Fixed Deposit : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಮ್ಮ ದೇಶದ ಜನರ ನಂಬಿಕೆ ಹಾಗೂ ವಿಶ್ವಾಸ ಗಳಿಸಿರುವ ಸರ್ಕಾರಿ ವಲಯದ ಪ್ರಮುಖ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ನಲ್ಲಿ ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಅವುಗಳ ಪೈಕಿ SBI ನಲ್ಲಿ ಒಳ್ಳೆಯ FD ಯೋಜನೆಗಳು ಒಳಗೊಂಡಿವೆ. ಅಂಥ FD ಯೋಜನೆಗಳ ಪೈಕಿ SBI ಅಮೃತ್ ವೃಷ್ಟಿ ಯೋಜನೆ ಉತ್ತಮವಾದ ಆಯ್ಕೆ ಆಗಿದ್ದು, ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ಇಂದು ತಿಳಿಸಿಕೊಡುತ್ತೇವೆ ನೋಡಿ..
ಅಮೃತ್ ವೃಷ್ಟಿ ಯೋಜನೆ 444 ದಿನಗಳ FD ಯೋಜನೆ ಆಗಿದ್ದು, ಇತ್ತೀಚೆಗೆ ಶುರುವಾದ ಯೋಜನೆ ಇದು. ಈ ಯೋಜನೆಯಲ್ಲಿ ಹೂಡಿಕೆ ಜನರಿಗೆ 7.25% ಬಡ್ಡಿದರ ಸಿಗುತ್ತದೆ. ಇದು ಸಾಮಾನ್ಯ ಜನರಿಗೆ ಸಿಗುವಂಥ ಬಡ್ಡಿದರ ಆಗಿದ್ದು, ಹಿರಿಯ ನಾಗರೀಕರಿಗೆ ಈ ಯೋಜನೆಯಲ್ಲಿ 0.50% ಹೆಚ್ಚು ಬಡ್ಡಿ ಸಿಗುತ್ತದೆ.
ಹೂಡಿಕೆ ಮಾಡುವವರಿಗೆ ಹೆಚ್ಚು ಆದಾಯ ಸಿಗುವುದಕ್ಕಾಗಿ, ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣವನ್ನು ಇಂತಿಷ್ಟು ಅವಧಿಗೆ ಲಾಕ್ ಮಾಡುವ ಆಯ್ಕೆ ಸಹ ಹೊಂದಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡರೆ, SBI ಶಾಖೆಗೆ ಭೇಟಿ ನೀಡಬಹುದು ಅಥವಾ SBI Yono App ಅಥವಾ SBI Yono Lite app ಮೂಲಕ ಹೂಡಿಕೆ ಶುರು ಮಾಡಬಹುದು.
ವಿದ್ಯಾರ್ಥಿಗಳಿಗೆ ಹೊಸ ಸ್ಕಾಲರ್ಶಿಪ್ ಯೋಜನೆ ತಂದ ಕೇಂದ್ರ ಸರ್ಕಾರ! ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
SBI ನಲ್ಲಿ ಶುರು ಆಗಿರುವ ಅಮೃತ್ ವೃಷ್ಟಿ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಕೊನೆಯ ದಿನಾಂಕ ನಿಗದಿ ಆಗಿದ್ದು, ಅದು 2025ರ ಮಾರ್ಚ್ 31 ಆಗಿರುತ್ತದೆ, 2025ರ ಏಪ್ರಿಲ್ 1ರಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.
ಈ ಒಂದು ಒಳ್ಳೆಯ ಯೋಜನೆಯ ಬಗ್ಗೆ SBI ಅಧ್ಯಕ್ಷರಾಗಿರುವ ದಿನೇಶ್ ಖಾರ ಅವರು ಮಾಹಿತಿ ನೀಡಿದ್ದು, ವಿವಿಧ ಗುಂಪಿನ ಜನರಿಗೆ ಅನುಕೂಲ ಆಗಿ, ಅವರಿಗೆ ಒಳ್ಳೆಯ ಲಾಭ ಸಿಗುತ್ತದೆ, ಹೀಗೆ ಲಾಭ ಕೊಡುವಂಥ ಠೇವಣಿಗಳನ್ನು ಜನರಿಗಾಗಿ ಜಾರಿಗೆ ತರಲಾಗುತ್ತಿದೆ. ಅಂಥ ಯೋಜನೆಗಳಲ್ಲಿ ಅಮೃತ್ ವೃಷ್ಟಿ ಯೋಜನೆ ಕೂಡ ಒಂದು ಎಂದಿದ್ದಾರೆ.
ಈ ಒಂದು ಯೋಜನೆಯಲ್ಲಿ ಗ್ರಾಹಕರಿಗೆ ಗರಿಷ್ಠ ಆದಾಯ ಸಿಗುವುದರ ಜೊತೆಗೆ, ಜನರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಮಾಡಿಕೊಳ್ಳಲು ಇದೊಂದು ಒಳ್ಳೆಯ ಮಾರ್ಗ ಆಗಿರುತ್ತದೆ. ಇದಷ್ಟೇ ಅಲ್ಲದೇ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವವರಿಗೆ ಬ್ಯಾಂಕ್ ಮೇಲೆ ಇರುವ ಬದ್ಧತೆಯನ್ನು ಸಹ ತೋರಿಸುತ್ತದೆ. SBI ಬಗ್ಗೆ ನಾವು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಹಲವು ವರ್ಷಗಳಿಂದ ನಮ್ಮ ದೇಶದಲ್ಲಿ ಇರುವ ಬ್ಯಾಂಕ್ ಇದಾಗಿದೆ, ಜನರ ಅವಶ್ಯಕತೆಗಳನ್ನು ಪೂರೈಸಿ, ಒಳ್ಳೆಯ ಸೇವೆಗಳನ್ನು ನೀಡುತ್ತಾ ಬಂದಿದೆ.
ಹೀಗೆ ಜನರಿಗೆ ಹೆಚ್ಚು ಲಾಭ ತಂದುಕೊಡುವ ಸಲುವಾಗಿ, SBI ಹಲವು FD ಹೂಡಿಕೆಯ ಯೋಜನೆಗಳನ್ನು ಸಹ ಜಾರಿಗೆ ತಂದಿದೆ ಎಂದು ಮಾಹಿತಿ ಸಿಕ್ಕಿದೆ. ನಿಮ್ಮ ಬಳಿ ಹೆಚ್ಚು ಹಣ ಇದ್ದಾಗ, ಅದರಿಂದ ಒಳ್ಳೆಯ ಆದಾಯ ಪಡೆಯುವುದಕ್ಕೆ FD ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆ. ಇದರಿಂದ ನಿಮಗೆ ನಿಗದಿತ ಸಮಯಕ್ಕೆ ಒಳ್ಳೆಯ ಬಡ್ಡಿದರ ಹಾಗೂ ಆದಾಯ ಕೂಡ ಸಿಗುತ್ತದೆ. ಇಂಥ ಯೋಜನೆಗಳಲ್ಲಿ SBI ಅಮೃತ್ ವೃಷ್ಟಿ ಯೋಜನೆ ಕೂಡ ಇದ್ದು, ಇದರಲ್ಲಿ ನೀವು ಹೂಡಿಕೆ ಮಾಡಬಹುದು.
FD scheme with the highest interest rate has started in the State Bank
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.