ಆದರೆ ಸುರಿಯಾಗಿ ಇಎಂಐ ಕಟ್ಟದೇ ಹೋದರೆ, ನಿಮಗೆ ತೊಂದರೆ ಉಂಟಾಗುತ್ತದೆ. ಆದರೆ ಇದು ಜೈಲಿಗೆ ಹೋಗುವಷ್ಟು ಸಮಸ್ಯೆ ತರುವುದಿಲ್ಲ. ಚೆಕ್ ಬೌನ್ಸ್ ಕೇಸ್ ಗೆ ಮಾತ್ರ, ಜೈಲಿಗೆ ಹೋಗುವ ವರೆಗು ತೊಂದರೆ ಆಗುತ್ತದೆ. ಇಎಂಐ ವಿಷಯಕ್ಕೆ ಅಷ್ಟೆಲ್ಲಾ ಸಮಸ್ಯೆ ಉಂಟಾಗುವುದಿಲ್ಲ, ಆಸ್ತಿ ಕೂಡ ಹರಾಜಾಗುವುದಿಲ್ಲ..
ಸಾಲ ಮಾಡಿ ಸಮಸ್ಯೆ ಆದರೆ ಈ ರೂಲ್ಸ್ ತಿಳಿದಿರಬೇಕು:
*ಸಾಲ ಪಡೆದಿರುವವರಿಗೆ RBI ಹೊಸ ರೂಲ್ಸ್ ತಂದಿದ್ದು, ಒಬ್ಬ ವ್ಯಕ್ತಿ ಇಎಂಐ ಪಾವತಿ ಮಾಡಿಲ್ಲ ಎಂದರೆ, ಬ್ಯಾಂಕ್ ಏಜೆಂಟ್ ಗಳು ಕಾಲ್ ಮಾಡಿ ಹೆಸರಿಸುವ ಹಾಗಿಲ್ಲ, 2 ಅಥವಾ 3 ಇಎಂಐ ಕಟ್ಟಿಲ್ಲ ಎಂದರೆ ಮೊದಲಿಗೆ ಸಾಲ ಪಡೆದವರಿಗೆ ನೋಟಿಸ್ ಕಳಿಸಬೇಕಾಗುತ್ತದೆ.
*ನೋಟಿಸ್ ನೀಡಿದ ಮೇಲು ಇಎಂಐ ಪಾವತಿ ಮಾಡಿಲ್ಲ ಎಂದರೆ ಅಂಥವರಿಗೆ ಏಜೆಂಟ್ ಗಳು ಬೆದರಿಕೆ ಹಾಕಿ, ಹಿಂಸೆ ಕೊಡುವ ಹಾಗಿಲ್ಲ. ಅವರೊಡನೆ ಸೌಮ್ಯವಾಗಿ ಮಾತನಾಡಿ, ಇಎಂಐ ಕಟ್ಟುವ ಹಾಗೆ ಮಾಡಬೇಕು.
*ಆಸ್ತಿ ಹರಾಜಿಗೆ ಬಂದರೆ, ಮೊದಲಿಗೆ ಸಾಲ ಪಡೆದವರನ್ನು ಕಾಂಟ್ಯಾಕ್ಟ್ ಮಾಡಬೇಕು, ಅವರು ಒಪ್ಪಿಗೆ ಕೊಟ್ಟರೆ ಮಾತ್ರ ಹರಾಜು ಮಾಡಲು ಸಾಧ್ಯವಾಗುತ್ತದೆ. ಸಾಲ ಪಡೆದವರು ಬ್ಯಾಂಕ್ ಮ್ಯಾನೇಜರ್ ಜೊತೆಗೆ ಮಾತನಾಡಿ, ಸಾಲ ಪಾವತಿಗೆ ಸಮಯ ಕೇಳಬಹುದು, ಅಥವಾ ಬೇರೆ ಥರದ ಪರಿಹಾರ ಕೇಳಬಹುದು. ಈ ಮೂಲಕ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.
*ಸಾಲ ಪಡೆದು ಇಎಂಐ ಕಟ್ಟಲು ಸಾಧ್ಯ ಆಗದೇ ಇರುವವರು ಈ ನಿಯಮಗಳನ್ನು ತಿಳಿದುಕೊಂಡರೆ, ಸಾಲ ತೀರಿಸಲು (Loan Re-Payment) ಈ ನಿಯಮಗಳು ಸಹಾಯಕ್ಕೆ ಬರುತ್ತದೆ.
Big update for those who are taking loan in bank and paying EMI
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.