ಅಕಸ್ಮಾತ್ ನಿಮ್ಮ ಕಾರಿಗೆ ಹಸು-ಎಮ್ಮೆ ಗುದ್ದಿದ್ರೆ ಇನ್ಶೂರೆನ್ಸ್ ಕ್ಲೈಮ್ ಆಗುತ್ತಾ? ದುಡ್ಡು ಬರುತ್ತಾ? ಇಲ್ಲಿದೆ ಮಾಹಿತಿ
Car Insurance : ಆಕ್ಸಿಡೆಂಟ್ ಗಳಿಂದ ಆಗಬಹುದಾದ ನಷ್ಟವನ್ನು ತಪ್ಪಿಸಲು, ಇನ್ಷುರೆನ್ಸ್ (Car Insurance) ಮಾಡಿಸಿಕೊಳ್ಳುವುದು ಕೂಡ ಒಳ್ಳೆಯ ಆಯ್ಕೆ ಆಗಿರುತ್ತದೆ. ಆಕ್ಸಿಡೆಂಟ್ ಎಂದರೆ ಇನ್ನೊಂದು ವಾಹನಕ್ಕೆ ಆಗಬೇಕು ಎಂದೇನು ಇಲ್ಲ..
Car Insurance : ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಸಾರ್ವಜನಿಕ ವಾಹನಗಳನ್ನು ಜನರು ಬಳಕೆ ಮಾಡುವುದು ಕಡಿಮೆ ಆಗಿದ್ದು, ಹೆಚ್ಚಿನ ಜನರು ತಮ್ಮ ಕುಟುಂಬದ ಜೊತೆಗೆ ಪ್ರಯಾಣ ಮಾಡಲು, ತಮ್ಮದೇ ಆದ ಸ್ವಂತ ಕಾರ್ ಖರೀದಿ (Buy Own Car) ಮಾಡಬೇಕು ಎಂದು ಬಯಸುತ್ತಾರೆ. ಕಾರ್ ಖರೀದಿ ಜೊತೆಗೆ ಇನ್ಷುರೆನ್ಸ್ ಕೂಡ ಮಾಡಿಸಿರುತ್ತೇವೆ. ಕೆಲವೊಮ್ಮೆ ನಾವು ಎಷ್ಟೇ ಹುಷಾರಾಗಿ ಕಾರ್ ಡ್ರೈವ್ ಮಾಡಿದರೂ ಕೂಡ ಆಕ್ಸಿಡೆಂಟ್ ನಡೆದು ಬಿಡುತ್ತದೆ.
ಕಾರ್ ಗಳಿಗೆ ಸಾಮಾನ್ಯವಾಗಿ ನಾವು ಇನ್ಷುರೆನ್ಸ್ ಅನ್ನು ಕೂಡ ಮಾಡಿಸಿರುತ್ತೇವೆ. ಆದರೆ ಕೆಲವೊಮ್ಮೆ ನಾವು ಇನ್ಷುರೆನ್ಸ್ ಮಾಡಿಸಿದ್ದರು ಕೆಲವು ಘಟನೆಗೆ ಇನ್ಷುರೆನ್ಸ್ ಕ್ಲೇಮ್ ಮಾಡಬಹುದಾ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.
ಹಾಗೆಯೇ ಆಕ್ಸಿಡೆಂಟ್ ಗಳಿಂದ ಆಗಬಹುದಾದ ನಷ್ಟವನ್ನು ತಪ್ಪಿಸಲು, ಇನ್ಷುರೆನ್ಸ್ (Car Insurance) ಮಾಡಿಸಿಕೊಳ್ಳುವುದು ಕೂಡ ಒಳ್ಳೆಯ ಆಯ್ಕೆ ಆಗಿರುತ್ತದೆ. ಆಕ್ಸಿಡೆಂಟ್ ಎಂದರೆ ಇನ್ನೊಂದು ವಾಹನಕ್ಕೆ ಆಗಬೇಕು ಎಂದೇನು ಇಲ್ಲ..
ನೀವು ಬ್ಯಾಂಕಿನಲ್ಲಿ ಇಟ್ಟ ನಿಮ್ಮ ಫಿಕ್ಸೆಡ್ ಹಣಕ್ಕೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಸಿಗುತ್ತೆ ನೋಡಿ!
