ನೀವು ಬ್ಯಾಂಕಿನಲ್ಲಿ ಇಟ್ಟ ನಿಮ್ಮ ಫಿಕ್ಸೆಡ್ ಹಣಕ್ಕೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಸಿಗುತ್ತೆ ನೋಡಿ!

Fixed Deposit : ಸಾಲದ (Loan) ಮೇಲೆ ಹೊರೆ ಹೆಚ್ಚಾಗಬಹುದು. ಪ್ರಸ್ತುತ RBI ಇಂದ ಸಿಕ್ಕಿರುವ ಅಂಶಗಳ ಅನುಸಾರ, ಬ್ಯಾಂಕಿಂಗ್ ವಿಷಯದಲ್ಲಿ ಸಾಲ (Loan) ಪಡೆದರೆ 13.7% ಆಗಿರಲಿದೆ, ಇನ್ನು ಯೋಜನೆಗಳಿಗೆ 10.6% ಆಗಿರಲಿದೆ.

Fixed Deposit : ಇತ್ತೀಚೆಗೆ ನಮ್ಮ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಆ ವೇಳೆ ಅವರಿಗೆ ಒಂದು ವಿಷಯದ ಬಗ್ಗೆ ಆತಂಕ ಶುರುವಾಗಿದ್ದು, ಅದು ಠೇವಣಿ ಕುಸಿತದ ವಿಚಾರ ಆಗಿದೆ.

ಪ್ರಸ್ತುತ ಆಗಿರುವ ಈ ತೊಂದರೆಯನ್ನು ಸರಿಪಡಿಸಲು ಇನ್ನು ಕೆಲವು ಉತ್ತಮವಾದ FD ಯೋಜನೆಗಳನ್ನು ಜಾರಿಗೆ ತರಬೇಕೆಂದು ನಿರ್ಮಲಾ ಸೀತಾರಾಮನ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಜೊತೆಗೆ ಹಣದ ಅವಶ್ಯಕತೆ ಇರುವವರಿಗೆ ಮಾತ್ರ ಸಾಲ ಸೌಲಭ್ಯ ಕೊಡಬೇಕು ಎಂದು ಸಹ ತಿಳಿಸಿದ್ದಾರೆ.

ಸರ್ಕಾರ ಈ ಸೂಚನೆ ಕೊಟ್ಟಿರುವ ಕಾರಣ, ಇದರಿಂದ ಠೇವಣಿಗಳು ಇನ್ನು ಹೆಚ್ಚಾಗಬಹುದು. ಹಾಗೆಯೇ ಜನರಿಗೆ ಹೆಚ್ಚು ಲಾಭ ತರುವಂಥ ಯೋಜನೆಗಳನ್ನು ಸಹ ಜಾರಿಗೆ ತರಬಹುದು. ಹಾಗೆಯೇ ಠೇವಣಿಗಳ ಮೇಲೆ ಬಡ್ಡಿದರ ಕೂಡ ಹೆಚ್ಚಾಗಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

See how much interest you get for your fixed money in the bank

ಆದರೆ ಸಾಲದ (Loan) ಮೇಲೆ ಹೊರೆ ಹೆಚ್ಚಾಗಬಹುದು. ಪ್ರಸ್ತುತ RBI ಇಂದ ಸಿಕ್ಕಿರುವ ಅಂಶಗಳ ಅನುಸಾರ, ಬ್ಯಾಂಕಿಂಗ್ ವಿಷಯದಲ್ಲಿ ಸಾಲ (Loan) ಪಡೆದರೆ 13.7% ಆಗಿರಲಿದೆ, ಇನ್ನು ಯೋಜನೆಗಳಿಗೆ 10.6% ಆಗಿರಲಿದೆ.

ಪ್ರಸ್ತುತ ಬ್ಯಾಂಕ್ ಆಫ್ ಮಹಾರಾಷ್ಟ್ರ, ಫೆಡರಲ್ ಬ್ಯಾಂಕ್ ಹಾಗೂ ಇನ್ನಿತರ ಬ್ಯಾಂಕ್ ಗಳಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದರೆ, FD ಯೋಜನೆಗಳನ್ನು ಸಹ ಶುರು ಮಾಡಲಾಗುತ್ತದೆ.. ಪ್ರಸ್ತುತ ಫೆಡರಲ್ ಬ್ಯಾಂಕ್ ನಲ್ಲಿ FD ಯೋಜನೆಗಳು ಹೇಗಿದೆ ಎಂದು ನೋಡುವುದಾದರೆ, 400 ದಿನಗಳ FD ಯೋಜನೆಗಳ ಮೇಲೆ 7.35% ಬಡ್ಡಿ ಸಿಗುತ್ತದೆ.