ರಸ್ತೆಯಲ್ಲಿ ಓಡಾಡುವಾಗ ಹಸು, ಎಮ್ಮೆ, ಗೂಳಿ ಇಂಥ ಪ್ರಾಣಿಗಳು ಓಡಾಡುತ್ತಿರುತ್ತದೆ, ಆಕಸ್ಮಾತ್ ಆಗಿ ಈ ಪ್ರಾಣಿಗಳು ನಿಮ್ಮ ಕಾರ್ ಗೆ ಬಂದು ಗುದ್ದಿದರೆ, ಆಗ ನೀವು ನಷ್ಟ ಪರಿಹಾರ ಮಾಡಿಕೊಳ್ಳುವುದಕ್ಕೆ ಇನ್ಷುರೆನ್ಸ್ ಕ್ಲೇಮ್ ಮಾಡಿಕೊಳ್ಳಬಹುದಾ? ಬೀದಿ ನಾಯಿಗಳ ಓಡಾಟ ಸಾಮಾನ್ಯವಾಗಿ ಇರುತ್ತದೆ, ಇನ್ನು ಹೈವೇ ಗಳಲ್ಲಿ ಕೂಡ ಪ್ರಾಣಿಗಳ ಓಡಾಟ ಕಂಡುಬರುತ್ತದೆ. ಕಾಡುಪ್ರಾಣಿಗಳು ಕೂಡ ಬರುವುದುಂಟು. ಕೆಲವು ಸಾರಿ ಪ್ರಾಣಿಗಳಿಗೆ ಏನು ಆಗದೇ ಇರಲಿ ಎಂದು ಅವುಗಳನ್ನು ಸೇವ್ ಮಾಡಲು ಹೋಗಿ, ಅಪಘಾತ ಸಂಭವಿಸಿದೆ.
ಪ್ರಾಣಿಗಳಿಂದ ಉಂಟಾಗುವ ಹಾನಿಗೆ ನೀವು ಪರಿಹಾರ ಪಡೆಯಲು ಬಯಸುವುದಾದರೆ, ಇಂಥ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ನಿಮಗೆ ಯಾವುದೇ ತೊಂದರೆ ಉಂಟಾಗಬಾರದು ಎನ್ನುವುದಾದರೆ, ಇದಕ್ಕಾಗಿ ನೀವು ಸಮಗ್ರ ವಿಮಾ ಪಾಲಿಸಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ಪ್ರಯಾಣಿಸುವಾಗ, ಯಾವುದಾದರೂ ಕಾಡುಪ್ರಾಣಿ ಕಾರ್ ಗೆ ಅಡ್ಡ ಬಂದು, ಡ್ರೈವರ್ ಆದವರು ಆ ಪ್ರಾಣಿಯನ್ನು ಸೇವ್ ಮಾಡುವುದಕ್ಕೆ ಬ್ರೇಕ್ ಹಾಕಿದಾಗ, ಆ ವೇಳೆ ಅನಿರೀಕ್ಷಿತ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.
ಎಲ್ಲಾ ಲೋನ್ EMI ಸರಿಯಾಗಿ ಕಟ್ಟಿದ್ರೂ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ಯಾ? ಇಲ್ಲಿದೆ ಅದಕ್ಕೆ ಕಾರಣ
ಹಾಗೆಯೇ ಹಳ್ಳಿಕಡೆ, ವ್ಯವಸಾಯದ ಭೂಮಿ ಇರುವ ಕಡೆ ನೀವು ಪ್ರಯಾಣ ಮಾಡುತ್ತಿರುವುದಾದರೆ, ಅಲ್ಲಿ ನೀವು ಹಸು, ಎಮ್ಮೆ, ಎತ್ತು ಇವುಗಳನ್ನು ನೋಡುತ್ತೀರಿ. ಇಂಥ ಸಮಯದಲ್ಲಿ ಕೂಡ ಆಕ್ಸಿಡೆಂಟ್ ಆಗಬಹುದು. ಈ ರೀತಿ ಆದಾಗ ನೀವು ಇನ್ಷುರೆನ್ಸ್ ಕ್ಲೇಮ್ (Insurance Clime) ಮಾಡಬೇಕು ಎಂದರೆ, ಥರ್ಡ್ ಪಾರ್ಟಿ ಇನ್ಷುರೆನ್ಸ್ ಇಂದ ಇದಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಸಮಗ್ರ ವಿಮೆಯನ್ನು ಮಾಡಿಸಿಕೊಂಡರೆ ಮಾತ್ರ, ಪ್ರಾಣಿಗಳಿಂದ ಅಪಘಾತ ಸಂಭವಿಸಿದಾಗ, ವಿಮೆಯ ಸೌಲಭ್ಯ ಪಡೆದುಕೊಳ್ಳಬಹುದು.
An insurance claim if a cow-buffalo accidentally punches your car