ಎಲ್ಲಾ ಲೋನ್ EMI ಸರಿಯಾಗಿ ಕಟ್ಟಿದ್ರೂ ಕ್ರೆಡಿಟ್‌ ಸ್ಕೋರ್ ಕಡಿಮೆಯಾಗಿದ್ಯಾ? ಇಲ್ಲಿದೆ ಅದಕ್ಕೆ ಕಾರಣ

ಇನ್ನು 777 ದಿನಗಳ FD ಯೋಜನೆಗಳ ಮೇಲೆ 7.40% ಬಡ್ಡಿ ಸಿಗುತ್ತದೆ. ಇದಷ್ಟೇ ಅಲ್ಲದೇ 50 ತಿಂಗಳ FD ಯೋಜನೆಗಳ ಮೇಲೆ ಹಿರಿಯ ನಾಗರೀಕರಿಗೆ ಹೆಚ್ಚುವರಿಯಾಗಿ 0.50% ಬಡ್ಡಿ ಸಿಗುತ್ತದೆ..

ಹಾಗೆಯೇ 400 ದಿನಗಳ ಅವಧಿಗೆ 1 ಕೋಟಿಗಿಂತ ಹೆಚ್ಚು ಹಣ FD ಮಾಡಿದರೆ, 7.50% ಬಡ್ಡಿ ಸಿಗುತ್ತದೆ. ಇನ್ನು ಬೇರೆ ಯೋಜನೆಗಳ ಬಗ್ಗೆ ನೋಡುವುದಾದರೆ, 55 ತಿಂಗಳ FD ಯೋಜನೆಗೆ 7.55% ಬಡ್ಡಿದರ ಸಿಗುತ್ತದೆ. ಇನ್ನು RBL ಬ್ಯಾಂಕ್ ನಲ್ಲಿ FD ಯೋಜನೆಗಳ ಮೇಲೆ ಎಷ್ಟು ಬಡ್ಡಿದರ ಸಿಗುತ್ತದೆ ಎಂದು ನೋಡುವುದಾದರೆ, 500 ದಿನಗಳ FD ಯೋಜನೆಯ ಮೇಲೆ 8.10% ಬಡ್ಡಿದರ ಸಿಗುತ್ತದೆ. ಹಾಗೆಯೇ ಇದೇ ಯೋಜನೆಯ ಮೇಲೆ ಹಿರಿಯ ನಾಗರೀಕರಿಗೆ ಹೆಚುವರಿಯಾಗಿ 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಇನ್ನು 777 ದಿನಗಳ FD ಯೋಜನೆಗೆ 7.25% ಬಡ್ಡಿದರ ಸಿಗುತ್ತದೆ.. ಇದಲ್ಲದೇ ತಮಿಳುನಾಡಿಗೆ ಸೇರಿದ ಮಾರ್ಕೆನ್ಟಿಲ್ ಬ್ಯಾಂಕ್ ಬಗ್ಗೆ ಹೇಳುವುದಾದರೆ, 400 ದಿನಗಳ FD ಯೋಜನೆಗಳ ಮೇಲೆ 7.50% ಬಡ್ಡಿದರ ನಿಗದಿ ಆಗಿದೆ. ಇನ್ನು ಬಂಧನ್ ಬ್ಯಾಂಕ್ ನಲ್ಲಿ 21 ತಿಂಗಳುಗಳ FD ಯೋಜನೆಯಲ್ಲಿ 8% ಬಡ್ಡಿದರ ಸಿಗುತ್ತದೆ. ಇದಷ್ಟೇ ಅಲ್ಲದೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಈ ಬ್ಯಾಂಕ್ ಗಳಲ್ಲಿ ಒಳ್ಳೆಯ ಬಡ್ಡಿ ಕೊಡುವ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

See how much interest you get for your fixed money in the bank

Related Stories